- Home
- Karnataka Districts
- Udupi
- ಮಂಗಳೂರಿನ ಹಿರಿಯ ಮಹಿಳೆಗೆ Adult Content ಮಾತಾಡೋಣ್ವಾ ಎಂದ 20ರ ಹುಡುಗ! ಮುಂದೆ ಆಗಿದ್ದೇ ಬೇರೆ ಕಥೆ!
ಮಂಗಳೂರಿನ ಹಿರಿಯ ಮಹಿಳೆಗೆ Adult Content ಮಾತಾಡೋಣ್ವಾ ಎಂದ 20ರ ಹುಡುಗ! ಮುಂದೆ ಆಗಿದ್ದೇ ಬೇರೆ ಕಥೆ!
20 ವರ್ಷದ ಹುಡುಗನೊಬ್ಬ ಮಹಿಳೆಗೆ ಪರ್ಸನಲ್ ಆಗಿ ಮೆಸೇಜ್ ಮಾಡಿ ಅಡಲ್ಟ್ ವಿಷಯ ಮಾತಾಡೋಣ್ವಾ ಎಂದು ಕೇಳಿದ್ದಾರೆ. ಆಗ ಆ ಮಹಿಳೆ ನೀಡಿದ ಉತ್ತರ ಏನು ಅಂತ ನೀವು ಊಹಿಸೋಕೆ ಆಗದು. ಆಮೇಲೆ ಏನಾಯ್ತು?

ಇಂದು ಸೋಶಿಯಲ್ ಮೀಡಿಯಾ ತುಂಬ ಸ್ಟ್ರಾಂಗ್ ಆಗಿದೆ. ಇದರ ಪ್ರಯೋಜನ ಪಡೆದುಕೊಳ್ಳೋದಕ್ಕಿಂತ ಜಾಸ್ತಿ, ಅನೇಕರು ನೆಗೆಟಿವ್ ಆಗಿ ಬಳಸ್ತಾರೆ, ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ. ಇತ್ತೀಚೆಗೆ ಯುವಕರು ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ಮೆಸೇಜ್ ಕಳಿಸ್ತಾರೆ, ಅಸಭ್ಯ ಮಾತನಾಡ್ತಾರೆ. ಹೀಗೆ ಮಂಗಳೂರಿನ ಮಹಿಳೆಗೆ 20 ವರ್ಷದ ಹುಡುಗ ಅಡಲ್ಟ್ ವಿಚಾರ ಮಾತನಾಡೋಣ ಎಂದಿದ್ದಾನೆ. ಆಗ ಮಹಿಳೆ ನೀಡಿದ ಉತ್ತರಕ್ಕೆ ಬ್ಲಾಕ್ ಮಾಡಿದ್ದಾನೆ. ಈ ಬಗ್ಗೆ ಶಾಂತಿ ರಘುನಾಥ್ ಶೆನೋಯ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ನಿನ್ನೆ ನನಗೆ ಒಬ್ಬ ಯುವ, ಆಕರ್ಷಕ ವ್ಯಕ್ತಿಯಿಂದ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಬಂದಿತು. ಅವನಿಗೆ 20 ವರ್ಷ ಆಗಿತ್ತು. ಇಂತಹ ಯುವಕನಿಗೆ ನಾನು ಯಾಕೆ ಫ್ರೆಂಡ್ ಆಗಬೇಕು ಎಂದು ನನಗೆ ಆಶ್ಚರ್ಯವಾಯ್ತು. ಹಾಗಾಗಿ ನಾನು ಒಪ್ಪಿಕೊಂಡೆ. ಆನಂತರ ಅವನು ಪರ್ಸನಲ್ ಆಗಿ ಮೆಸೇಜ್ ಮಾಡೋಕೆ ಶುರು ಮಾಡಿದ. ಅವನು ನನ್ನನ್ನು ಸುಂದರಿ ಎಂದು ಕರೆದ. ನನ್ನ ವಯಸ್ಸನ್ನು ಕೇಳಿದ.
ನಾನು ಸುಳ್ಳು ಹೇಳುವವಳಲ್ಲ, ಹಾಗಾಗಿ ನನ್ನ ವಯಸ್ಸನ್ನು ಹೇಳಿದೆ, ನಾನು ಅವನಿಗಿಂತ ತುಂಬಾ ಹಿರಿಯ ಎಂದು ನೆನಪಿಸಿದೆ. ಕೆಲವೇ ಸಮಯದಲ್ಲಿ, ಅವನು 'ಅಡಲ್ಟ್ ವಿಷಯಗಳ' ಬಗ್ಗೆ ಮಾತನಾಡಬಹುದೇ ಎಂದು ಕೇಳಿದನು. ನಾನು ಸರಿ ಎಂದೆ. ಆಗ ಅವನು 'ಧನ್ಯವಾದ ಬೇಬ್, ನೀನೇ ಶುರು ಮಾಡು' ಎಂದು ಹೇಳಿದನು.
ಹಾಗಾಗಿ ನಾನು ಶುರು ಮಾಡಿದೆ! ನಾನು ಅವನಿಗೆ ನಿಜವಾದ ಅಡಲ್ಟ್ ವಿಷಯಗಳನ್ನು ಹೇಳಿದೆ. “ನನಗೆ ಪ್ರಿ ಡಯಾಬಿಟಿಕ್ ಇದೆ, ನನಗೆ ಸಿಕ್ಕಾಪಟ್ಟೆ ಸಯಾಟಿಕಾ ನೋವಿದೆ. ಮಾಡುತ್ತದೆ. ದೀರ್ಘಕಾಲ ನಿಂತುಕೊಂಡರೆ ನನ್ನ ಬೆನ್ನು ನೋಯುತ್ತದೆ. ನನಗೆ ತೀವ್ರವಾದ ಹೀಟ್ ಲಕ್ಷಣಗಳಿವೆ. ನನ್ನ ಫ್ಲಾಟುಲೆನ್ಸ್ ಮತ್ತು ಒಡೀಮಾ ಇದೆ. ಕೆಲವೊಮ್ಮೆ ನನಗೆ ತೀವ್ರವಾದ ತುರಿಕೆಯಿದ್ದು, ಎಚ್ಚರ ಆಗುವುದು. ಕೆಲವೊಮ್ಮೆ ಬೆಡ್‌ನಿಂದ ಏಳುವಾಗ ನನ್ನ ಬೆನ್ನು ಕಿರಿಕಿರಿ ಶಬ್ದ ಮಾಡುತ್ತದೆ. ರಾತ್ರಿಯಲ್ಲಿ ನನ್ನ ಕಾಲಿನ ನೋವು ಮತ್ತು ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್ ಕೂಡ ಇದೆ.
ಹೌದು, ನೆರೆಹೊರೆಯವರನ್ನು ಎಚ್ಚರಗೊಳಿಸುವಷ್ಟು ಜೋರಾದ ಗೊರಕೆ, ಹುರಿಕೆ ಬರುವುದು. ಈ ವಿಷಯದಲ್ಲಿ ನಾನು ಸಂಪೂರ್ಣವಾಗಿ ಪ್ರಾಮಾಣಿಕವಾಗಿದ್ದೆ, ಆದರೆ ಅವನು ಏಕೆ ನನ್ನನ್ನು ಬ್ಲಾಕ್ ಮಾಡಿದನೆಂದು ತಿಳಿಯಲಿಲ್ಲ.
ಈ ಪೋಸ್ಟ್ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಇದು ತಮಾಷೆ ಎಂದು ಅನಿಸಿದರೂ ಕೂಡ, ಈ ರೀತಿ ಇರುವ ಹುಡುಗರು ಇದ್ದಾರೆ ಎನ್ನೋದು ಸತ್ಯ. ಇನ್ನೊಂದು ಕಡೆ ಯುವಜನತೆಯ ಆಸಕ್ತಿ ಎಲ್ಲಿಗೆ ಹೋಗ್ತಿದೆ ಎನ್ನುವುದರ ಬಗ್ಗೆಯೂ ಯೋಚನೆ ಮಾಡಬೇಕಿದೆ.