ಒಂದೇ ಕಾಲೇಜು ಒಂದೇ ಕಂಪನಿ; 'ಶ್ರೀರಸ್ತು ಶುಭಮಸ್ತು' ಸಂಧ್ಯಾ ರಿಯಲ್ ಗಂಡ ಇವ್ರೆ ನೋಡಿ!
ಸದಾ ಕಿರಿಕಿರಿ ಮಾಡೋ ಸಂಧ್ಯಾ ರಿಯಲ್ ಲೈಫ್ ಬಗ್ಗೆ ಗೊತ್ತಾ? ಪ್ರೀತಿ ಮದುವೆಯಾಗಿರುವ ಹುಡುಗ ರಕ್ಷಿತ್‌ನ ಮೊದಲು ಭೇಟಿ ಮಾಡಿದ್ದು ಹೀಗೆ....
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಪಾತ್ರದಲ್ಲಿ ಮಿಂಚುತ್ತಿರುವ ದೀಪಾ ಕಟ್ಟೆ ಕಪಲ್ಸ್ ಕಿಚನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನಮ್ಮಿಬ್ಬರ ನಡುವೆ ಪ್ರೀತಿ ಯಾವಾಗ ಆಗಿದ್ದು ಅಂತ ಹೇಳಲು ಒಂದು ದಿನವಲ್ಲ. Jab we met ಸಿನಿಮಾ ರೀತಿ ನಾವು ಆಗಾಗ ಭೇಟಿಯಾಗುತ್ತಿದ್ವಿ ಎಂದು ಕಪಲ್ಸ್ ಕಿಚನ್‌ನಲ್ಲಿ ಮಾತನಾಡಿದ್ದಾರೆ ದೀಪಾ.
ನಾವಿಬ್ಬರು ಒಟ್ಟಿಗೆ ಕೋರ್ಸ್ ಮಾಡುತ್ತಿದ್ದ ಜಾಗದಲ್ಲಿ ಮೊದಲು ಭೇಟಿ ಆಗಿದ್ದು. 350 ಮಂದಿಯನ್ನು ನಾಲ್ಕು ನಾಲ್ಕು ಜನ ಇರುವ ತಂಡ ರಚಿಸುತ್ತಾರೆ ಅಲ್ಲೂ ಒಂದೇ ತಂಡ' ಎಂದು ಪತಿಯನ್ನು ಹೇಗೆ ಭೇಟಿ ಮಾಡಿದ್ದು ಎಂದು ರಿವೀಲ್ ಮಾಡಿದ್ದಾರೆ.
ಡೆಸ್ಟಿನಿ ನಮ್ಮನ್ನು ಹೇಗೆ ಒಂದು ಮಾಡಿತ್ತು ಅಂದ್ರೆ ನಮಗೆ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು..ಅಲ್ಲೂ ಕೂಡ ನಾವಿಬ್ಬರೂ ಒಂದೇ ಕಂಪಿಯಲ್ಲಿ ಇದ್ವಿ.
ಕಾಲೇಜ್ ಮಾಡುವ ಪ್ಲೇಸ್ಟ್‌ಮೆಂಟ್‌ನಲ್ಲಿ 350 ಜನರಲ್ಲಿ 9 ಜನಕ್ಕೆ ಆ ಕಂಪನಿಯಲ್ಲಿ ಕೆಲಸ ಸಿಕ್ಕಿದೆ...ಆ 9ರಲ್ಲಿ ನಾವಿಬ್ಬರೂ ಇದ್ವಿ.
9 ಜನರಲ್ಲಿ ನನ್ನ ಗಂಡ ಒಬ್ರೆ ಹುಡುಗ, 8 ಜನ ಹುಡುಗಿಯರು. ಕೆಲಸ ಮಾಡುವ ಜಾಗದಲ್ಲಿ ಪ್ರಾಜೆಕ್ಟ್ ಬಂತು ಅಲ್ಲೂ ಕೂಡ ನಾವು ಒಂದೇ ತಂಡದಲ್ಲಿ ಇದ್ವಿ.
ನಾವು ಏನೂ ಪ್ಲ್ಯಾನ್ ಮಾಡಿಕೊಂಡಿರಲಿಲ್ಲ ಹಣೆಬರಹ ನಮ್ಮನ್ನು ಒಂದು ಜಾಗಕ್ಕೆ ಕರೆದುಕೊಂಡು ಬರುತ್ತಿತ್ತು. ನಾನು ನಾಟಕ ತಂಡದಲ್ಲಿಇದ್ದೆ...
ಒಂದು ದಿನ ನನ್ನ ನಾಟಕ ನೋಡಲು ತಂದೆ ತಾಯಿ ಮತ್ತು ಇವ್ರು ಬಂದಿದ್ರು...ಅಲ್ಲಿಗೆ ರಕ್ಷಿತ್ ಕೂಡ ಬಂದಿದ್ರು. ಅಲ್ಲಿ ಇವರನ್ನು ನೋಡಿ ಇಷ್ಟ ಪಟ್ಟರು.
ನಾಟಕ ಜರ್ನಿ ಶುರು ಮಾಡುವಷ್ಟರಲ್ಲಿ ನಾವು ಸ್ನೇಹಿತರಿಂದ ಕ್ಲೋಸ್ ಫ್ರೆಂಡ್ಸ್ ಆಗಿ ಪರ್ಸನಲ್ ವಿಚಾರಗಳನ್ನು ಶೇರ್ ಮಾಡುತ್ತಿದ್ವಿ ಎಂದು ದೀಪಾ ಹೇಳಿದ್ದಾರೆ.