- Home
- Entertainment
- TV Talk
- ಸೀರಿಯಲ್‌ನಲ್ಲಿ ಅಣ್ಣ-ತಂಗಿ ಆಗಿದ್ದವರು ರಿಯಲ್ ಲೈಫ್‌ನಲ್ಲಿ ಗಂಡ- ಹೆಂಡ್ತಿ; ಪೂರ್ಣಿ ನಿಜವಾದ ಗಂಡ ಇವ್ರೆ!
ಸೀರಿಯಲ್‌ನಲ್ಲಿ ಅಣ್ಣ-ತಂಗಿ ಆಗಿದ್ದವರು ರಿಯಲ್ ಲೈಫ್‌ನಲ್ಲಿ ಗಂಡ- ಹೆಂಡ್ತಿ; ಪೂರ್ಣಿ ನಿಜವಾದ ಗಂಡ ಇವ್ರೆ!
ಅಬ್ಬಬ್ಬಾ! ಈ ಕಿರುತೆರೆ ಜೋಡಿ ಲವ್ ಸ್ಟೋರಿ ಕೇಳಿಬಿಟ್ಟರೆ ನೀವು ಶಾಕ್ ಆಗ್ತೀರಾ...ಇವ್ರು ಆನ್‌ಸ್ಕ್ರೀನ್ ಅಣ್ಣ ತಂಗಿ ಅಂತ ಕಣ್ರೀ.....

ಕಿರುತೆರೆ ಜನಪ್ರಿಯ 'ರಾಜಾ ರಾಣಿ' ಧಾರಾವಾಹಿಯಲ್ಲಿ ಅಣ್ಣ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಲಾವಣ್ಯಾ ಭಾರದ್ವಾಜ್ ಹಾಗೂ ಶಶಿ ಹೆಗಡೆ ಮೊದಲು ಭೇಟಿ ಆಗಿದ್ದು ಅಲ್ಲೇ.
ಹೀಗಾಗಿ ಪತಿಯನ್ನು ಆಗ ಬ್ರೋ (ಅಣ್ಣ) ಎಂದು ಕರೆದಿದ್ದು ಇದೆ. ಬ್ರೋ ಅಂತ ಕರೆಯಬಾರದು ಎಂದು ಶಶಿ ರಿಕ್ವೆಸ್ಟ್ ಮಾಡಿದ್ದಕ್ಕೆ ಲಾವಣ್ಯ ಸುಮ್ಮನಾಗಿದ್ದಾರೆ.
ಈ ನಡುವೆ ಶೂಟಿಂಗ್‌ನಲ್ಲಿ ಶಶಿ ಮತ್ತು ಲಾವಣ್ಯ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಸ್ನೇಹಿತರ ಜೊತೆ ಟ್ರಿಪ್ ಮಾಡಿಕೊಂಡು ಲೈಫ್ ಎಂಜಾಯ್ ಮಾಡಿದ್ದಾರೆ.
ಸುಮಾರು 6 ತಿಂಗಳ ಕಾಲ ಲಾವಣ್ಯ ವ್ಯಕ್ತಿತ್ವ ಗುಣವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ಶಶಿ ಒಂದು ದಿನ ಪ್ರಪೋಸ್ ಮಾಡೇ ಬಿಟ್ಟರಂತೆ.
ಇಷ್ಟರಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದರು. ಏನೂ ಉತ್ತರ ಕೊಡದೆ ಸುಮ್ಮನಾದ ಲಾವಣ್ಯರನ್ನು ನೋಡಿ ಸ್ವತ ಶಶಿನೇ ನೇರವಾಗಿ ಲಾವಣ್ಯ ಕುಟುಂಬದವರ ಜೊತೆ ಮಾತನಾಡಿದ್ದಾರೆ.
ಎರಡೂ ಮನೆಯಲ್ಲಿ ಒಪ್ಪಿಗೆ ಪಡೆದ ಇಬ್ಬರು ಖುಷಿ ಖುಷಿಯಾಗಿ ಮದುವೆಯಾಗಿದ್ದಾರೆ. ಇಬ್ಬರಯ ಯುಟ್ಯೂಬ್ ಚಾನೆಲ್ ಹೊಂದಿದ್ದಾರೆ.
ವಿಡಿಯೋಗಳಲ್ಲಿ ಹೇಳುವ ಪ್ರಕಾರ ಲಾವಣ್ಯ ಪೂಜೆ ಭಯ ಭಕ್ತಿ ಅಂತ ಇರ್ತಾರಂತೆ ಆದರೆ ಶಶಿ ಸ್ವಲ್ಪ ರೆಬೆಲ್ ವ್ಯಕ್ತಿನೇ. ದೇವರನ್ನು ಕಂಡರೆ ಇಬ್ಬರಿಗೂ ಪ್ರೀತಿ ಇದೆ.