ಸೀತಾರಾಮ ಸೀರಿಯಲ್ ಸಿಹಿ ಕನ್ನಡತಿ ಅಲ್ಲ ನೇಪಾಳದ ಹುಡಗಿ; ಅವಕಾಶ ಸಿಕ್ಕಿದ್ದು ಹೀಗೆ!
ಅಬ್ಬಬ್ಬಾ! ಮಾತಿನ ಮಲ್ಲಿ ಸಿಹಿ 'ಸೀತಾರಾಮ' ಧಾರಾವಾಹಿಗೆ ಆಯ್ಕೆ ಆಗಿದ್ದು ಹೇಗೆ? ಇಲ್ಲಿದೆ ನೋಡಿ ನೇಪಾಳಿ ಹುಡುಗಿ ಸ್ಟೋರಿ....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಪುಟ್ಟಾಣಿ ಪಾತ್ರದಲ್ಲಿ ಮಿಂಚುತ್ತಿರುವ ಸಹಿ ಯಾರು ಗೊತ್ತಾ?
ಸಹಿ ಉರ್ಫ್ ರಿತು ಸಿಂಗ್ ಇಲ್ಲಿಯವಳಲ್ಲ ಬದಲಿಗೆ ನೇಪಾಳದವರು. ಇವರ ಫ್ಯಾಮಿಲಿ ಈಗ ಬೆಂಗಳೂರಿನಲ್ಲಿ ವಾಸವಿದ್ದಾರೆ ಆದರೆ ಮೂಲ ಮನೆ ಇರುವುದು ನೇಪಾಳದಲ್ಲಿ.
ಈ ಹಿಂದೆ ಜೀ ಕನ್ನಡ ವಾಹಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿದ್ದರು. ಹೀಗಾಗಿ ಸೀರಿಯಲ್‌ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ರಿತು ಸಿಂಗ್ ಇನ್ನೂ 5 ವರ್ಷ ತುಂಬದ ಪುಟ್ಟ ಹುಡುಗಿ. ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಅಲ್ಲದೆ ಸಾಕಷ್ಟು ಫ್ಯಾನ್ ಪೇಜ್ ಕ್ರಿಯೇಟ್ ಆಗಿದೆ.
ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಈಕೆಯ ಪರ್ಫಾಮೆನ್ಸ್ ನೋಡಿ ಈಕೆಗೆ ಸೀತಾರಾಮದಲ್ಲಿ ಸಿಹಿ ಪಾತ್ರ ಸಿಕ್ಕಿದೆ ಎನ್ನುವುದು ಬಲ್ಲ ಮೂಲಗಳಿಂದ ತಿಳಿದ ಮಾಹಿತಿ. ಆದರೆ ಸಿಕ್ಕ ಅವಕಾಶವನ್ನು ಮಾತ್ರ ಈ ಪುಟಾಣಿ ಚೆನ್ನಾಗಿ ಬಳಸಿಕೊಂಡಿದ್ದಾಳೆ.
ದಿನದಿಂದ ದಿನಕ್ಕೆ ಸಿಹಿ ಪಾತ್ರ ಅದ್ಭುತವಾಗಿ ಮೂಡಿ ಬರುತ್ತಿದೆ. ಅಲ್ಲದೆ ಸಿಹಿ ಮತ್ತು ರಾಮ್ ಕ್ಲೋಸ್ ಆಗಿರುವ ಸೀನ್‌ಗಳು ಎಲ್ಲರಿಗೂ ಇಷ್ಟವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.