ಅರ್ಜೆಂಟಲ್ಲಿ ಮದುವೆ ಮಾಡಿಕೊಂಡೆ, ಕೇವಲ 32 ಜನ ಮಾತ್ರ ಇದ್ರು: ಸತ್ಯ ಸೀರಿಯಲ್ ಮಾಲತಿ ಬೇಸರ
ಗಡಿಬಿಡಿಯಲ್ಲಿ ಮದುವೆ ಮಾಡಿಕೊಂಡ ಮಾಲತಿ....ತಂದೆಗೆ ಫೋನ್ ಮಾಡಿ ಮಗಳ ಮದುವೆಗೆ ಬನ್ನಿ ಎಂದ ಯಶ್ವಂತ್.
ಕನ್ನಡ ಕಿರುತೆರೆಯ ಅದ್ಭುತ ನಟಿ ಮಾಲತಿ ಶ್ರೀದೇಶಪಾಂಡೆ ಮತ್ತು ಪತಿ ಯಶ್ವಂತ್ ಮದುವೆ ಕಥೆ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಗಡಿಬಿಡಿಯಲ್ಲಿ ಮದುವೆಯಾದ ಘಟನೆಯನ್ನು ಜೋಡಿ ನಂ 1 ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದರು.
ನಮ್ಮ ಮದುವೆ ಅವಸರದಲ್ಲಿ ನಡೆಯಿತ್ತು. ಮುನವಳ್ಳಿ ಗ್ರಾಮದಲ್ಲಿ ನಾವು ಮದುವೆಯಾದದ್ದು. ಸುಮಾರು 32 ಮಂದಿ ಮಾತ್ರವಿದ್ದರು. ಇವತ್ತು ಮದುವೆಗಳಲ್ಲಿ ಎಷ್ಟು ಜನರಿರುತ್ತಾರೆ ನೋಡಿ.
ನಮ್ಮ ಮದುವೆಯಲ್ಲಿ ನಾನು ರೆಡಿಯಾಗಿರಲಿಲ್ಲ ಏಕೆಂದರೆ ಯಶವಂತ ಸರದೇಶಪಾಂಡೆ ಭಯಂಕರ ಅರ್ಜೆಂಟ್ ಮಾಡಿಬಿಟ್ಟರು. ಮದುವೆ ಮಾಡಿಕೊಂಡು ಕರ್ಕೊಂಡು ಹೋಗಿಬಿಡಬೇಕು ಎಂದು.
ಮದುವೆಯಲ್ಲಿ ಚೆನ್ನಾಗಿ ರೆಡಿಯಾಗಬೇಕು ಅನ್ನೋ ಆಸೆ ಎಲ್ಲಾ ಹೆಣ್ಣು ಮಕ್ಕಳಿಗೂ ಇರುತ್ತದೆ ಅದೇ ರೀತಿ ನನಗೂ ಆಸೆ ಇತ್ತು. ಆದರೆ ಇವರ ಅರ್ಜೆನ್ಸಿಯಿಂದಾಗಿ ನಮಗೆ ರೆಡಿಯಾಗಲು ಸಮಯವೇ ಸಿಗಲಿಲ್ಲ.
ಇದ್ದು ನಾಲ್ಕು ದಿನಗಳಲ್ಲಿ ತಂದೆಯನ್ನು ಕರೆಯಿಸಬೇಕಿತ್ತು. ಇವರೇ ಫೋನ್ ಮಾಡಿ ಮಗಳ ಮದುವೆ ಇದೆ ಬನ್ನಿ ಅಂತ ಕರೆದರು' ಎಂದು ಮಾಲತಿ ಹೇಳಿದ್ದಾರೆ.
ನನ್ನ ಮದುವೆಯಲ್ಲಿ ಮೆಹೇಂದಿ ಹಾಕಿಕೊಂಡಿರಲಿಲ್ಲ. ಯಾಕಂದ್ರೆ ಆಗ ಟೈಮ್ ಇರಲಿಲ್ಲ. ಅದು ಒಂದೇ ಬ್ಲೌಸ್ ಹಾಕಿಕೊಂಡು ಸುಮಾರು ಮೂರ್ನಾಲ್ಕು ಸೇರೆಯುಟ್ಟುಕೊಂಡಿದ್ದೆ.
ಮದುವೆಗೆ ಬನ್ನಿ ಅಂತ ಯಾರಿಗೂ ಕರೆಯೋಕೆ ಆಗಲಿಲ್ಲ ಅವಕಾಶ ಇರಲಿಲ್ಲ. ನಾವು ಮದುವೆ ಕಾರ್ಡ್ ಹೇಗೆ ಮಾಡಿಸಿದ್ವಿ ಅಂದ್ರೆ ನಾನು ಮಾಲತಿ ಮದುವೆಯಾಗುತ್ತಿದ್ದೇವೆ ಬನ್ನಿ ಅಷ್ಟೆ ಬರೆಯಿಸಿದ್ದರು ಎಂದು ಮಾಲತಿ ಹೇಳಿದ್ದಾರೆ.