- Home
- Entertainment
- TV Talk
- ನನಗೆ ಗೊತ್ತಿಲ್ಲದೆ ನನ್ನ ಪಾತ್ರ ಬದಲಾಯಿಸಿದ್ದಾರೆ; ಕಮಲಿ ಧಾರಾವಾಹಿಯಿಂದ ಹೊರ ಬಂದ ಸಪ್ನಾ ದೀಕ್ಷಿತ್
ನನಗೆ ಗೊತ್ತಿಲ್ಲದೆ ನನ್ನ ಪಾತ್ರ ಬದಲಾಯಿಸಿದ್ದಾರೆ; ಕಮಲಿ ಧಾರಾವಾಹಿಯಿಂದ ಹೊರ ಬಂದ ಸಪ್ನಾ ದೀಕ್ಷಿತ್
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಧಾರಾವಾಹಿಯಿಂದ ಹೊರ ಬಂದಿರುವುದಕ್ಕೆ ಕಾರಣ ತಿಳಿಸಿದ ನಟಿ ಸಪ್ನಾ ದೀಕ್ಷಿತ್.

ಜೀ ಕನ್ನಡ ವಾಹಿನಿಯಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಕಮಲಿ ಧಾರಾವಾಹಿಯಿಂದ ನಟಿ ಸಪ್ನಾ ದೀಕ್ಷಿತ್ ಹೊರ ನಡೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಸಪ್ನಾ ದೀಕ್ಷಿತ್ ವಿಡಿಯೋ ಹಂಚಿಕೊಳ್ಳುವ ಮೂಲಕ ಧಾರಾವಾಹಿಯಿಂದ ಹೊರ ಬರಲು ಕಾರಣವೇನು ಎಂದು ತಿಳಿಸಿದ್ದಾರೆ.
'ಇನ್ನು ಮುಂದೆ ಕಮಲಿ ಧಾರಾವಾಹಿಯಲ್ಲಿ ತಾರಾ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ. ನಾನು ಯಾಕೆ ಕಾಣಿಸಿಕೊಳ್ಳುವುದಿಲ್ಲ ಅಂದ್ರೆ ನನಗೆ ಗೊತ್ತಿಲ್ಲದೆ, ವಿಷಯ ನನ್ನ ಗಮನಕ್ಕೆ ಬಾರದೆ ಬದಲಾವಣೆ ಮಾಡಲಾಗಿದೆ'
'ಧಾರಾವಾಹಿಯಲ್ಲಿ ನನ್ನ ಪಾತ್ರದ ಬದಲಾವಣೆ ಆಗಿದೆ ಅಂತ ನಾನು ಕೇಳ್ಪಟ್ಟೆ. ಬೇರೆ ಯಾರೋ ನನ್ನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಅಂತನೂ ಕೇಳ್ಪಟ್ಟೆ'
'ನಿಜವಾಗಲೂ ನನಗೆ ಬೇಜಾರ್ ಆಗಿದೆ. ಈ ವಿಷಯ ನಿಮಗೆ ನಾನೇ ಮೊದಲು ತಿಳಿಸಬೇಕು ಅಂದುಕೊಂಡೆ ಏಕೆಂದರೆ ಈ ಪಾತ್ರದ ಮೂಲಕ ನೀವೆಲ್ಲರು ನನಗೆ ಬಹಳಷ್ಟು ಪ್ರೀತಿ ಕೊಟ್ಟಿದ್ದೀರಿ'
'ನಿಮಗೆ ತಿಳಿಸುವುದು ನನ್ನ ಜವಾಬ್ದಾರಿ. ನನ್ನ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಿ ಪಡಿಸಿರುವ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದಿದ್ದಾರೆ.
ಈ ಹಿಂದೆ ಕಮಲಿ ಧಾರಾವಾಹಿಯಿಂದ ನಟ ಮಿಥುನ್ ತೇಜಸ್ವಿ (Mithun Tejaswi) ಕೂಡ ಹೊರ ಬಂದಿದ್ದರು. ವೈಯಕ್ತಿಕ ಕಾರಣ ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.