10 ವರ್ಷಗಳ ನಂತರ 'ಲಕ್ಷ್ಮಿ ನಿವಾಸ'ಕ್ಕೆ ಕಾಲಿಟ್ಟ ದಿಶಾ ಮದನ್; ಎರಡು ಮಕ್ಕಳ ತಾಯಿ ಅಂದ್ರೆ ಯಾರೂ ನಂಬಲ್ಲ!
ಮತ್ತೆ ಕಿರುತೆರೆ ಕಮ್ ಬ್ಯಾಕ್ ಮಾಡಿದ ದಿಶಾ ಮದನ್. ಸಂತೂರ್ ಮಮ್ಮಿ ಮೇಲೆ ನೆಟ್ಟಿಗರ ಕಣ್ಣು.....
ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲಿ ಪ್ರಸಾರವಾಗುತ್ತಿದೆ ಲಕ್ಷ್ಮಿ ನಿವಾಸ ಧಾರಾವಾಹಿ. ಭಾವನ ಪಾತ್ರದಲ್ಲಿ ವಚನ ಉರ್ಫ್ ದಿಶಾ ಮದನ್ ಕಾಣಿಸಿಕೊಳ್ಳಲಿದ್ದಾರೆ.
ಕುಲವಧು ಧಾರಾವಾಹಿಯಲ್ಲಿ ದಿಶಾ ಮದನ್ ಖಡಕ್ ವಿಲನ್ ವಚನಾ ಪಾತ್ರ ಮಾಡಿ ಸಾಕಷ್ಟು ಜನಪ್ರಿಯತೆ ಪಡೆದರು ಆನಂತರ ರಿಯಾಲಿಟಿ ಶೋಗೆ ಕಾಲಿಟ್ಟರು.
ಈಗ 10 ವರ್ಷಗಳ ನಂತರ ಮತ್ತೊಮ್ಮೆ ಕಿರುತೆರೆಗೆ ಕಾಲಿಡುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ ದಿಶಾ.
10 ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಮೊದಲ ಸಲ ನಟಿಸುವುದಕ್ಕೆ ಶುರು ಮಾಡಿದೆ. ಆಗ ಕೊಟ್ಟ ಪ್ರೀತಿ ಇದುವರೆಗೂ ಇಲ್ಲಿಯವರೆಗೂ ನನ್ನನ್ನು ಕರೆದುಕೊಂಡು ಬಂದಿದೆ.
ಇವತ್ತಿಗೂ ಎಲ್ಲರೂ ನನ್ನನ್ನು ಕುಲವಧು ಧಾರಾವಾಹಿಯ ವಚನಾ ಎಂದು ಗುರುತಿಸುತ್ತಾರೆ. ದಶಕಗಳ ನಂತರ ಮತ್ತೆ ಸ್ಕ್ರೀನ್ ಮೇಲೆ ಪ್ರತಿ ದಿನ ಬರಲು ರೆಡಿಯಾಗಿರುವೆ.
ಭಾವನಾ ಪಾತ್ರದಲ್ಲಿ ಬರುತ್ತಿರುವೆ. ಖುಷಿ ಮತ್ತು ಭಯ ಎರಡೂ ಆಗುತ್ತಿದೆ. ಪ್ರಸಾರ ಆರಂಭವಾದ ಮೇಲೆ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳಲು ಕಾಯುತ್ತಿರುವೆ ಎಂದು ದಿಶಾ ಬರೆದುಕೊಂಡಿದ್ದಾರೆ.
ಕುಲವಧು ಧಾರಾವಾಹಿ ನಂತರ ಡ್ಯಾನ್ಸಿಂಗ್ ಸ್ಟಾರ್‌ನ ವಿನ್ನರ್ ಆದ ದಿಶಾ ಮದನ್. ಉದ್ಯಮಿ ಶಶಾಂಕ್‌ರನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪುತ್ರ ವಿಹಾನ್ ಮತ್ತು ಪುತ್ರಿ ಅವೀರಾ.
Disha Madan Lakshmi Nivasa Zee Kannad
ಇಬ್ಬರು ಮಕ್ಕಳು ಹುಟ್ಟಿದ ಮೇಲೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಆಗಾಗ ಟಿವಿಯಲ್ಲಿ ನಡೆಯುವ ಅವಾರ್ಡ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಈ ನಡುವೆ ಹಂಬಲ್ ಪೊಲಿಟೀಷಿಯನ್ ನೋಗರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ ಹಾಗೂ ಫ್ರೆಂಚ್ ಬಿರಿಯಾನಿ ಓಟಿಟಿ ಸಿನಿಮಾದಲ್ಲೂ ನಟಿಸಿದ್ದಾರೆ. ಆನ್‌ಲೈನ್ ಜಾಹೀರಾತುಗಳಲ್ಲಿ ಭಾಗಿಯಾಗುತ್ತಾರೆ.