ಇನ್‌ಸ್ಟಾಗ್ರಾಂನಲ್ಲಿ ಅರಳಿದ ಪ್ರೀತಿ; 'ಲಕ್ಷ್ಮಿ ನಿವಾಸ' ಭಾವನಾ ರಿಯಲ್ ಗಂಡ ಇವ್ರೆ!
ಭಾವನಾ ನಟನೆ ಮೆಚ್ಚಿಕೊಂಡ ಕಿರುತೆರೆ ವೀಕ್ಷಕರು. ದಿಶಾ ಮದನ್ ರಿಯಲ್ ಲೈಫ್ ಲವ್ ಸ್ಟೋರಿ ಗೊತ್ತಾ??

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಭಾವನಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಸೋಷಿಯಲ್ ಮೀಡಿಯಾ ಸ್ಟಾರ್ ದಿಶಾ ಮದನ್.
ಸೋಷಿಯಲ್ ಮೀಡಿಯಾದಲ್ಲಿ ದಿಶಾ ಅಪ್ಲೋಡ್ ಮಾಡುತ್ತಿದ್ದ ವಿಡಿಯೋಗಳನ್ನು ನೋಡಿ ಪತಿ ಶಶಾಂತ್ ಮೆಸೇಜ್ ಮಾಡಿದ್ದರಂತೆ. ಅದಕ್ಕೆ ದಿಶಾ ಕೂಡ ರಿಪ್ಲೈ ಮಾಡಿದ್ದಾರೆ.
ಶಶಾಂಕ್ ಸರಿಯಾದ ರೀತಿಯಲ್ಲಿ ಮೆಸೇಜ್ ಮಾಡಿದ್ದರು ಹಾಗೂ ಯಾವುದೇ ತಪ್ಪು ಇರಲಿಲ್ಲ ಹೀಗಾಗಿ ದಿಶಾ ಪ್ರತಿಕ್ರಿಯೆ ಕೊಟ್ಟು ಸ್ನೇಹ ಮುಂದುವರೆಸಿದ್ದರಂತೆ.
ನಮ್ಮಿಬ್ಬರ ನಡುವೆ ಸಾಕಷ್ಟು ವಿಚಾರಗಳಲ್ಲಿ ಹೊಂದಾಣಿಕೆ ಇದೆ. ಪ್ರಮುಖವಾಗಿ ಐಯ್ಯಂಗಾರಿ ಬ್ಯಾಗ್ರೌಂಡ್ ಎಂದು ದಿಶಾ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ದಿಶಾ ಮದುವೆ ಮಾಡಲು ತಾಯಿ ಯೋಚನೆ ಮಾಡಿದಾಗ ಐಯ್ಯಂಗಾರಿ ಫ್ಯಾಮಿಲಿ ಹುಡುಗನ ಫೋಟೋ ಬಂದಿತ್ತಂತೆ. ವಿಧಿ ಅದು ಶಶಾಂಕ್ ಫೋಟೋ ಆಗಿತ್ತಂತೆ.
ಶಶಾಂಕ್ ಯಾರೆಂದು ಗೊತ್ತಿದ್ದರೂ ಗೊತ್ತಿಲ್ಲದಂತೆ ವರ್ತಿಸಿದ ದಿಶಾ ಕೆಲವು ವರ್ಷಗಳ ನಂತರ ಫ್ಯಾಮಿಲಿ ಮುಂದೆ ಪ್ರೀತಿ ರಿವೀಲ್ ಮಾಡಿ 2017ರಲ್ಲಿ ಮದುವೆ ಮಾಡಿಕೊಂಡರು.
ದಿಶಾ ಒಬ್ಬಳೆ ಮಗಳಾಗಿರುವ ಕಾರಣ ಮದುವೆ ಮಾಡಿಕೊಂಡು ಬೆಂಗಳೂರಿನಲ್ಲಿ ಸೆಟ್ ಆಗಬೇಕು ಅನ್ನೋ ಯೋಚನೆಯಲ್ಲಿದ್ದರು. ಇದಕ್ಕೆ ಶಶಾಂಕ್ ಸಾಥ್ ಕೊಟ್ಟು ಒಪ್ಪಿಕೊಂಡಿದ್ದಾರೆ.
'ದಿಶಾ ನಿಜಕ್ಕೂ ಬಾಸ್ ಮಹಿಳೆ. ಮನಸ್ಸಿನಲ್ಲಿ ಏನೇ ಇದ್ದರೂ ನೇರವಾಗಿ ಹೇಳುತ್ತಾಳೆ. ನಮ್ಮ ಸುತ್ತ ಏನೇ ನಡೆಯುತ್ತಿದ್ದರು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾಳೆ' ಎಂದು ಶಶಾಂಕ್ ಹೇಳಿದ್ದಾರೆ.