- Home
- Entertainment
- TV Talk
- ಬಾಯಿ ತುಂಬಾ ಕೇಕ್ ತುಂಬಿಕೊಂಡಿದ್ದೆ; 'ಲಕ್ಷ್ಮಿ ನಿವಾಸ' ಸೆಟ್‌ನಲ್ಲಿ ಭಾವನಾ ಹುಟ್ಟುಹಬ್ಬ!
ಬಾಯಿ ತುಂಬಾ ಕೇಕ್ ತುಂಬಿಕೊಂಡಿದ್ದೆ; 'ಲಕ್ಷ್ಮಿ ನಿವಾಸ' ಸೆಟ್‌ನಲ್ಲಿ ಭಾವನಾ ಹುಟ್ಟುಹಬ್ಬ!
ಲಕ್ಷ್ಮಿ ನಿವಾಸ ಸೆಟ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಭಾವನಾ. ನೆಚ್ಚಿಗೆ ನಟಿಗೆ ಹರಿದು ಬಂತು ಸಾವಿರಾರೂ ವಿಶ್‌ಗಳು.....

ಕನ್ನಡ ಕಿರುತೆರೆ, ಹಿರಿತೆರೆ, ವೆಬ್ ಸೀರೀಸ್, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರುವ ದಿಶಾ ಮದನ್ ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ಮಿಂಚುತ್ತಿರುವ ಈ ನಟಿ ಸೆಟ್‌ನಲ್ಲಿ ಬರ್ತಡೇ ಮಾಡಿಕೊಂಡಿದ್ದಾರೆ.
ಒಂದು ವರ್ಷ ಹೆಚ್ಚಾಗುತ್ತಿದ್ದಂತೆ ಕಳೆದ ವರ್ಷ ಹೇಗಿತ್ತು ಅನ್ನೋ ಯೋಚನೆ ಬರುತ್ತದೆ. ನನಗೆ ಸಿಗುತ್ತಿರುವ ಅನುಭವಗಳ ಬಗ್ಗೆ ತುಂಬಾ ಖುಷಿ ಇದೆ ಎಂದು ದಿಶಾ ಬರೆದುಕೊಂಡಿದ್ದಾರೆ.
ನನ್ನ ಅಸಿಸ್ಟೆಂಟ್ ಬಾಲಾಜಿ ಮತ್ತು ಸೆಟ್‌ನಲ್ಲಿ ಇರುವ ಪ್ರತಿಯೊಬ್ಬ ಹುಡುಗರು ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.ತುಂಬಾ ಥ್ಯಾಂಕ್ಸ್.
ಕೇಕ್ ಕಟ್ ಮಾಡಿದ ನಂತರ ನನ್ನ ಬಾಯಿ ತುಂಬಾ ಕೇಕ್ ತುಂಬಿಕೊಂಡಿದ್ದೆ. ಅಂದು ನನ್ನ ಮನಸ್ಸು ತುಂಬಾ ಪ್ರೀತಿ ತುಂಬಿಕೊಂಡಿತ್ತು, ಕಣ್ಣೀರು ತಡೆದುಕೊಂಡೆ.
ಕಳೆದ ವರ್ಷದಿಂದ ಈ ವರ್ಷದ ವರೆಗೂ ನನ್ನ ಜೀವನ ಅದ್ಭುತ ಮಾಡಿದ್ದಕ್ಕೆ ತುಂಬಾ ಜನರಿಗೆ ನಾನು ವಂದನೆಗಳನ್ನು ಹೇಳಬೇಕು ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.