ಗರ್ಭಿಣಿ ಅಂತೀರಾ ಹೊಟ್ಟೆನೇ ಕಾಣಿಸ್ತಿಲ್ಲ; 'ಜೊತೆ ಜೊತೆಯಲಿ' ಅನು ಸಿರಿಮನೆ ಮೇಲೆ ನೆಟ್ಟಿಗರ ಕಣ್ಣು
ಡಿಸೈನರ್ ಸೀರೆಯಲ್ಲಿ ಮಿಂಚುತ್ತಿರುವ ಮೇಘನಾ ಶೆಟ್ಟಿ. ಅನು ಸಿರಿಮನೆ ಗರ್ಭಿಣಿ ಅಲ್ವಾ? ಇಲ್ಲಿ ಹೊಟ್ಟೆನೇ ಇಲ್ಲ ಎಂದ ನೆಟ್ಟಿಗರು....
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಉರ್ಫ್ ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ.
ಸೀರಿಯಲ್ ಟೀಮ್ ಹಾಗೂ ಅನಿರುದ್ಧ ನಡುವೆ ಭಿನ್ನಾಪ್ರಾಯ ಮೂಡಿ ಬಂದಿತ್ತು ಆಗ ದೊಡ್ಡ ಬದಲಾವಣೆ ಆಗಿತ್ತು. ಅದೇ ಸಮಯದಲ್ಲಿ ಅನು ಸಿರಿಮನೆ ಪ್ರೆಗ್ನೆಂಟ್ ಆಗಿದ್ದರು.
ದಿನ ರಾತ್ರಿ ಅನು ಸಿರಿಮನೆ ಅವರನ್ನು ಟಿವಿಯಲ್ಲಿ ನೋಡುವ ಜನರು ರಿಯಲ್ ಲೈಫ್‌ನಲ್ಲೂ ಹಾಗೆ ಎಂದುಕೊಂಡಿದ್ದಾರೆ. ಮಾಡರ್ನ್ ಡ್ರೆಸ್ ಧರಿಸಿದ್ದರೂ ಮೇಘನಾ ಶೆಟ್ಟಿನ ಪ್ರಶ್ನೆ ಮಾಡುತ್ತಾರೆ.
ಲಕ್ಷ್ಮಿ ಕೃಷ್ಣ ಡಿಸೈನರ್ ಸೀರಿಯಲ್ಲಿ ಮೇಘಾ ಶೆಟ್ಟಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಪ್ರಶಾಂತ್ ಎನ್ನುವವರು ಮೇಕಪ್ ಮಾಡಿದ್ದಾರೆ ಫೋಟೋವನ್ನು ಆಕ್ಷನ್ ಕಟ್ ತಂಡ ಕ್ಲಿಕ್ ಮಾದೆ.
'Wear Peace with Proud' ಎಂದು ಮೇಘನಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡು ಫೋಟೋ ಅಪ್ಲೋಡ್ ಮಾಡಿದ್ದಾರೆ. ಕಾಮೆಂಟ್‌ನಲ್ಲಿ ಎಲ್ಲರೂ ಅನು ಬಗ್ಗೆ ಪ್ರಶ್ನೆ ಕೇಳಿದ್ದಾರೆ.
ಸೀರಿಯಲ್‌ನಲ್ಲಿ ಸಿಂಪಲ್ ಸೀರಿ ಅಥವಾ ಸೆಲ್ವಾರ್‌ನಲ್ಲಿ ಕಾಣಿಸಿಕೊಳ್ಳುತ್ತೀರಾ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹಾಟ್ ನಟಿಯಾಗಿ ಮಿಂಚುತ್ತೀರಾ. ಜನರು ಯಾವ ಕ್ಯಾರೆಕ್ಟ್ ಇಷ್ಟ ಪಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಸೀರಿಯಲ್‌ನಲ್ಲಿ ಅನು ಸಿರಿಮನೆ ಗರ್ಭಿಣಿ ಎಂದು ಜನರಿಗೆ ಪದೇ ಪದೇ ಹೇಳುತ್ತಿದ್ದಾರೆ ಆದರೆ ಒಂದು ದಿನವೂ ಹೊಟ್ಟೆ ಕಾಣಿಸಿಲ್ಲ....ಇಲ್ಲಿ ನೋಡಿದರೆ ಹೊಟ್ಟೆ ತೋರಿಸಿಕೊಂಡು ಫೋಟೋ ಹಾಕಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.