- Home
- Entertainment
- TV Talk
- ಗಟ್ಟಿಮೇಳ ಮುಗಿಯುತ್ತಿದ್ದಂತೆ ಟ್ಯಾಟೂ ಹಾಕಿಸಿಕೊಂಡ ರೌಡಿ ಬೇಬಿ; ಧೈರ್ಯ ಇಲ್ಲ ಎಂದು ಕಾಲೆಳೆದ ನೆಟ್ಟಿಗರು!
ಗಟ್ಟಿಮೇಳ ಮುಗಿಯುತ್ತಿದ್ದಂತೆ ಟ್ಯಾಟೂ ಹಾಕಿಸಿಕೊಂಡ ರೌಡಿ ಬೇಬಿ; ಧೈರ್ಯ ಇಲ್ಲ ಎಂದು ಕಾಲೆಳೆದ ನೆಟ್ಟಿಗರು!
ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ ನಟಿ ನಿಶಾ.ರೌಡಿ ಬೇಬಿಗೆ ಧೈರ್ಯನೇ ಇಲ್ವಾ?

ಜೀ ಕನ್ನಡ ಜನಪ್ರಿಯ ಧಾರಾವಾಹಿ ಗಟ್ಟಿಮೇಳ ಮೂಲಕ ಕನ್ನಡಿಗರ ಮನೆ ಮಗಳಾದ ನಿಶಾ ರವಿಕುಮಾರ್ ಸದ್ಯ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ.
ರೌಡಿ ಬೇಬಿ ಯಾರಿಗೂ ಹೆದರಿಕೊಳ್ಳುವುದಿಲ್ಲ ಅನ್ನೋ ನಿಶಾ ಕೆಲವು ದಿನಗಳ ಹಿಂದೆ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋ ಮಾಡಿದ್ದಾರೆ.
ಟ್ಯಾಟೂ ಹಾಕುವ ಮುನ್ನನೇ ನಿಶಾ ಸಖತ್ ಟೆನ್ಶನ್ ಮಾಡಿಕೊಂಡಿದ್ದರು. ಅಯ್ಯೋ ಇದ್ಯಾಕೆ ಭಯ ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಪ್ರಶ್ನೆ ಕೂಡ ಮಾಡಿದ್ದಾರೆ.
ಇನ್ನು ನಿಶಾ ಹಾಕಿಸಿಕೊಂಡಿರುವ ಟ್ಯಾಟೂ ಅರ್ಥ ತಿಳಿಸಿಲ್ಲ ಆದರೆ ಇದು ಸಖತ್ ಸಿಂಪಲ್ ಆಗಿದ್ದು. ಯಾವ ರೀತಿ ಔಟ್‌ಫಿಟ್ ಧರಿಸಿದ್ದರೂ ಲುಕ್ ಕೊಡುತ್ತದೆ.
ಗಟ್ಟಿಮೇಳ ಧಾರಾವಾಹಿ ನಂತರ ನಿಶಾ ಕನ್ನಡದ ಅಂಶ್ರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಸಾಂಗ್ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.
ನಿಶಾ ಇನ್ನು ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಬೇಕು ಅನ್ನೋದು ವೀಕ್ಷಕರ ಆಸೆ. ಅಲ್ಲದೆ ನಿಶಾರನ್ನು ನೋಡಿ ಅನೇಕರು ತಮಗೆ ತಾವೇ ರೌಡಿ ಬೇಬಿ ಎಂದು ನಿಕ್ ನೇಮ್ ಇಟ್ಟುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.