ಜಗಳ ಮನಸ್ಥಾಪ ಕೋಪ ಇದ್ದೇ ಇರುತ್ತದೆ; ಮದುವೆ ಬಗ್ಗೆ 'ಅಮೃತಾಧಾರೆ' ಭೂಮಿ ಮಾತು
ಭೂಮಿ ಪಾತ್ರದಲ್ಲಿ ಮಿಂಚುತ್ತಿರುವ ಚಾಯಾ ಸಿಂಗ್ ಜೀವನದಲ್ಲಿ ಮದುವೆ ಎಷ್ಟು ಮುಖ್ಯ ಅದರಲ್ಲೂ ಸಂಗಾತಿ ಆಯ್ಕೆ ಮಾಡುವುದು ಎಷ್ಟು ಚಾಲೆಂಜಿಂಗ್ ಅಂತ ರಿವೀಲ್ ಮಾಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಧಾರಾವಾಹಿಯಲ್ಲಿ ಛಾಯಾ ಸಿಂಗ್ ಭೂಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಡವಾಗಿ ಮದುವೆಯಾಗಿರುವ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮದ್ವೆ ಅನ್ನೋ ಇನ್ಸ್ಟಿಟ್ಯೂಟ್ ತುಂಬಾ ಬ್ಯೂಟಿಫುಲ್ ಆಂದ್ರೆ ಒಂದೊಳ್ಳೆ ಪಾರ್ಟನರ್ ಜೊತೆ ಜೀವನವನ್ನು ಎಂಜಾಯ್ ಮಾಡಬಹುದು. ಸರಿಯಾದ ವ್ಯಕ್ತಿ ಸಿಕ್ಕಾಗ ಜೀವನವನ್ನು ಅದ್ಭುತವಾಗಿ ಎಂಜಾಯ್ ಮಾಡಬಹುದು.
ನಮ್ಮ ಭಾವನೆಗಳು ನಮ್ಮ ಲೈಫ್‌ಸ್ಟೈಲ್ ಬಗ್ಗೆ ಅವರು ಅರ್ಥ ಮಾಡಿಕೊಳ್ಳುವುದು ಅವರ ಜೀವನವನ್ನು ನಾವು ಅರ್ಥ ಮಾಡಿಕೊಳ್ಳುವುದು ಚೆಂದ.
ಎಲ್ಲರು ಹೇಳುವ ಹಾಗೆ ಆಪೋಸಿಟ್ ಅಟ್ರ್ಯಾಕ್ಸ್ ಮಾಡುತ್ತೆ ನಿಜ ಆದರೆ ಯಾವುದಾದರೂ ಒಂದು ವಿಚಾರದಲ್ಲಿ ಹೊಲಿಕೆ ಇದ್ದೇ ಇರುತ್ತದೆ ಎಂದು ಭೂಮಿಕಾ ಖಾಸಗಿ ಸಂದರ್ಶನಲ್ಲಿ ಹೇಳಿದ್ದಾರೆ.
ತುಂಬಾ ಆಪೋಸಿಟ್ ವ್ಯಕ್ತಿಗಳಾಗಿ ನಾನು ಹೈಪರ್ ಆಕ್ಟಿವ್ ಅವ್ರು ಸೋಂಬೇರಿ ಅಗಿ ಬಿಟ್ಟರೆ ಸಂಬಂಧ ವರ್ಕೌಟ್ ಆಗುವುದಿಲ್ಲ ಎಂದು ಭೂಮಿಕಾ ಮಾತನಾಡಿದ್ದಾರೆ.
ಇಬ್ಬರಲ್ಲಿ ಹೊಲಿಕೆ ಇದ್ದರೆ ಮಜಾ ಇರುತ್ತೆ. ಪ್ರತಿಯೊಂದು ಸಂಬಂಧದಲ್ಲಿ ಜಗಳ ಮನಸ್ಥಾಪ ಕೋಪ ಇದ್ದೇ ಇರುತ್ತದೆ ಅದನ್ನು ಮೀರಿ ಒಟ್ಟಿಗೆ ಇರುವುದು ಪ್ರೀತಿ ಮತ್ತು ಮದುವೆ.
ಧೈರ್ಯದಿಂದ ಕೆಟ್ಟ ಸಮಯವನ್ನು ಎದುರಿಸಿದರೆ ಖಂಡಿತಾ ಜೀವನ ಸೂಪರ್ ಆಗಿರುತ್ತದೆ ಹೀಗಾಗಿ ಪ್ರತಿಯೊಬ್ಬರಿಗೂ ನಾನು ಹೇಳುವುದು ಒಂದೇ ನಿಮ್ಮವರನ್ನು ಹೆಚ್ಚಿಗೆ ಪ್ರೀತಿಸಿ ಜೀವನ ಏನೆಂದು ಸಂಬಂಧಗಳು ಅರ್ಥ ಮಾಡಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.