- Home
- Entertainment
- TV Talk
- ಬ್ರೇಕಪ್ ಬಳಿಕ ಹೊಸ ಹುಡುಗಿ ಫೋಟೋ ಶೇರ್ ಮಾಡಿದ ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ! ಯಾರದು?
ಬ್ರೇಕಪ್ ಬಳಿಕ ಹೊಸ ಹುಡುಗಿ ಫೋಟೋ ಶೇರ್ ಮಾಡಿದ ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ! ಯಾರದು?
Youtuber Varun Aradya: ಇತ್ತೀಚೆಗೆ ಯುಟ್ಯೂಬರ್ ಸ್ಯಾಮ್ ಸಮೀರ್ ಅವರು ಹುಡುಗಿ ಫಿಕ್ಸ್ ಎಂದು ಫೋಟೋ, ವಿಡಿಯೋಗಳನ್ನು ಹಂಚಿಕೊಂಡರು. ಈಗ ಬೃಂದಾವನ ಧಾರಾವಾಹಿ ನಟ, ಯುಟ್ಯೂಬರ್ ವರುಣ್ ಆರಾಧ್ಯ ಅವರು ಕೂಡ ಹುಡುಗಿ ಇರೋದನ್ನು ಅಧಿಕೃತಪಡಿಸಿದ್ದಾರೆ.

ಹುಡುಗಿ ಫೋಟೋ ಶೇರ್ ಮಾಡಿದ್ರು
ಹೌದು, ವರುಣ್ ಆರಾಧ್ಯ ಅವರು ಕೆಲ ದಿನಗಳಿಂದ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ ಎಂದು ಹಿಂಟ್ ಕೊಡುವ ಫೋಟೋ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ. ಈಗ ಅವರು ಇನ್ನೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ.
ಹುಡುಗಿ ಹೆಸರು ಏನು?
ನಾನು, ನೀನು, ನಾವು ಎಂದು ಕ್ಯಾಪ್ಶನ್ ಇರುವ ಫೋಟೋವನ್ನು ವರುಣ್ ಆರಾಧ್ಯ ಅವರು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹುಡುಗಿ ಫೋಟೋವನ್ನು ರಿವೀಲ್ ಮಾಡಿಲ್ಲ. ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿದ್ದು, ಹುಡುಗಿ ಹೆಸರು ರಿವೀಲ್ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ.
ಬ್ರೇಕಪ್ ಮಾಡ್ಕೊಂಡಿದ್ದ ವರುಣ್
ಶೀಘ್ರದಲ್ಲೇ ಅವರು ಹುಡುಗಿ ಯಾರೆಂದು ರಿವೀಲ್ ಮಾಡಲಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ನಾಲ್ಕು ವರ್ಷಗಳ ಕಾಲ ಪ್ರೀತಿ ಮಾಡಿದ್ದ ವರುಣ್ ಅವರು ಬ್ರೇಕಪ್ ಮಾಡಿಕೊಂಡಿದ್ದರು. ಈ ಬ್ರೇಕಪ್ ದೊಡ್ಡ ಮಟ್ಟದಲ್ಲಿ ಚರ್ಚಯಾಗಿತ್ತು, ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಯಾವಾಗ ಮದುವೆ ಆಗ್ತಾರೆ?
ಬ್ರೇಕಪ್ ಬಳಿಕ ವರುಣ್ ಜೀವನಕ್ಕೆ ಹೊಸ ಹುಡುಗಿ ಆಗಮನ ಆಗಿದೆ. ವರುಣ್ ಅಕ್ಕ ಚೈತ್ರಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ, ಇವರು ಯಾವಾಗ ಮದುವೆ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

