Bigg Boss Kannada ಮನೆಗೆ ಹೋಗದಿರಲು ಕಾರಣ ಹೇಳಿದ ಯುಟ್ಯೂಬರ್ ವರುಣ್ ಆರಾಧ್ಯ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಯುಟ್ಯೂಬರ್, ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ ಹಾಗೂ ವರ್ಷಾ ಕಾವೇರಿ ಅವರು ಇರಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಅವರು ದೊಡ್ಮನೆಗೆ ಬರಲೇ ಇಲ್ಲ. ಈಗ ಕಾರಣ ಏನು ಎಂದು ಹೇಳಿದ್ದಾರೆ.

ವರುಣ್‌ಗೂ ಬಿಗ್ ಬಾಸ್ ಇಷ್ಟ
ವರ್ಷಾ ಕಾವೇರಿ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಆಫರ್ ಬಂದರೆ ಪಕ್ಕಾ ಹೋಗ್ತೀನಿ ಎಂದು ಹೇಳಿದ್ದರು. ಇನ್ನು ವರುಣ್ ಆರಾಧ್ಯ ಅವರು ಕೂಡ ಬಿಗ್ ಬಾಸ್ ಶೋಗೆ ಹೋಗುವ ಆಸೆ ಹೊಂದಿದ್ದರು.
ಬಿಗ್ ಬಾಸ್‌ಗೆ ಹೋಗಿಲ್ಲ ಅಂತ ಕೇಳ್ತಿದ್ದಾರೆ
ಈ ಬಗ್ಗೆ ವರುಣ್ ಆರಾಧ್ಯ ಅವರು ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು, “ನಾನು ಬಿಗ್ ಬಾಸ್ ಶೋನಲ್ಲಿ ಇರಬೇಕು, ಶೋಗೆ ಹೋಗಬೇಕು, ಶೋನಲ್ಲಿ ಇರಬೇಕಾದ ವ್ಯಕ್ತಿ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಯಾಕೆ ನಾನು ಬಿಗ್ ಬಾಸ್ ಶೋಗೆ ಹೋಗ್ತಿಲ್ಲ ಕೂಡ ಹೇಳುವೆ” ಎಂದಿದ್ದಾರೆ.
ಯಾಕೆ ಹೋಗಿಲ್ಲ
“ನಮ್ಮ ಮನೆ ಒಂದು ತಿಂಗಳಲ್ಲಿ ಸೀಸ್ ಆಗತ್ತೆ, ಈಗ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ, ನಮ್ಮ ಮನೆಗೆ ನಾನೇ ಪಿಲ್ಲರ್, ಹೀಗಾಗಿ ಹೋಗೋಕೆ ಆಗಲಿಲ್ಲ. ಈ ಸೀಸನ್ ನನಗೆ ಯಾವುದೇ ಬಿಗ್ ಬಾಸ್ ಆಫರ್ ಬರಲಿಲ್ಲ, ಆದರೆ ಈ ಹಿಂದಿನ ಸೀಸನ್ ಆಫರ್ ಬಂದಿದ್ದರೂ ಕೂಡ, ಹೋಗೋಕೆ ಆಗಿರಲಿಲ್ಲ” ಎಂದಿದ್ದಾರೆ.
ಅಕ್ಕನ ಜೊತೆ ಸಮಯ ಕಳೆಯಬೇಕು
“ನನ್ನ ಅಕ್ಕನಿಗೆ ಡೆಲಿವರಿ ಆಗಿದ್ದು, ಮಗುಗೆ ಎಂಟು ತಿಂಗಳು ಆಗೋವರೆಗೂ ಅವಳು ನಮ್ಮ ಮನೆಯಲ್ಲಿ ಇರುತ್ತಾಳೆ. ಅವಳ ಜೊತೆ ಸಮಯ ಕಳೆಯಬೇಕು. ಇಷ್ಟೆಲ್ಲ ಟೈಮ್ ಅವಳು ನಮ್ಮ ಮನೆಯಲ್ಲಿ ಮುಂದೆ ಇರೋದಿಲ್ಲ. ಹೀಗಾಗಿ ನಾನು ಬಿಗ್ ಬಾಸ್ ಶೋಗೆ ಹೋಗೋಕೆ ಆಗುತ್ತಿರಲಿಲ್ಲ” ಎಂದು ವರುಣ್ ಆರಾಧ್ಯ ಹೇಳಿದ್ದಾರೆ.
ನಮ್ಮ ಮನೆಗೆ ನಾನೇ..
“ನನಗೆ ಸಮಸ್ಯೆ ಆದರೆ ಬಂದು ನಿಲ್ಲೋಕೆ ಯಾರೂ ಇಲ್ಲ, ನನಗೆ ನನ್ನ ಅಮ್ಮ, ನನ್ನ ಅಮ್ಮನಿಗೆ ನಾನು, ಏನೇ ಆದರೂ ನಾನೇ ನೋಡಬೇಕು” ಎಂದು ವರುಣ್ ಆರಾಧ್ಯ ಹೇಳಿದ್ದಾರೆ.