ತುಂಡುಗೆಯಲ್ಲಿದ್ದ ಸಂಯುಕ್ತಾ ಹೆಗ್ಡೆ ಜೊತೆ ಸ್ಟೆಪ್ ಹಾಕಿದ ಕಿಶನ್ ಅಂತಿಂತವನಲ್ಲ!
ಅದ್ಭುತ ಡ್ಯಾನ್ಸರ್ ಹಾಗೂ, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದ ಕಿಶನ್ ಬಿಳಗಲಿ ರಾಷ್ಟ್ರಮಟ್ಟದ ಡ್ಯಾನ್ಸರ್ ಮಾತ್ರವಲ್ಲ ಮಾಡೆಲ್ ಕೂಡ ಹೌದು. ಈಗ ಅವರು ನಟಿ ಸಂಯುಕ್ತಾ ಹೆಗ್ಡೆ ಜೊತೆಗೆ ಮೈ ಚಳಿ ಬಿಟ್ಟು ಡಾನ್ಸ್ ಮಾಡಿ ಸುದ್ದಿಯಲ್ಲಿದ್ದಾರೆ.
ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟಿಷನ್ ಡ್ಯಾನ್ಸ್ ದೀವಾನೆ ಗೆದ್ದಿರುವ ಸೆಲೆಬ್ರಿಟಿ ಡ್ಯಾನ್ಸರ್ ಕೊರಿಯೋಗ್ರಾಫರ್, ಕಿಶನ್ ಕಿಶನ್ ಬಿಳಗಲಿ ಪುಟ್ಟ ಹಳ್ಳಿಯ ಹುಡುಗ, ಹುಟ್ಟೂರು ಚಿಕ್ಕಮಗಳೂರಿನಲ್ಲಿ ಹೆಚ್ಚಾಗಿ ಇರುತ್ತಾರೆ ಮತ್ತು ಅಲ್ಲಿನ ಪರಿಸರದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಹಳ್ಳಿಯ ಸೊಬಗು, ಹಳ್ಳಿಯ ಖಾದ್ಯಗಳ ಬಗ್ಗೆ ಆಗಾಗ ತಮ್ಮ ಫಾಲೋವರ್ಸ್ ಗೆ ತೋರಿಸುತ್ತಾರೆ. ಕಿಶನ್ ಮನೆಯಲ್ಲಿ ಮೂರ್ನಾಲ್ಕು ನಾಯಿಗಳನ್ನು ಸಾಕಿದ್ದಾರೆ. ಅವುಗಳ ಜೊತೆಗೂ ಆಗಾಗ ರೀಲ್ಸ್ ಹಾಕುತ್ತಾರೆ.
Kishen Bilagali
ಹಿಂದಿ ರಿಯಾಲಿಟಿ ಶೋ ಡ್ಯಾನ್ಸ್ ದೀವಾನೆ ಗೆದ್ದ ಕನ್ನಡಿಗ ಕಿಶನ್ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ತಕದಿಮಿತ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು. ತಕದಿಮಿತ ರಿಯಾಲಿಟಿ ಶೋ ನಲ್ಲಿ ಇವರಿಗೆ ಕಿರುತೆರೆ ನಟಿ ನಮೃತಾ ಗೌಡ ಜೋಡಿಯಾಗಿದ್ದರು.
ಹಿಂದಿ ಕಿರುತೆರೆಯಲ್ಲಿ ಹೆಸರು ಮಾಡಿರುವುದು ಮಾತ್ರವಲ್ಲ ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳ ಜೊತೆಗೆ ಒಡನಾಟವನ್ನು ಕೂಡ ಹೊಂದಿದ್ದಾರೆ.
ಡಾನ್ಸ್ ದಿವಾನೆ ರಿಯಾಲಿಟಿ ಶೋ ನಲ್ಲಿ ಮಾಡಿದ್ದ ಒಂದು ನೃತ್ಯ ನೋಡಿದ ಪ್ರೇಕ್ಷಕರ ಕಣ್ಣಾಲಿಗಳಲ್ಲಿ ನೀರು ತರಿಸಿತ್ತು. ಈ ನೃತ್ಯ ನೋಡಿ ನಟಿ ಮಾಧುರಿ ದೀಕ್ಷಿತ್ ಕೂಡ ಮೂಖ ವಿಸ್ಮಿತರಾಗಿ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದರು.
ಅಂದು ಕಿಶನ್ ಆ ನೃತ್ಯವನ್ನು ಅವರ ಅಮ್ಮನಿಗೆ ಅರ್ಪಿಸಿದ್ದರು. ಕಿಶನ್ ತಾಯಿ 2013ರಲ್ಲಿ ನಿಧರಾಗಿದ್ದರು. ಮಗನ ಸಾಧನೆಯನ್ನು ನೋಡುವ ಮೊದಲೇ ಅವರು ಕಿಶನ್ ಕುಟುಂಬವನ್ನು ಅಗಲಿದ್ದರು.
ಕಿಶನ್ ತಾಯಿ ಜೀನ್ ರೋಸ್ ಫರ್ನಾಂಡೀಸ್, ಮದುವೆಯಾದ ನಂತರ ಸುಮಾ ಎಂದು ಹೆಸರು ಬದಲಾಯಿಸಿಕೊಂಡಿದ್ದರಂತೆ. ರೋಹಿತ್ ಬಿಳಗಲಿ ಮತ್ತು ಪ್ರತೀಕ್ ಬಿಳಗಲಿ ಇವರ ಸಹೋದರರು. ಇವರ ತಂದೆ ಅಶೋಕ್ ಬಿಳಗಲಿ.
ಕಿಶನ್ ಡಾನ್ಸರ್ ಆಗಲು ತಾಯಿಯೇ ಕಾರಣವಂತೆ. ಹೀಗಾಗಿ ಅವರನ್ನು ಪ್ರತೀಕ್ಷಣ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹಲವು ಸಂದರ್ಶನಗಳಲ್ಲಿ ಕಿಶನ್ ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕಿಶನ್ ಅವರದ್ದೇ ಆದ ಫಿಟ್‌ನೆಸ್ ಸೆಂಟರ್ ಟ್ರೈಸ್ಟುಡಿಯಸ್ ಎಂಬ ಕೇಂದ್ರ ಇದೆ. ಮಾತ್ರವಲ್ಲ ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 7 ರಿಂದ ಹೊರ ಬರುತ್ತಿದ್ದಂತೆ ಹೋಟೆಲ್ ಆರಂಭಿಸಿದ್ದರು. ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಬಿರಿಯಾನಿ ಅಂಗಡಿ ಓಪನ್ ಮಾಡಿದ್ದಾರೆ. ಸಿನೆಮಾದಲ್ಲೂ ನಟಿಸುತ್ತಿದ್ದಾರೆ.
ಬಾಲಿವುಡ್ ನ ಮಾಧುರಿ ಧೀಕ್ಷಿತ್, ಶ್ರದ್ಧಾ ಕಪೂರ್, ಮೌನಿ ರಾಯ್, ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡಿಸ್, ಭಾರತಿ ಸಿಂಗ್ ಸೇರಿ ಅನೇಕ ಮಂದಿ ಜೊತೆ ಕೂಡ ವೇದಿಕೆ ಹಂಚಿಕೊಂಡಿದ್ದಾರೆ.
ಕಿರುತೆರೆ ನಟಿಯರಾದ ದೀಪಿಕಾ ದಾಸ್, ನಮೃತಾ ಗೌಡ ಅವರ ಸೇರಿ ಹಲವರ ಜೊತೆಗೆ ಆಗಾಗ ಡಾನ್ಸ್ ವಿಡಿಯೋಗಳನ್ನು ಹಾಕುವ ಕಿಶನ್ ಈಗ ನಟಿ ಸಂಯುಕ್ತಾ ಹೆಗ್ಡೆ ಜೊತೆಗೆ ಹಾಟ್ ಡಾನ್ಸ್ ವಿಡಿಯೋ ಹಾಕಿ ಸುದ್ದಿಯಲ್ಲಿದ್ದಾರೆ. ಸಂಯುಕ್ತಾ ಅವರ ಬಿಕಿನಿ ಬಟ್ಟೆಗೆ ತರಹೇವಾರಿ ಕಮೆಂಟ್ ಬಂದಿದೆ.