MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕ್ಲೈಮ್ಯಾಕ್ಸ್‌ ಎಪಿಸೋಡ್‌ ಥರ ಪ್ರಸಾರ ಆಗ್ತಿರೋ Kannada Serials; ಯಾವ ಧಾರಾವಾಹಿ ಅಂತ್ಯ ಆಗಲಿದೆ?

ಕ್ಲೈಮ್ಯಾಕ್ಸ್‌ ಎಪಿಸೋಡ್‌ ಥರ ಪ್ರಸಾರ ಆಗ್ತಿರೋ Kannada Serials; ಯಾವ ಧಾರಾವಾಹಿ ಅಂತ್ಯ ಆಗಲಿದೆ?

Kannada Serial Episode: ಸದ್ಯ ಕನ್ನಡ ಧಾರಾವಾಹಿಗಳಲ್ಲಿ ರಣರೋಚಕವಾದ ಟ್ವಿಸ್ಟ್‌ ಎದುರಾಗುತ್ತಿದೆ. ಸೀರಿಯಲ್‌ ಕಥೆ ನೋಡಿದವರಿಗೆ ಕ್ಲೈಮ್ಯಾಕ್ಸ್‌ ಎಪಿಸೋಡ್‌ ಪ್ರಸಾರ ಆಗ್ತಿದ್ಯಾ ಎಂಬ ಡೌಟ್‌ ಕೂಡ ಬರುವುದು. ಹಾಗಾದರೆ ಯಾವ ಧಾರಾವಾಹಿ ಅಂತ್ಯ ಆಗಬಹುದು? 

2 Min read
Author : Padmashree Bhat
Published : Feb 02 2026, 11:20 AM IST
Share this Photo Gallery
  • FB
  • TW
  • Linkdin
  • Whatsapp
15
ನಿನ್ನ ಜೊತೆ ನನ್ನ ಕಥೆ ಧಾರಾವಾಹಿ
Image Credit : jiohotstar and zee5

ನಿನ್ನ ಜೊತೆ ನನ್ನ ಕಥೆ ಧಾರಾವಾಹಿ

ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಅಜಿತ್‌ ಮೇಲೆ ಭೂಮಿಗೂ ಲವ್‌ ಆಗಿದೆ. ಅಜಿತ್‌ ಪ್ರೇಮ ನಿವೇದನೆ ಮಾಡಿದಾಗ, ಅವಳು ಒಪ್ಪಿಕೊಳ್ಳಲು ರೆಡಿಯಾಗಿದ್ದಳು. ಭೂಮಿ ಒಪ್ಪೋದಿಲ್ಲ ಎಂದು ಅಜಿತ್‌ ಮನಸ್ಸಿನಲ್ಲಿ ಅಂದುಕೊಂಡು, ಫ್ರಾಂಕ್‌ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇನ್ನೊಂದು ಕಡೆ ಶಾರದಾ ಕೂಡ ಅಜಿತ್‌ಗೆ ಸಿಗುವ ಸಾಧ್ಯತೆ ಜಾಸ್ತಿ ಇದೆ. ಅಂಜನಾ ಹಾಗೂ ನಚಿಕೇತ್‌ ನಿಶ್ಚಿತಾರ್ಥ ಕೂಡ ನಡೆಯುತ್ತಿದೆ. ಇವೆಲ್ಲ ನೋಡಿದರೆ ಎಲ್ಲವೂ ಒಂದಕ್ಕೊಂದು ಕೂಡಿ ಬಂದ ಹಾಗಿದೆ. ಸದ್ಯ ಸ್ಟಾರ್‌ ಸುವರ್ಣ ವಾಹಿನಿಯ ನಂಬರ್‌ 1 ಸೀರಿಯಲ್‌ ಆಗಿರುವ ನಿನ್ನ ಜೊತೆ ನನ್ನ ಕಥೆ ಸದ್ಯಕ್ಕೆ ಅಂತ್ಯ ಆಗೋದಿಲ್ಲ ಬಿಡಿ.

25
ಭಾಗ್ಯಲಕ್ಷ್ಮೀ ಧಾರಾವಾಹಿ
Image Credit : jiohotstar

ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ಗೆ ತನ್ನ ತಪ್ಪು ಅರಿವಾಗಿದೆ. ಬಂಗಾರದಂಥ ಹೆಂಡತಿ, ಮಕ್ಕಳು, ಅಪ್ಪ-ಅಮ್ಮನನ್ನು ಬಿಟ್ಟು ನಾನು ಎರಡನೇ ಮದುವೆ ಆಗಬಾರದಿತ್ತು, ಶ್ರೇಷ್ಠ ಹಿಂದೆ ಹೋಗಿ ನನ್ನ ಮನೆಯವರಿಗೆ ಮೋಸ ಮಾಡಬಾರದಿತ್ತು ಅಂತ ಅರ್ಥ ಆಗಿದೆ. ಇನ್ನು ಆದಿ ಕೂಡ ಭಾಗ್ಯಗೆ ಪ್ರೇಮ ನಿವೇದನೆ ಮಾಡಿದ್ದು, ಆದಷ್ಟು ಬೇಗ ಭಾಗ್ಯ ಮನಸ್ಸಿನಲ್ಲಿ ಏನಿದೆ ಎನ್ನೋದು ಗೊತ್ತಾಗುವುದು. ಈಗ ತಾಂಡವ್‌ ಕೂಡ ಭಾಗ್ಯಗೆ ಕ್ಷಮೆ ಕೇಳುತ್ತಾನೆ. ಭಾಗ್ಯ ಈಗ ತಾಂಡವ್‌ ಜೊತೆ ಇರಲು ಇಷ್ಟಪಡುತ್ತಾಳಾ? ಅಥವಾ ಆದಿ ಜೊತೆ ಮದುವೆ ಆಗ್ತಾಳಾ ಎಂದು ಕಾದು ನೋಡಬೇಕಿದೆ. ಸದ್ಯ ಧಾರಾವಾಹಿಯಂತೂ ಮುಗಿಯೋದಿಲ್ಲ ಬಿಡಿ.

Related Articles

Related image1
ಬಾಲಿವುಡ್ ಸ್ಟಾರ್ ನಟಿಯರಿಗೆ ಟಕ್ಕರ್ ಕೊಟ್ಟ ಕನ್ನಡ ಧಾರಾವಾಹಿ ನಟಿ ದಿಶಾ ಮದನ್!
Related image2
Bigg Boss ಮನೆಗೆ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟ ಕನ್ನಡದ 'Seethe' ಧಾರಾವಾಹಿ ನಟ; ಯಾರದು?
35
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Image Credit : Instagram

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಮನೆಯಲ್ಲಿ ನಂದಿನಿ ಇದ್ದಾಳೆ. ಇನ್ನು ವಿಜಯಾಂಬಿಕಾ ಸತ್ಯ ಕೂಡ ಶ್ರಾವಣಿ ತಂದೆಗೆ, ಮನೆಯವರಿಗೆ ಗೊತ್ತಾಗಿದೆ. ನಂದಿನಿ ನನಗೆ ಯಾವುದೇ ಮೋಸ ಮಾಡಿಲ್ಲ, ನಂದಿನಿ ಹಾಗೂ ನನ್ನ ರಿಯಲ್‌ ಮಗಳು ಶ್ರಾವಣಿ ಎನ್ನೋದು ವೀರೇಂದ್ರಪಾಟೀಲ್‌ಗೆ ಗೊತ್ತಾಗಬೇಕಿದೆ. ಆದರೆ ಸದ್ಯ ಈ ಧಾರಾವಾಹಿ ಅಂತ್ಯ ಆಗೋದು ಡೌಟ್‌ ಎನ್ನಲಾಗಿದೆ.

45
ಬ್ರಹ್ಮಗಂಟು ಧಾರಾವಾಹಿ
Image Credit : zee5

ಬ್ರಹ್ಮಗಂಟು ಧಾರಾವಾಹಿ

ಬ್ರಹ್ಮಗಂಟು ಧಾರಾವಾಹಿಯಲ್ಲಿ ಚಿರಾಗ್‌ಗೆ ದೀಪಾ ಮೇಲೆ ಲವ್‌ ಆಗಿದೆ. ಅತ್ತ ಸೌಂದರ್ಯ ಉದ್ದೇಶ ಏನು? ಅವಳು ಎಷ್ಟು ಕೆಟ್ಟವಳು ಎನ್ನೋದು ಕೂಡ ಚಿರಾಗ್‌ ತಂದೆಗೆ ಗೊತ್ತಾಗಿದೆ. ದೀಪಾ ಕೂಡ ತನ್ನ ತಂಡ ತನ್ನನ್ನು ಲವ್‌ ಮಾಡ್ತಾನೆ ಎಂದು ಅರಿತಿದ್ದಾಳೆ. ಇದೆಲ್ಲ ನೋಡಿದರೆ ಈ ಸೀರಿಯಲ್‌ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದ ಹಾಗಿದೆ, ಮುಂದೆ ನೋಡೋಣ

55
ಅಮೃತಧಾರೆ ಧಾರಾವಾಹಿ
Image Credit : Zee Kannada

ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಒಂದಾಗಿದ್ದಾರೆ, ಗೌತಮ್‌ ತಾಯಿ ಹುಷಾರಾಗಿದ್ದಾಳೆ. ಒಟ್ಟಿನಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಅತ್ತ ಜಯದೇವ್‌ ಸಾಲ ತೀರಿದೆ. ಜಯದೇವ್‌ಗೆ ಬುದ್ಧಿ ಬಂದರೆ, ಗೌತಮ್‌ಗೆ ಮಗಳು ಸಿಕ್ಕಿದರೆ ಈ ಸೀರಿಯಲ್‌ ಕಥೆ ಅಂತ್ಯ ಆದಂತೆ. ಆದರೆ ಸದ್ಯಕ್ಕೆ ಈ ಸೀರಿಯಲ್‌ ಎಂಡ್‌ ಆಗೋದು ಡೌಟ್.‌ ಟ್ವಿಸ್ಟ್‌ ನೋಡಿದರೆ ಸೀರಿಯಲ್‌ ಮುಗಿತಿದ್ಯಾ ಎಂದು ಡೌಟ್‌ ಬರೋದು ಸಹಜ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಭಾಗ್ಯಲಕ್ಷ್ಮಿ ಧಾರಾವಾಹಿ
ಶ್ರಾವಣಿ ಸುಬ್ರಮಣ್ಯ
ಬ್ರಹ್ಮಗಂಟು ಧಾರಾವಾಹಿ

Latest Videos
Recommended Stories
Recommended image1
ಗಿಲ್ಲಿ ಟ್ಯಾಟೂ ವಿವಾದ, ಅಭಿಮಾನಿಗಳ ಅತಿ ಪ್ರೀತಿ ಬಗ್ಗೆ ಕಾವ್ಯ ಹೇಳಿದ್ದೇನು?
Recommended image2
Karna Serial Update: ಅಕ್ಕನಿಗೆ ಮಾತು ಕೊಟ್ಟ ನಿಧಿ; ಕರ್ಣನನ್ನು ಬಿಟ್ಕೊಟ್ಟು ಬೇರೆ ಹುಡುಗನನ್ನು ಮದುವೆ ಆಗ್ತಾಳಾ?
Recommended image3
ಬೆಳಕಿನ ಕವಿತೆಯ ದೀಪ ಆರಿಸಿದ ಐಶ್ವರ್ಯಾ-ವರುಣ್ ರೊಮ್ಯಾಂಟಿಕ್ ಹಾಡಿನ ಮೇಕಿಂಗ್ ವಿಡಿಯೋ ವೈರಲ್
Related Stories
Recommended image1
ಬಾಲಿವುಡ್ ಸ್ಟಾರ್ ನಟಿಯರಿಗೆ ಟಕ್ಕರ್ ಕೊಟ್ಟ ಕನ್ನಡ ಧಾರಾವಾಹಿ ನಟಿ ದಿಶಾ ಮದನ್!
Recommended image2
Bigg Boss ಮನೆಗೆ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟ ಕನ್ನಡದ 'Seethe' ಧಾರಾವಾಹಿ ನಟ; ಯಾರದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved