ಕಟ್ಟಿಕೊಂಡವಳಿಗಿಂತ ಇಟ್ಟುಕೊಂಡವಳೇ ಶ್ರೇಷ್ಠಾ ಎಂದು ತೋರಿಸ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ ವಿರುದ್ಧ ವೀಕ್ಷಕರ ಆಕ್ರೋಶ!
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಇದೀಗ ಮಹಾ ತಿರುವು ಸಿಕ್ಕಿದ್ದು, ಭಾಗ್ಯ ಎಲ್ಲರನ್ನೂ ಕರೆದುಕೊಂಡು, ಗಂಡ ತಾಂಡವ್ ಗೆ ಸವಾಲು ಹಾಕಿ ಮನೆ ಬಿಟ್ಟು ಹೊರಟಿದ್ದಾಳೆ. ವೀಕ್ಷಕರು ಸೀರಿಯಲ್ ವಿರುದ್ಧ ಕಿಡಿ ಕಾರಿದ್ದಾರೆ.
ಭಾಗ್ಯಲಕ್ಷ್ಮೀ (Bhagyalakshmi) ಧಾರಾವಾಹಿಯಲ್ಲಿ ತಾಂಡವ್ ನ ಅತಿಯಾದ ಅಹಂಕಾರ, ದರ್ಪ, ದಬ್ಬಾಳಿಕೆಯನ್ನು ಇಲ್ಲಿವರೆಗೂ ಸಹಿಸಿಕೊಂಡು ಬಂದಿದ್ದ ಭಾಗ್ಯ ಇದೀಗ ಗಂಡನ ಮೋಸದ ವಿರುದ್ಧ ಸಿಡಿದೆದ್ದು, ಗಂಡನಿಗೆ ಸವಾಲು ಹಾಕಿ ಮನೆಬಿಟ್ಟು ಹೊರ ಬಂದಿದ್ದಾಳೆ. ತಾನು ಮಾತ್ರ ಅಲ್ಲ, ತನ್ನ ಮಕ್ಕಳು, ಅತ್ತೆ, ಮಾವ ಇಬ್ಬರನ್ನೂ ಕರೆದುಕೊಂಡು ಹೊರ ಬಂದಿದ್ದಾಳೆ.
ಭಾಗ್ಯ ನಿರ್ಧಾರದ ಬಗ್ಗೆ ಸೀರಿಯಲ್ ನಲ್ಲಿ ಪರ ವಿರೋಧ ವ್ಯಕ್ತವಾಗಿದೆ. ಭಾಗ್ಯ ಮನೆ ಬಿಟ್ಟು ಹೋಗಿರೋದಕ್ಕೆ ಹೆಚ್ಚಿನ ಜನರು ಮೆಚ್ಚುಗೆ ಸೂಚಿಸಿದ್ದು, ಭಾಗ್ಯಳ ಈ ನಡೆ, ಗಂಡನಿಂದ ಕಷ್ಟ ಅನುಭವಿಸುವ ಹೆಣ್ಣುಮಕ್ಕಳಿಗೆ ಪ್ರೇರಣೆ ನೀಡುತ್ತಿದೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ತಾಂಡವ್ ನನ್ನೇ ಮನೆಯಿಂದ ಹೊರ ಹಾಕಬೇಕಿತ್ತು ಎಂದಿದ್ದಾರೆ. ಇನ್ನೂ ಕೆಲವರು ಭಾಗ್ಯ ನೀನು ಅದೇ ಮನೆಯಲ್ಲಿದ್ದು ತಾಂಡವ್ ಗೆ ನೀನು ಏನು ಮಾಡಬಹುದು ಅನ್ನೋದನ್ನು ತೋರಿಸಬಹುದಿತ್ತು ಎಂದಿದ್ದಾರೆ.
ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದ್ಯಂತ ಭಾಗ್ಯಲಕ್ಷ್ಮೀ ಸೀರಿಯಲ್ ಪರ ಮತ್ತು ವಿರೋಧವಾಗಿ ಹಲವಾರು ಕಾಮೆಂಟ್ ಗಳು ಬಂದಿವೆ. ಅವುಗಳಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಆಗಿರೋ ಕಾಮೆಂಟ್ ಗಳ ಬಗ್ಗೆ ಮಾಹಿತಿ ಇಲ್ಲಿದೆ. ನಿಮಗೆ ಭಾಗ್ಯ ನಡೆ ಬಗ್ಗೆ ಏನು ಅನಿಸುತ್ತೆ ಅನ್ನೋದನ್ನ ಹೇಳಿ.
ಒಬ್ಬರು ಕಾಮೆಂಟ್ ಮಾಡಿ ಇದು ಅತಿಯಾಗಿದೆ. ಶ್ರೇಷ್ಠಗೇ ಇಷ್ಟೊಂದ್ ಪ್ರಾಮುಖ್ಯತೆ ತೋರಿಸ್ತಿರೋದು ತಪ್ಪು. ಮದ್ವೆ ಆಗಿರೋ ಹೆಂಡ್ತಿಗೆ ಮರ್ಯಾದೆ ಕೊಡದೆ ಈ ತರ ಕೆಟ್ಟದಾಗಿ ಮಾತಾಡಿ, ಅಫೇರ್ ಇರೋ ಶ್ರೇಷ್ಠಗೇ ಜಾಸ್ತಿ ಪ್ರಾಮುಖ್ಯತೆ ಕೊಡೋದ್ ತೋರಿಸ್ತಿದಿರಾ. ಇದು ಒಳ್ಳೆಯದಲ್ಲ ಎಂದಿದ್ದಾರೆ.
ಇನ್ನೊಬ್ಬರು ಕುಸುಮ ಮೇಡಂ, ನಿಮ್ ಶಾಪ ತಟ್ಟೆ ತಟ್ಟುತ್ತೆ. ತಾಯಿ ಶಾಪ ಯಾವತ್ತೂ ಒಳ್ಳೆಯದಲ್ಲ. ಮನೆ ಹಾಳಿ ಶ್ರೇಷ್ಥಾ ನಿನಗಂತೂ ಒಳ್ಳೆಯದಾಗಲ್ಲ, ವೀಕ್ಷಕರ ಶಾಪ ನಿನಗೆ ತಟ್ಟದೇ ಬಿಡಲ್ಲ, ತಾಂಡವ್ ಮತ್ತು ಶ್ರೇಷ್ಠಳನ್ನು ಆಫೀಸ್ ನಿಂದ ಬಾಸ್ ಹೊರ ಹಾಕಬೇಕು, ಆವಾಗ ಇವರಿಗೆ ಬುದ್ದಿ ಬರುತ್ತೆ ಎಂದಿದ್ದಾರೆ. ಇಟ್ಟಿಕೊಂಡವಳು ಇರೋವರೆಗೂ ಇರುತ್ತಾಳೆ ಅನ್ನೋ ವಿಷಯ ತಾಂಡವ್ ಗೆ ಹೇಳಿ ಹೋಗು ಭಾಗ್ಯ,ಆ ಶ್ರೇಷ್ಠ ಹೇಗೆ ನೋಡಿಕೊಳ್ಳುತ್ತಾಳೊ ನೋಡೋಣ ಎಂದಿದ್ದಾರೆ.
ಅಷ್ಟೇ ಅಲ್ಲ ಈ ತಾಂಡವ್ ಗೆ ಚಪ್ಪಲಿ ತೆಗೆದುಕೊಂಡು, ಹೊಡಿಯೋರು ಯಾರು ಇಲ್ವಾ? ಯಾವಳಿಗೋಸ್ಕರ ಏನು ಹೆತ್ತ ತಂದೆ ತಾಯಿ, ಮಕ್ಕಳು ಎಲ್ಲರನ್ನು ದೂರ ಮಾಡಿಕೊಂಡಿದ್ದಾನೆ ಅಯ್ಯೋ ದುರ್ವಿಧಿಯೇ. ಭಾಗ್ಯ ನೀನ್ ಏನ್ ಮಾಡಿದ್ರು ಶ್ರೇಷ್ಠ ತಾಂಡವ್ ವಿರುದ್ಧವಾಗಿ ಮಾಡು , ಇಂಥ ಗಂಡ ಇರೋದು ಒಂದೇ ಪಾಳು ಬಾವಿಗ್ ಬಿದ್ದು ಸಾಯೋದು ಒಂದಲ್ಲ ಒಂದು ದಿನ ಬರ್ತದೆ, ಆವಾಗ ಶ್ರೇಷ್ಟ ಸಾಹವಾಸ ಸಾಕು ಎಂದು ಮತ್ತೆ ನಿನ್ನ ಬಳಿ ಬರ್ತಾನೆ ಎನ್ನುತ್ತಿದ್ದಾರೆ ಜನ.
ನೀನು ಬಿಟ್ಟು ಹೋಗು ಆಮೇಲೆ ಆ ತಾಂಡವ್ ಗೆ ಅರ್ಥ ಆಗುತ್ತೆ, ನೀನು ಏನು ಶ್ರೇಷ್ಠ ಏನು ಅಂತಾ ಆಮೇಲೆ ಗೊತ್ತಾಗುತ್ತೆ ಎಂದಿದ್ದಾರೆ. ಮತ್ತೊಬ್ಬರು ಅಯ್ಯೋ ದಡ್ಡ ಮುಂದೆ ನೀನು ಅನುಭಸವಿಸುತ್ತಿಯಲ್ಲ ಅವಾಗ ಗೊತ್ತಾಗುತ್ತೆ, ತನ್ನ ತಂದೆ ತಾಯಿಗೆ ಯಾರೋ ಮೂರನೆಯವಳು ಬಂದು ಮಾತಾಡುತ್ತಿದ್ದರು ಅವಳಿಗೆ ಸಪೋರ್ಟ್ ಮಾಡುತ್ತಿದ್ದಿಯಲ್ಲ ನಿನಗೆ ಮುಂದೆ ಇದೆ ಕಾಯ್ತಾ ಇರ. ಕರ್ಮ ರಿಟರ್ನ್ಸ್ ಕಾಯ್ತಾ ಇರು ಮಗನೇ ಎಂದಿದ್ದಾರೆ.