- Home
- Entertainment
- TV Talk
- Pavithra Bandhana: ಸೂರಜ್ ಸಿಂಗ್ ನಟನೆ ಮೆಚ್ಚಿಕೊಂಡ ವೀಕ್ಷಕರು… ಸೀರಿಯಲ್ ಸೂಪರ್ ಹಿಟ್ ಗ್ಯಾರಂಟಿ
Pavithra Bandhana: ಸೂರಜ್ ಸಿಂಗ್ ನಟನೆ ಮೆಚ್ಚಿಕೊಂಡ ವೀಕ್ಷಕರು… ಸೀರಿಯಲ್ ಸೂಪರ್ ಹಿಟ್ ಗ್ಯಾರಂಟಿ
Pavithra Bandhana: ಪವಿತ್ರ ಬಂಧನ ಧಾರಾವಾಹಿ ಶುರುವಾಗಿ ಈಗಾಗಲೇ ಮೂರು ದಿನಗಳು ಕಳೆದಿವೆ. ಸೀರಿಯಲ್ ಮೊದಲ ಎಪಿಸೋಡ್ ಗಳನ್ನು ನೋಡಿಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೂರಜ್ ಸಿಂಗ್ ನಟನೆಯನ್ನು ಕೂಡ ಜನರು ಮೆಚ್ಚಿಕೊಂಡಿಕೊಂಡಿದ್ದಾರೆ. ಸೀರಿಯಲ್ ಸೂಪರ್ ಹಿಟ್ ಎನ್ನುತ್ತಿದ್ದಾರೆ.

ಪವಿತ್ರ ಬಂಧನ
ಕಲರ್ಸ್ ಕನ್ನಡ ವಾಹಿನಿಯ ಪವಿತ್ರ ಬಂಧನ ಧಾರಾವಾಹಿ ಪ್ರಸಾರ ಆರಂಭಿಸಿ ಮೂರೇ ದಿನಕ್ಕೆ ಭಾರಿ ಸದ್ದು ಮಾಡುತ್ತಿದೆ. ಯಾಕಂದ್ರೆ ಧಾರಾವಾಹಿಯ ಕಥೆ ಅಷ್ಟೊಂದು ಚೆನ್ನಾಗಿದೆ. ಜೊತೆಗೆ ಪ್ರತಿಯೊಬ್ಬ ನಟರು ಕೂಡ ಅವರ ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತಿದ್ದಾರೆ.
ಏನಿದು ಸೀರಿಯಲ್ ಕಥೆ?
ಧಾರಾವಾಹಿಯ ಪ್ರೊಮೋದಲ್ಲಿ ತೋರಿಸಿದಂತೆ ಕಥೆ ಹೀಗಿದೆ, ಅಣ್ಣ ದೇವದತ್ ದೇಶ್ಮುಖ್ ಅಂದ್ರೆ ತಮ್ಮ ತಿಲಕ್ ದೇಶ್ಮುಖ್ ಗೆ ಪ್ರಾಣ, ನಾನು ಪ್ರೀತಿಸುವ ಹುಡುಗಿಯನ್ನು ಅಣ್ಣನ ಆಶೀರ್ವಾದ ಪಡೆದು ಮದುವೆಯಾಗಬೇಕು ಎನ್ನುವ ಆಸೆ ತಿಲಕ್ ನದು, ಆದರೆ ವಿಧಿಯಾಟವೇ ಬೇರೆಯಾಗಿರುತ್ತದೆ. ಕೊನೆಗೆ ತಮ್ಮ ಪ್ರೀತಿಸುವ ಹುಡುಗಿ ಪವಿತ್ರವನ್ನು ಅಣ್ಣ ದೇವದತ್ ಮದುವೆಯಾಗುತ್ತಾನೆ.
ಏನಿದು ಟ್ವಿಸ್ಟ್?
ಆದರೆ ಈ ರೀತಿ ಟ್ವಿಸ್ಟ್ ಕೊಟ್ಟಿದ್ದು ಯಾಕೆ ಅನ್ನೋದೆ ಗೊತ್ತಿಲ್ಲ. ಅಣ್ಣ -ತಮ್ಮನಿಗೆ ಒಬ್ಬರನ್ನು ಕಂಡ್ರೆ ಮತ್ತೊಬ್ಬರಿಗೆ ಜೀವ. ತಮ್ಮ ಏನೇ ಮಾಡಿದರೂ ಅದನ್ನು ನಡೆಸಿಕೊಡುವ ಅಣ್ಣ, ತನ್ನ ತಮ್ಮ ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನೇ ಯಾಕೆ ಮದುವೆಯಾದ ಅನ್ನೋದು ಮಾತ್ರ ಸೀರಿಯಲ್ ನೋಡಿದರೇನೆ ಗೊತ್ತಾಗಬಹುದು.
ಪಾತ್ರಗಳನ್ನು ಮೆಚ್ಚಿಕೊಂಡ ವೀಕ್ಷಕರು
ಈಗಾಗಲೇ ಪ್ರಸಾರವಾಗಿರುವ ಧಾರಾವಾಹಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ದೇವದತ್, ತಿಲಕ್ ಮತ್ತು ಪವಿತ್ರ ಮೂವರ ಕ್ಯಾರೆಕ್ಟರ್ ಅದ್ಭುತವಾಗಿದ್ದು, ಅಣ್ಣ -ತಮ್ಮನ ಭಾಂದವ್ಯ ಹಾಗೂ ಪವಿತ್ರ ಮತ್ತು ತಿಲಕ್ ಪ್ರೀತಿ ಇವೆರಡೂ ನೋಡೋದಕ್ಕೆ ತುಂಬಾನೆ ಸುಂದರವಾಗಿದೆ, ಈ ಸೀರಿಯಲ್ ಸೂಪರ್ ಹಿಟ್ ಆಗೋದು ಖಚಿತಾ ಎಂದಿದ್ದಾರೆ.
ಈ ಧಾರಾವಾಹಿಯಲ್ಲಿ ಯಾರೆಲ್ಲಾ ನಟಿಸ್ತಾರೆ?
ಪ್ರಮುಖ ಪಾತ್ರದಲ್ಲಿ ಸೂರಜ್ ಸಿಂಗ್, ಅಮೂಲ್ಯ ಭಾರಧ್ವಜ್ ನಟಿಸುತ್ತಿದ್ದಾರೆ. ಇವರಲ್ಲದೇ ಯಶಸ್ ಕೃಷ್ಣ, ರುಹಾನಿ ಶೆಟ್ಟಿ, ಅನುಷಾ ಸೇರಿ ಹಲವಾರು ಜನರು ನಟಿಸಿದ್ದಾರೆ. ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ವೀಕ್ಷಕರು ಸೀರಿಯಲ್ ಇಷ್ಟಪಟ್ಟಿದ್ದಾರೆ.
ಸೂರಜ್ ಸಿಂಗ್ ನಟನೆಗೆ ಭಾರಿ ಮೆಚ್ಚುಗೆ
ಇನ್ನು ಬಾಣಸಿಗನಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಸೂರಜ್ ಸಿಂಗ್, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗದೇ ಭಾರಿ ಸದ್ದು ಮಾಡಿದ್ದರು. ಅವರ ನಡತೆಯನ್ನು ಜನ ಇಷ್ಟಪಟ್ಟಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಕೆಲವೇ ದಿನಗಳಲ್ಲಿ ‘ಪವಿತ್ರ ಬಂಧನ’ ಸೀರಿಯಲ್ ಪ್ರೊಮೋ ಕೂಡ ರಿಲೀಸ್ ಆಗಿ ಅಚ್ಚರಿ ಮೂಡಿಸಿತ್ತು. ಇದೀಗ ಸಿರೀಯಲ್ ಪ್ರಸಾರವಾದ ಬಳಿಕ ಸೂರಜ್ ನಟನೆ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

