ಅಂತರಪಟ : ಹೆಂಡ್ತಿ ಸಿಕ್ರೆ ಆರಾಧನಾ ರೀತಿ ಇರ್ಬೇಕು ಅಂತಿದ್ದಾರೆ ನೆಟ್ಟಿಗರು
ಅಂತರಪಟ ಧಾರಾವಾಹಿಯಲ್ಲಿ ಅನೀರಿಕ್ಷಿತ ಟ್ವಿಸ್ಟ್ ಸಿಕ್ಕಿದ್ದು ನೋಡಿ ವೀಕ್ಷಕರು ಖುಷಿ ಪಟ್ಟಿದ್ದು, ಆರಾಧನಾ ಬುದ್ದಿವಂತಿಕೆಗೆ ಜನ ತಲೆದೂಗಿದ್ದು, ಹೆಂಡ್ತಿ ಸಿಕ್ಕರೆ ಆರಾಧನಾ ರೀತಿ ಇರಬೇಕು ಅಂತಿದ್ದಾರೆ ನೆಟ್ಟಿಗರು.

ಅಂತರಪಟ ಧಾರವಾಹಿಯಲ್ಲಿ (Antarapata Serial) ದೊಡ್ಡದಾದ ಟ್ವಿಸ್ಟ್ ಸಿಗುವ ಮೂಲಕ ಕಥೆ ಸದ್ಯಕ್ಕೆ ಕುತೂಹಲಕಾರಿ ಘಟ್ಟ ತಲುಪಿದೆ. ಸೀರಿಯಲ್ ನಲ್ಲಿ ಆರಾಧನಾ ತನ್ನ ಗಂಡನಿಗೆ ಎರಡನೇ ಮದುವೆ ಮಾಡೋ ತಯಾರಿ ನಡೆಸಿ, ತಾಳಿ ಕಟ್ಟುವಲ್ಲಿವರೆಗೂ ಹೋಗಿ ನಂತರ ರೇಷ್ಮಾ ನಿಜ ಬಣ್ಣ ಬಯಲು ಮಾಡಿದ್ದಳು.
ರೇಷ್ಮಾ ಬಂಡವಾಳವನ್ನೆಲ್ಲಾ ಬಯಲಿಗೆಳೆದು, ರೇಷ್ಮಾ ಹೊಟ್ಟೆಯಲ್ಲಿ ಬೆಳೆಯುತ್ತಿರೋದು ಸುಶಾಂತ್ ಮಗು ಅಲ್ಲ ಅನ್ನೋದನ್ನ ಎಲ್ಲರ ಎದುರು ಸಾಬೀತು ಮಾಡಿ, ಸುಶಾಂತ್ ತನಗೆ ಈಗಾಗಲೇ ತಾಳಿ ಕಟ್ಟಿದ್ದಾನೆ, ಅವನು ನನಗೆ ಮಾತ್ರ ಗಂಡ ಆಗೋದಕ್ಕೆ ಸಾಧ್ಯ. ಬೇರೆ ಯಾರ ಗಂಡ ಆಗೋದಕ್ಕೆ ನಾನು ಬಿಡಲ್ಲ, ನನ್ನ ಗಂಡನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎನ್ನುತ್ತಾಳೆ.
ಇದೀಗ ಆರಾಧನಾ ಸುಶಾಂತ್ ನನ್ನು ಮತ್ತೆ ಮದುವೆಯಾಗಿ ಮನೆಗೆ ಎಂಟ್ರಿ ಕೊಟ್ಟಾಗಿದೆ. ಅಮಲಾಗೆ ಆರಾಧನಾ ತಿರುಗೇಟು ಕೂಡ ನೀಡಿದ್ದಾಳೆ. ಆದರೆ ಆಕೆಯ ಬಂಡವಾಳವನ್ನು ಇನ್ನು ಯಾರ ಮುಂದೆಯೂ ಸಹ ಬಯಲಿಗೆಳೆಯಲಿಲ್ಲ. ಕಾರಣ ಮನೆಯವರ ನಂಬಿಕೆಗೆ ಪೆಟ್ಟು ಬೀಳೋ ಸಾಧ್ಯತೆ ಇದೆ ಹಾಗಾಗಿ. ಇನ್ನು ಮುಂದೆ ಅಮಲಾಗೆ ಆರಾಧನಾ ದೊಡ್ಡದಾದ ತಿರುಗೇಟು ಕೊಡೋದು ಗ್ಯಾರಂಟಿ.
ಆರಾಧನಾ ನಡೆ, ಟ್ವಿಸ್ಟ್ ಕೊಟ್ಟದ್ದು ನೋಡಿ ಹಾಗೂ ಗಂಡನ ಮೇಲಿರುವ ನಂಬಿಕೆ ನೋಡಿ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಸೂಪರ್ ಆರಾಧನಾ ಸಿಕ್ರೆ ನಿಂತರ ಹೆಂಡ್ತಿ ಸಿಗ್ಬೇಕು ಅಂತ ಹೇಳ್ತಿದ್ದಾಳೆ ಜನ. ಅಷ್ಟೇ ಅಲ್ಲ ಇಷ್ಟು ದಿನ ಆರಾಧಾನಾ ಗೋಳು ನೋಡಿ ಸಾಕಾಗಿದ್ದ ಜನ ಈಗ ಅಬ್ಬಾ ಸೂಪರ್ ಈಗ ಈ ಸೀರಿಯಲ್ ಗೆ ಕಳೆ ಬಂತು ನೋಡಿ ಎಂದಿದ್ದಾರೆ.
ಮತ್ತೆ ಒಬ್ಬರು ಕಾಮೆಂಟ್ ಮಾಡಿ, ಅಲ್ಲ ನಿಮಗೆ ಮಗು ಆಗದೇ ಇದ್ದಾಗ ಅಮಲಾಳನ್ನು ದತ್ತು ತೆಗೊಂಡ್ರಿ, ಈಗ ಯಾಕೆ ಈ ರೀತಿ ಅವರನ್ನು ಕೆಟ್ಟದಾಗಿ ತೋರಿಸ್ತೀರಿ, ನೀವು ಮಾಡೋದು ತಪ್ಪಲ್ವಾ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕೆಲವರು ರಿಪ್ಲೈ ಕೂಡ ಕೊಟ್ಟಿದ್ದು, ಕೆಟ್ಟದ್ದನ್ನು ಮಾಡುವವರನ್ನು ಸುಮ್ನೆ ಬಿಡಬೇಕು ಅಂತ ಹೆಳ್ತೀರಾ ಅಂತ ಕೇಳಿದ್ದಾರೆ. ಒಟ್ಟಲ್ಲಿ ಮುಂದೆ ಏನಾಗಲಿದೆ ಅನ್ನೋದನ್ನ ಕಾದು ನೋಡಬೇಕು.
ಜೊತೆಗೆ ಆರಾಧನಾ ಮತ್ತು ಅಜ್ಜಿಯ ಸೂಪರ್ ಟ್ವಿಸ್ಟ್ ನಿಂದ ಅಮಲಾಗೆ ಇನ್ನು ಮುಂದೆ ಕಾದಿದೆ ಶಾಖ್, ಆರಾಧನಾ ಸುಶಾಂತ್ ಜೊತೆ ಖುಷಿಯಾಗಿರು, ಇನ್ನು ಅಮಲಾ ಕಥೆಯನ್ನು ಅಜ್ಜಿ ನೋಡ್ಕೋತಾರೆ ಎಂದು ಜನರು ಹೇಳ್ತಿದ್ದಾರೆ. ಜನ ಹೇಳಿದ ಹಾಗೆ ಆಗುತ್ತಾ? ಅಥವಾ ಅಮಲಾ ಹೊಸ ಆಟ ಶುರು ಮಾಡ್ತಾಳ ಅನ್ನೋದನ್ನ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.