ಬಿಗ್ ಬಾಸ್ ವೈಷ್ಣವಿ ಬೀಚ್ ಫೋಟೋ ವೈರಲ್; ಜೊತೆಗಿರುವ ಅವನು ಯಾರು?
ನಟಿ ವೈಷ್ಣವಿ ಗೌಡ ಸೋಶಿಯಲ್ ಮೀಡೀಯಾದಲ್ಲಿ ನಟ ಗಗನ್ ಚಿನ್ನಪ್ಪ ಮತ್ತು ಪುಟಾಣಿ ರಿತು ಸಿಂಗ್ ಫೋಟೋ ಶೇರ್ ಮಾಡಿದ್ದು, Cheers to good times..ಎಂದು ಬರೆದುಕೊಂಡಿದ್ದಾರೆ. ಏನಿದರ ಕಥೆ ನೋಡೋಣ…

ಅಗ್ನಿಸಾಕ್ಷಿ ಬಳಿಕ ಬೇರೆ ಯಾವ ಸೀರಿಯಲ್‌ನಲ್ಲೂ ಕಾಣಿಸಿಕೊಳ್ಳದ ನಟಿ ವೈಷ್ಣವಿ ಗೌಡ (Vishnavi Gowda), ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸಿ ಜನಪ್ರಿಯತೆ ಗಳಿಸಿದ್ದರು. ಅದಾಗಿ ಹಲವಾರು ಸಮಯದ ನಂತರ ತಮ್ಮ ಹೊಸ ಸೀರಿಯಲ್‌ನ ಬಗ್ಗೆ ಮಾಹಿತಿ ನೀಡಿದ್ದರು.
ನಟಿ ವೈಷ್ಣವಿ ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸುವುದಾಗಿ ತಿಳಿಸಿದ್ದರು. ಅಲ್ಲದೇ ಈಗಾಗಲೇ ಸೀರಿಯಲ್‌ನ ಎರಡು ಪ್ರೋಮೊಗಳು ಸಹ ಬಿಡುಗಡೆಯಾಗಿ, ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಸೀರಿಯಲ್ ಯಾವಾಗ ಪ್ರಸಾರವಾಗಲಿದೆ ಅನ್ನೋದೆ ತಿಳಿದಿಲ್ಲ.
ಇದೀಗ ವೈಷ್ಣವಿ ಗೌಡ ತಮ್ಮ ಸೋಶಿಯಲ್ ಮೀಡಿಯಾ (social media) ಖಾತೆಯಲ್ಲಿ ನಟ ಗಗನ್ ಚಿನ್ನಪ್ಪ ಮತ್ತು ಪುಟಾಣಿ ರಿತು ಜೊತೆಗಿನ ಕಡಲ ತೀರದ ಫೋಟೋಗಳನ್ನು ಶೇರ್ ಮಾಡಿದ್ದು, Cheers to good times..ಎಂದು ಬರೆದುಕೊಂಡಿದ್ದಾರೆ. ಜನರಲ್ಲಿ ಇದೀಗ ಮತ್ತಷ್ಟು ಕುತೂಹಲ ಮೂಡುವಂತೆ ಮಾಡಿದೆ.
ಸೀತಾ ರಾಮ ಸೀರಿಯಲ್‌ನ ಮೊದಲ ಪ್ರೋಮೋ ಡೀಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು, ಅದಾಗಿ ಮೂರು ತಿಂಗಳ ಬಳಿಕ ಎರಡನೇ ಪ್ರೋಮೊ ಸಹ ಬಿಡುಗಡೆಯಾಗಿತ್ತು. ಆದ್ರೆ ಸೀರಿಯಲ್ ಮಾತ್ರ ಯಾವಾಗ ಆರಂಭವಾಗಲಿದೆ? ಯಾವ ಸೀರಿಯಲ್ ಮುಕ್ತಾಯವಾಗಲಿದೆ ಅನ್ನೋದು ಮಾತ್ರ ಇಲ್ಲಿವರೆಗೆ ತಿಳಿದು ಬಂದಿಲ್ಲ.
ಸತ್ಯ ಸೀರಿಯಲ್ ನಿರ್ದೇಶಕಿ ಸ್ವಪ್ನಾ ಕೃಷ್ಣ ಅವರೇ ಈ ಹೊಸ ಸೀರಿಯಲ್ ‘ಸೀತಾ ರಾಮ’ ನಿರ್ದೇಶಿಸುತ್ತಿದ್ದಾರೆ. ಸೀರಿಯಲ್‌ನ ಪ್ರೊಮೋ (serial promo) ನೋಡಿಯೇ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಸೀತಾ ಮತ್ತು ರಾಮನನ್ನು ಒಂದು ಮಾಡಲು ಒಂದು ಮಗು ಕೂಡ ಮಧ್ಯದಲ್ಲಿದೆ.
ಸೀತಾ ರಾಮ ಪ್ರೋಮೊದಲ್ಲಿ (Sita Rama Promo) ತೋರಿಸಿರುವಂತೆ ನಾಯಕಿ ವೈಷ್ಣವಿ ಅವರು ಡಿವೋರ್ಸಿಯಾಗಿದ್ದು, ಅವರು ಪ್ರೆಗ್ನೆಂಟ್ ಆಗಿರುವಾಗಲೇ ಗಂಡ ಅವರನ್ನು ತ್ಯಜಿಸಿರುತ್ತಾರೆ. ಆಕೆ ಒಬ್ಬಳೆ ನಿಂತು ನಾಲ್ಕು ವರ್ಷದ ಮಗಳನ್ನು ಬೆಳೆಸಿರುತ್ತಾಳೆ. ಇದೀಗ ಆಕೆಯನ್ನು ಮದುವೆಯಾಗಲು ಮಗಳ ಒಪ್ಪಿಗೆಗೆ ಕಾಯುವ ಹುಡುಗನಾಗಿ ಮೊದಲ ಬಾರಿ ಗಗನ್ ಚಿನ್ನಪ್ಪ ವೈಷ್ಣವಿ ಜೊತೆ ನಟಿಸುತ್ತಿದ್ದಾರೆ.