- Home
- Entertainment
- TV Talk
- Vaishnavi Gowda Marriage Photos: ರೆಸಾರ್ಟ್‌ನಲ್ಲಿ ಅತಿ ವಿಜೃಂಭಣೆಯಿಂದ ನಡೆದ ವೈಷ್ಣವಿ ಗೌಡ ಸಂಗೀತ!
Vaishnavi Gowda Marriage Photos: ರೆಸಾರ್ಟ್‌ನಲ್ಲಿ ಅತಿ ವಿಜೃಂಭಣೆಯಿಂದ ನಡೆದ ವೈಷ್ಣವಿ ಗೌಡ ಸಂಗೀತ!
ಸೀತಾರಾಮ, ಅಗ್ನಿಸಾಕ್ಷಿ, ಪುನರ್‌ವಿವಾಹ, ದೇವಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಈಗಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆ ಬಗ್ಗೆ ಅಪಾರ ಕನಸು ಕಂಡಿದ್ದ ವೈಷ್ಣವಿ ಗೌಡಗೆ ಕೊನೆಗೂ ಕಂಕಣಭಾಗ್ಯ ಕೂಡಿ ಬಂದಿದೆ.
ನಟಿ ವೈಷ್ಣವಿ ಗೌಡ ಅವರು ಉತ್ತರ ಪ್ರದೇಶದ ಅನುಕೂಲ್ ಮಿಶ್ರಾ ಅವರ ಜೊತೆ ಮದುವೆಯಾಗಿದ್ದಾರೆ.
ಉತ್ತರ ಪ್ರದೇಶದ ಪದ್ಧತಿ ಪ್ರಕಾರ ಈ ಮದುವೆ ನಡೆದಿದೆ ಎನ್ನಲಾಗಿದೆ. ವೈಷ್ಣವಿ ಹಂಚಿಕೊಂಡ ಫೋಟೋಗಳು ಕೂಡ ಇದಕ್ಕೆ ಸಾಕ್ಷಿ ಆಗಿವೆ.
ವೈಷ್ಣವಿ ಗೌಡ ಅವರು ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದು, ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ವೈಷ್ಣವಿ ಗೌಡ ಅವರು ಮೆಟ್ರಿಮೋನಿ ಮೂಲಕ ಅನುಕೂಲ್ ಮಿಶ್ರಾ ಅವರ ಕುಟುಂಬದ ಪರಿಚಯ ಮಾಡಿಕೊಂಡಿದ್ದರು.
ಮ್ಯಾಟ್ರಿಮೋನಿಯಲ್ಲಿ ವೈಷ್ಣವಿ ಗೌಡಗೆ ಹುಡುಗನನ್ನು ಹುಡುಕಲಾಗುತ್ತಿತ್ತು. ಹಾಗೆಯೇ ಅನುಕೂಲ್ ಸಿಕ್ಕಿದ್ದಾರೆ.
ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಮದುವೆ ಫಿಕ್ಸ್ ಆಗಿ ಒಂದು ವರ್ಷ ಆಗಿದೆ. ಈ ಬಳಿಕ ಅವರು ಎಲ್ಲರ ಮುಂದೆ ಘೋಷಣೆ ಮಾಡಿ ಮದುವೆಯಾಗಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ, ಮದುವೆ ಮಾಡಿಕೊಂಡಿದ್ದರು. ಈ ಸಭಾರಂಭಕ್ಕೆ ಕನ್ನಡ ಕಿರುತೆರೆಯ ಗಣ್ಯರು ಆಗಮಿಸಿದ್ದರು.
ವೈಷ್ಣವಿ ಗೌಡ ಅವರು ಸಂಗೀತದಲ್ಲಿ ನಟಿ ಅಮೂಲ್ಯ ಜೊತೆಗೆ ಇನ್ನಿತರ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡಿದ್ದಾರೆ.
ಕನ್ನಡ ನಟಿ ವೈಷ್ಣವಿ ಗೌಡ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ. ಇವರ ಸಂಗೀತದಲ್ಲಿ ಕೂಡ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಅನುಕೂಲ್ ಮಿಶ್ರ ಅವರು ಕನ್ನಡದಲ್ಲಿ ವೈಷ್ಣವಿ ಗೌಡಗೆ ನಾನು ನಿನ್ನ ಪ್ರೀತಿಸುವೆ ಎಂದು ಹೇಳಿದ್ದರು.
ವೈಷ್ಣವಿ ಗೌಡ ಅವರದ್ದು ನಟನೆಯಾದರೆ, ಅನುಕೂಲ್ ಮಿಶ್ರಾ ಅವರದ್ದು ಸೇನೆಯಲ್ಲಿ ಸೇವೆ ಕೆಲಸ.