ಹಲವು ದಿನಗಳ ಬಳಿಕ ಈವೆಂಟ್‌ನಲ್ಲಿ ಉರ್ಫಿ ಜಾವೇದ್, ಗ್ಲಾಮರಸ್ ಎಂಟ್ರಿಗೆ ಫಿದಾ
ಮುಂಬೈನ ಪ್ರತಿಷ್ಠಿತ ಮ್ಯಾಗಜೀನ್ ತನ್ನ ಮೊದಲ ಆವೃತ್ತಿಯನ್ನ ಲಾಂಚ್ ಮಾಡಿದೆ. ಸೋಶಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಗ್ಲಾಮರಸ್ ಲುಕ್‌ನೊಂದಿಗೆ ಈವೆಂಟ್‌ಗೆ ಎಂಟ್ರಿಕೊಟ್ಟಿದ್ದರೆ. ಉರ್ಫಿ ಲುಕ್ ಹಲವರ ಆಕರ್ಷಿಸಿದೆ

ಗ್ಲಾಮರಸ್ ಲುಕ್ ಇರೋ ಮ್ಯಾಗಜೀನ್ ತನ್ನ ಮೊದಲ ಆವೃತ್ತಿ ಲಾಂಚ್ ಮಾಡಿದೆ. ಇಂದಿನ ಸಂಸ್ಕೃತಿಯನ್ನ ರೂಪಿಸುತ್ತಿರುವ ಹೊಸಬರಿಗೆ ಗೌರವ ಅಂತ ಮ್ಯಾಗಜೀನ್ ಹೇಳಿದೆ. ಉರ್ಫಿ ಜಾವೇದ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.
ಮ್ಯಾಗಜೀನ್ ಲಾಂಚ್ ಆಚರಣೆಗಾಗಿ ಮುಂಬೈನ ಸೋಹೋ ಹೌಸ್‌ನಲ್ಲಿ ಖಾಸಗಿ ಡಿನ್ನರ್ ಮತ್ತು ಗ್ಲಾಮರ್ ನೈಟ್ ಆಯೋಜಿಸಲಾಗಿತ್ತು. ಹಲವು ನಟಿಯರು, ಮಾಡೆಲ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಉರ್ಫಿ ಜಾವೇದ್ ತಮ್ಮ ಎಂದಿನಂತೆ ವಿಶೇಷ ವಿನ್ಯಾಸದ ಫ್ಯಾಶನ್‌ನೊಂದಿಗೆ ಆಗಮಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉರ್ಫಿ ಜಾವೇದ್ ಸಿಲ್ವರ್ ಶಾರ್ಟ್ ಡ್ರೆಸ್‌ನಲ್ಲಿ ಮಿಂಚಿದ್ರು. ರೆಡ್ ಕಾರ್ಪೆಟ್‌ನಲ್ಲಿ ಉರ್ಫಿ ತಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಮೂಲಕ ಗಮನ ಸೆಳೆದರು. ಉರ್ಫಿ ಸಿಲ್ವರ್ ಬಾಡಿಸೂಟ್ ಮತ್ತು ಪಿಂಕ್, ಗ್ರೀನ್ ಪ್ರಿಂಟ್ ಇರೋ ಕೇಪ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಉರ್ಫಿ ಫ್ಯಾಶನ್ ಬಗ್ಗೆ ಆರಂಭದಲ್ಲೇ ಭಾರಿ ಟೀಕೆ ವ್ಯಕ್ತವಾಗುತ್ತಿದ್ದರೂ, ಬಳಿಕ ಹಲವು ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಪಾಪರಾಜಿಗಳಿಗೂ ಉರ್ಫಿ ಫೇವರಿಟ್. ಇತ್ತ ಸೋಶಿಯಲ್ ಮೀಡಿಯಾ ಮೂಲಕ ಉರ್ಫಿ ಭಾರಿ ಸಂಚಲನ ಸೃಷ್ಟಿಸುತ್ತಾರೆ.
ಉರ್ಫಿ "ಫಾಲೋ ಕರ್ಲೋ ಯಾರ್ವೆ ಬ್ ಸೀರೀಸ್‌ನಲ್ಲಿ ನಟಿಸಿದ್ದಾರೆ. ಅಮೇಜಾನ್ ಪ್ರೈಮ್‌ನಲ್ಲಿ ಈ ವೆಬ್ ಸೀರಿಸ್ ಲಭ್ಯವಿದೆ.