MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಯುಗಾದಿ ಹಬ್ಬಕ್ಕೆ ಶುಭ ಕೋರಿ ಸಂಭ್ರಮಿಸಿದ ಹಿರಿತೆರೆ ಕಿರುತೆರೆ ತಾರೆಯರು

ಯುಗಾದಿ ಹಬ್ಬಕ್ಕೆ ಶುಭ ಕೋರಿ ಸಂಭ್ರಮಿಸಿದ ಹಿರಿತೆರೆ ಕಿರುತೆರೆ ತಾರೆಯರು

ಇಂದು ರಾಜ್ಯಾದ್ಯಂತ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಿದ್ದು, ಈ ಶುಭ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯ ತಾರೆಯರು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.  

2 Min read
Pavna Das
Published : Apr 09 2024, 02:54 PM IST
Share this Photo Gallery
  • FB
  • TW
  • Linkdin
  • Whatsapp
114

ಆಶಿಕಾ ರಂಗನಾಥ್
ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಆಶಿಕಾ ರಂಗನಾಥ್ ಕೂಡ ಹ್ಯಾಪಿ ಯುಗಾದಿ, ಹೊಸ ವರ್ಷದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. 

214

ಸೋನು ಗೌಡ
ಕನ್ನಡ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಸೋನು ಗೌಡ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. 
 

314

ಕೃತಿಕಾ ರವೀಂದ್ರ 
ಭೂಮಿಗೆ ಬಂದ ಭಗವಂತ ಸೀರಿಯಲ್ ನಲ್ಲಿ ನಟಿಸುತ್ತಿರುವ ಕೃತಿಕಾ ರವೀಂದ್ರ, ಬೇವು ಬೆಲ್ಲದ ತಟ್ಟೆಯನ್ನು ಕೈಯಲ್ಲಿ ಹಿಡಿದು ಯುಗಾದಿ ಹಬ್ಬದ ಶುಭಾಶಯಗಳು. 

414

ನಮ್ರತಾ ಗೌಡ
ಯುಗಾದಿಯ ಶುಭ ಸಂದರ್ಭದಲ್ಲಿ ನಿಮ್ಮ ಜೀವನವು ಸುಖ ಸಂತೋಷ, ಸಮೃದ್ಧಿ ಹಾಗೂ ಯಶಸ್ಸಿನಿಂದ ತುಂಬಲಿ ಎಂದು ಹಾರೈಸುತ್ತೇನೆ. ಯುಗಾದಿ ಹಬ್ಬದ ಶುಭಾಶಯಗಳು! ಎಂದು ಶುಭ ಕೋರಿದ್ದಾರೆ. 

514

ನೇಹಾ ಗೌಡ
ಕನ್ನಡ ಕಿರುತೆರೆಯ ಬೊಂಬೆ ಎಂದೇ ಜನಪ್ರಿಯತೆ ಪಡೆದಿರುವ ನೇಹಾ ಗೌಡ, ಬಿಳಿ ಬಣ್ಣದ ಚೂಡಿದಾರ್ ಧರಿಸಿ ಡ್ಯಾನ್ಸ್ ಪೋಸ್ ನೀಡುತ್ತಾ ಯುಗಾದಿ ಶುಭ ಕೋರಿದ್ದಾರೆ. 

614

ಶಾಸ್ತ್ರೀ ಶಿವಮೊಗ್ಗ, ದೀಪಕ್ ಸುಬ್ರಹ್ಮಣ್ಯ
ಲಕ್ಷ್ಮೀ ನಿವಾಸ ಸೀರಿಯಲ್ ನಟರಾದ ಶಾಸ್ತ್ರೀ, ದೀಪಕ್, ದಿಶಾ ಮದನ್ ಜೊತೆಯಾಗಿ ನಿಂತು ಎಲ್ಲೆಡೆ ಹಸಿರಾಗಲಿ, ಭೂಮಿ‌ ತಂಪಾಗಲಿ, ಸಕಲ‌ ಜೀವಿಯೂ ಸಂತೃಪ್ತಿಯಿಂದಿರುವಂತಾಲಿ,ಆಗಾಗ ಕಹಿಯು ಬರಲಿ, ( ಹೆಚ್ಚು ಬೇಡ) ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಎಂದು ಶುಭ ಕೋರಿದ್ದಾರೆ.

714

ಕೃಷಿ ತಾಪಂಡ 
ಕಂಡ ಕನಸುಗಳೆಲ್ಲಾ ಹೊಸ ವರ್ಷದ ಸಿಂಚನದಲ್ಲ ಸಮೃದ್ಧವಾಗಿ ಬೆಳೆದು ನನಸಾಗಲಿ. ಯುಗಾದಿ ಹಬ್ಬದ ಶುಭಾಶಯಗಳು ಎಂದು ಕೃಷಿ ತಾಪಂಡ ವಿಶ್ ಮಾಡಿದ್ದಾರೆ. 

814

ಮಿಲನ ನಾಗರಾಜ್ ಮತ್ತು ಕೃಷ್ಣ 
ತಾಯಿಯಾಗುವ ಸಂಭ್ರಮದಲ್ಲಿರುವ ನಟಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ದಂಪತಿಗಳು ಸಹ ಹಬ್ಬಕ್ಕೆ ಸಾಂಪ್ರಾದಾಯಿಕೆ ಉಡುಗೆ ಧರಿಸಿ ಶುಭ ಕೋರಿದ್ದಾರೆ. 

914

ಕಾವ್ಯಾ ಗೌಡ
ಮಂಗಳ ಗೌರಿ ಮದುವೆ ಖ್ಯಾತಿಯ ನಟಿ ಕಾವ್ಯಾ ಗೌಡ, ಅಂದವಾಗಿ ಸಿಂಗಾರಗೊಂಡು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭ ಕೋರಿದ್ದಾರೆ. 

1014

ಇಶಾನಿ 
ಬಿಗ್ ಬಾಸ್ ಸೀಸನ್ 10 ಖ್ಯಾತಿಯ ನಟಿ, ರ್ಯಾಪರ್ ಇಶಾನಿ, ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಯುಗಾದಿ ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. 

1114

ಅನುಪಮಾ ಗೌಡ
ನಟಿ ಹಾಗೂ ನಿರೂಪಕಿಯಾಗಿ ಜನಪ್ರಿಯತೆ ಪಡೆದಿರುವ ಅನುಪಮಾ ಗೌಡ ಈ ಯುಗಾದಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಬದುಕಲ್ಲಿ ಸಂತೋಷ ಹಾಗೂ ನೆಮ್ಮದಿಯನ್ನು ತರಲಿ ಎಂದು ಹಾರೈಸಿದ್ದಾರೆ. 

1214

ಆರಾಧನಾ ರಾಮ್ 
ಬೇವು ಬೆಲ್ಲದಂತೆ ಜೀವನದಲ್ಲಿ ಬರುವ ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸೋಣ. ಯುಗಾದಿ ಹಬ್ಬದ ಶುಭಾಶಯಗಳು! ಎಂದು ನಟಿ ಆರಾಧನಾ ರಾಮ್ ಶುಭ ಕೋರಿದ್ದಾರೆ. 

1314

ನಭಾ ನಟೇಶ್
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು! ಈ ನೂತನ ವರ್ಷ ನಿಮಗೆ ಹೆಚ್ಚು ಆನಂದ ಮತ್ತು ಸಮೃದ್ಧಿಯನ್ನು ತಂದಿರಲಿ. ಹೊಸ ಪ್ರಾರಂಭಗಳಿಗೆ ಹಾಗೂ ಹೊಸ ಅನುಭವಗಳಿಗೆ ಮುಂದೆ ಸಿದ್ಧವಾಗಿರಿ. ಹೊಸ ಸಂವತ್ಸರದ ಹಾರೈಕೆಯೊಂದಿಗೆ ನಮ್ಮ ಯುಗಾದಿ ಹಬ್ಬದ ಶುಭಾಶಯಗಳು! ಎಂದು ಹಾರೈಸಿದ್ದಾರೆ. 

1414

ರಾಗಿಣಿ ದ್ವಿವೇದಿ 
ಯುಗಾದಿಯ ಶುಭಾಶಯಗಳು! ಈ ಹಬ್ಬದಲ್ಲಿ ನಿಮ್ಮ ಜೀವನಕ್ಕೆ ಸಮೃದ್ಧಿ, ಆನಂದ ಮತ್ತು ಆಶೀರ್ವಾದಗಳು ಬರಲಿ. ಹೊಸ ವರ್ಷವನ್ನು ಸಮೃದ್ಧಿಯಿಂದ ಸ್ವಾಗತಿಸೋಣ, ಹೃದಯದಲ್ಲಿ ಆಭಾಸವನ್ನು ಕೊನೆಗಾಣಿಸೋಣ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಯುಗಾದಿ ಹಬ್ಬ
ನಟಿ
ಸ್ಯಾಂಡಲ್‌ವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved