ಸೀರಿಯಲ್ ಶೂಟಿಂಗ್ ವೇಳೆ ಸಮುದ್ರದಲ್ಲಿ ಮುಳುಗಿ ಸಾವು ಕಂಡ ನಟನ ಪ್ರಕರಣದಲ್ಲಿ ಟ್ವಿಸ್ಟ್
ಸೀರಿಯಲ್ ಶೂಟಿಂಗ್ ವೇಳೆ ಸಮುದ್ರದಲ್ಲಿ ಮುಳುಗಿ ಸಾವು ಕಂಡ ನಟನ ಪ್ರಕರಣದಲ್ಲಿ ಟ್ವಿಸ್ಟ್, 43ರ ಹರೆಯದ ನಟ ಸೀರಿಯಲ್ ಶೂಟಿಂಗ್ ನಡುವೆ ದುರಂತ ಅಂತ್ಯ ಕಂಡ ಘಟನೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಮುದ್ರದಲ್ಲಿ ನಿಂತು ಶೂಟಿಂಗ್ ವೇಳೆ ಅವಘಡ
ಸೀರಿಯಲ್ ಶೂಟಿಂಗ್ ವೇಳೆ ಸಮುದ್ರದಲ್ಲಿ ಮುಳುಗಿ ದುರಂತ ಅಂತ್ಯ ಕಂಡ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ ಘಟನೆ ಸೀರಿಯಲ್ ಸೇರಿ ಸಿನಿಮಾರಂಗವನ್ನೇ ಬೆಚ್ಚಿ ಬೀಳಿಸಿದೆ. ರಾಹುಲ ಬ್ಯಾನರ್ಜಿ ಹಾಗೂ ಸಹ ನಟಿ ಶ್ವೇತಾ ಮಿಶ್ರಾ ಅವರ ಸೀನ್ ಒಂದನ್ನು ಸಮುದ್ರದ ನೀರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ದುರಂತ ನಡೆದಿದೆ. ಈ ಘಟನೆಯಲ್ಲಿ ಕೆಲ ತಿರುವು ಎದುರಾಗಿದೆ.
ಸಾವು ಪ್ರಕರಣದಲ್ಲಿ ಟ್ವಿಸ್ಟ್
ರಾಹುಲ ಬ್ಯಾನರ್ಜಿ ಸಾವು ಪ್ರಕರಣದಲ್ಲಿ ಕೆಲ ತಿರುವು ಎದುರಾಗಿದೆ. ಪ್ರಮುಖವಾಗಿ ರಾಹುಲ್ ಬ್ಯಾನರ್ಜಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತಕ್ಷಣಕ್ಕೆ ಸೀರಿಯಲ್ ತಂಡಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಒಡಿಶಾದ ತಲ್ಸರಿ ಸಮುದ್ರದಲ್ಲಿ ಶೂಟಿಂಗ ಮಾಡಲು ಸೀರಿಯಲ ತಂಡ ಅನುಮತಿಯನ್ನೇ ಪಡೆದಿರಲಿಲ್ಲ. ಇದು ಜೀವವನ್ನೇ ಬಲಿತೆಗೆದುಕೊಂಡಿದೆ.
ತಲ್ಸರಿ ಬೀಚ್ ಅಪಾಯಕಾರಿ
ಎಲ್ಲಾ ಸಮುದ್ರ ಕಿನಾರೆಗಳು ಆಟವಾಡಲು ಅಥವಾ ನೀರಿಗಿಳಿಯಲು ಯೋಗ್ಯವಾಗಿರುವುದಿಲ್ಲ. ತಲ್ಸರಿ ಬೀಚ್ ಕೂಡ ಇದೇ ಸಮಸ್ಯೆ ಎದುರಿಸುತ್ತಿದೆ. ಇದು ಅಪಾಯಕಾರಿ ಕಿನಾರೆ ಹೊಂದಿದೆ. ಅನುಮತಿ ಪಡಯದೇ ಇಲ್ಲಿ ಶೂಟಿಂಗ್ ನಡೆಸಲಾಗಿದೆ. ಅಪಾಯಕ ಅರಿವಿಲ್ಲದೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಶೂಟಿಂಗ್ ಮಾಡಲಾಗಿದೆ. ಇದು ದುರಂತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದುರಂತ ನಡೆದಿದ್ದು ಹೇಗೆ?
ಮಾರ್ಚ್ 29ರ ಸಂಜೆ 5.30ರ ವೇಳೆಗೆ ಈ ಘಟನೆ ನಡೆದಿದೆ. ರಾಹುಲ್ ಬ್ಯಾನರ್ಜಿ ಹಾಗೂ ಶ್ವೇತಾ ಮಿಶ್ರಾ ಇಬ್ಬರು ಮೊಣಕಾಲು ನೀರಿನಲ್ಲಿ ನಿಂತು ತಮ್ಮ ಡೈಲಾಗ್ ಹೇಳಿದ್ದರು. ತೀರದಲ್ಲಿ ಕ್ಯಾಮೆರಾ ಇಟ್ಟು ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಬಂದ ಅಲೆಯಲ್ಲಿ ರಾಹುಲ್ ಬ್ಯಾನರ್ಜಿ ಹಾಗೂ ಶ್ವೇತಾ ಮಿಶ್ರಾ ಇಬ್ಬರು ಕಾಲುಜಾರಿ ಬಿದ್ದಿದ್ದಾರೆ. ತಕ್ಷಣವೇ ಸಿಬ್ಬಂದಿಗಳು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ರಾಹುಲ್ ಬ್ಯಾನರ್ಜಿ ನೀರಿನ ರಭಸದಲ್ಲಿ ಸಮುದ್ರದೊಳಗೆ ಜಾರಿ ಹೋಗಿದ್ದಾರೆ. ಇತ್ತ ಶ್ವೇತಾ ಮಿಶ್ರಾ ಅವರನ್ನು ರಕ್ಷಿಸಲಾಗಿತ್ತು.
ಸಮುದ್ರದಲ್ಲೇ ಪ್ರಾಣಬಿಟ್ಟ ರಾಹುಲ್ ಬ್ಯಾನರ್ಜಿ
ರಾಹುಲ್ ಬ್ಯಾನರ್ಜಿ ಸಮುದ್ರದಲ್ಲಿ ಜಾರಿ ಬಿದ್ದ ಕೆಲ ಹೊತ್ತಲ್ಲೇ ನೀರಿನ ರಭಸದಲ್ಲಿ ಮುಳುಗಿದ್ದಾರೆ. ರಕ್ಷಣಾ ತಂಡಗಳು ರಾಹುಲ್ ಬ್ಯಾನರ್ಜಿಯನ್ನು ಮೇಲಕ್ಕೆತ್ತುವ ವೇಳೆ ಪ್ರಾಣ ಕಳೆದುಕೊಂಡಿದ್ದರು. ಸಿಪಿಆರ್ ನೀಡಿ ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿತ್ತು. ಪರಿಶೀಲನೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಸಮುದ್ರದಲ್ಲೇ ಪ್ರಾಣಬಿಟ್ಟ ರಾಹುಲ್ ಬ್ಯಾನರ್ಜಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

