MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಬೋಟಿನಲ್ಲಿ ಶೂಟಿಂಗ್ ವೇಳೆ ಅವಘಡ, ನಟ ರಾಹುಲ್ ಸಾವಿಗೆ ಬೆಚ್ಚಿಬಿದ್ದ ಸೀರಿಯಲ್ ಇಂಡಸ್ಟ್ರಿ

ಬೋಟಿನಲ್ಲಿ ಶೂಟಿಂಗ್ ವೇಳೆ ಅವಘಡ, ನಟ ರಾಹುಲ್ ಸಾವಿಗೆ ಬೆಚ್ಚಿಬಿದ್ದ ಸೀರಿಯಲ್ ಇಂಡಸ್ಟ್ರಿ

ಬೋಟಿನಲ್ಲಿ ಶೂಟಿಂಗ್ ವೇಳೆ ಅವಘಡ, ನಟ ರಾಹುಲ್ ಸಾವಿಗೆ ಬೆಚ್ಚಿಬಿದ್ದ ಸೀರಿಯಲ್ ಇಂಡಸ್ಟ್ರಿ, 42ರ ಹರೆಯದ ರಾಹುಲ್ ಬ್ಯಾನರ್ಜಿ ಸಾವಿಗೆ ಹಲವರು ಕಣ್ಣೀರಿಟ್ಟಿದ್ದಾರೆ. ಶೂಟಿಂಗ್ ನಡೆಯುತ್ತಿದ್ದ ನಡುವೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಚ್ಚಿ ಬೀಳಿಸಿದೆ.

1 Min read
Author : Chethan Kumar
Published : Mar 29 2026, 09:10 PM IST
Share this Photo Gallery
  • FB
  • TW
  • Linkdin
  • Whatsapp
15
ಶೂಟಿಂಗ್ ನಡುವೆ ಸಮುದ್ರಕ್ಕೆ ಜಾರಿಬಿದ್ದ ನಟ
Image Credit : Rahul Banerhee insta

ಶೂಟಿಂಗ್ ನಡುವೆ ಸಮುದ್ರಕ್ಕೆ ಜಾರಿಬಿದ್ದ ನಟ

ಬಂಗಾಳಿ ಸಿನಿಮಾ ಮತ್ತು ಕಿರುತೆರೆಯ ಜನಪ್ರಿಯ ನಟ ರಾಹುಲ್ ಬ್ಯಾನರ್ಜಿ (ಅರುಣೋದಯ್ ಬ್ಯಾನರ್ಜಿ) ಶೂಟಿಂಗ್ ನಡುವೆ ನಡೆದ ಅವಘಡದಲ್ಲಿ ದುರಂತ ಅಂತ್ಯಕಂಡಿದ್ದಾರೆ. 42ರ ಹರೆಯದ ರಾಹುಲ್ ಬ್ಯಾನರ್ಜಿ ಬಂಗಾಳಿ ಸಿನಿಮಾ ಹಾಗೂ ಸೀರಿಯಲ್ ಮೂಲಕ ಜನಪ್ರಿಯರಾಗಿದ್ದರು. ಒಡಿಶಾ ಸಮುದ್ರದಲ್ಲಿ ಶೂಟಿಂಗ್ ಮಾಡುತ್ತಿದ್ದ ವೇಳೆ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.

25
450 ಹೆಚ್ಚು ನಾಟಕದಲ್ಲೂ ನಟಿಸಿದ ಪ್ರತಿಭೆ
Image Credit : Rahul Banerjee

450 ಹೆಚ್ಚು ನಾಟಕದಲ್ಲೂ ನಟಿಸಿದ ಪ್ರತಿಭೆ

ರಾಹುಲ್ ಅವರಿಗೆ ನಟನೆಯ ನಂಟು ಶುರುವಾಗಿದ್ದು ಬಾಲ್ಯದಿಂದಲೇ. ಕೇವಲ ಮೂರು ವರ್ಷದವರಿದ್ದಾಗ, ಅವರು ತಮ್ಮ ತಂದೆಯ ನಾಟಕ ತಂಡದ ಮೂಲಕ ರಂಗಪ್ರವೇಶ ಮಾಡಿದರು. ಅವರ ತಂದೆ ವಿಶ್ವನಾಥ್ ಬ್ಯಾನರ್ಜಿ ನಾಟಕ ತಂಡದ ನಿರ್ದೇಶಕರಾಗಿದ್ದರು. ರಾಹುಲ್ ತಮ್ಮ ಜೀವನದಲ್ಲಿ ಸುಮಾರು 450ಕ್ಕೂ ಹೆಚ್ಚು ರಂಗ ನಾಟಕಗಳಲ್ಲಿ ನಟಿಸಿದ್ದಾರೆ.

Related Articles

Related image1
ಧಾರವಾಹಿ ಶೂಟಿಂಗ್ ನಡುವೆ ದುರಂತ, ಸಮುದ್ರದಲ್ಲಿ ಮುಳುಗಿ ಜನಪ್ರಿಯ ನಟ ರಾಹುಲ್ ಸಾವು
Related image2
ನನ್ನ ತಮ್ಮನ ಸಾವಿಗೆ ಇದೇ ಕಾರಣ, ಇದನ್ನ ಬ್ಯಾನ್ ಮಾಡಿ: ಆರ್‌ಆರ್‌ಆರ್‌ ನಟ ರಾಹುಲ್ ಮನವಿ
35
ಸಿನಿಮಾ ಮೂಲಕ ಜನರ ಮೆಚ್ಚುಗೆ ಪಡೆದ ನಟ
Image Credit : Social Media

ಸಿನಿಮಾ ಮೂಲಕ ಜನರ ಮೆಚ್ಚುಗೆ ಪಡೆದ ನಟ

ರಾಜ್ ಚಕ್ರವರ್ತಿ ನಿರ್ದೇಶನದ 'ಚಿರೋದಿನಿ ತುಮಿ ಜೆ ಅಮರ್' ಚಿತ್ರದ ಮೂಲಕ ರಾಹುಲ್ ಬೆಳ್ಳಿತೆರೆಯಲ್ಲಿ ದೊಡ್ಡ ಯಶಸ್ಸು ಕಂಡರು. ಈ ಚಿತ್ರದಲ್ಲಿ ಪ್ರಿಯಾಂಕಾ ಸರ್ಕಾರ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಆಗಿ, ರಾಹುಲ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿಸಿತು.

45
ಅತ್ಯುತ್ತಮ ನಟ ಪ್ರಶಸ್ತಿ
Image Credit : Facebook

ಅತ್ಯುತ್ತಮ ನಟ ಪ್ರಶಸ್ತಿ

ಲವ್ ಸರ್ಕಸ್', 'ಶೋನೋ ಮಾನ್ ಬೋಲಿ ತೋಮಯ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಕಿರುತೆರೆಯಲ್ಲೂ ಅವರು ಅಷ್ಟೇ ಯಶಸ್ಸು ಗಳಿಸಿದ್ದರು. ಜೀ ಬಾಂಗ್ಲಾದ ಜನಪ್ರಿಯ ಧಾರಾವಾಹಿ 'ಖೇಲಾ'ದಲ್ಲಿ ಆದಿತ್ಯ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದರು. ಇದಲ್ಲದೆ, 'ತುಮಿ ಆಶ್ಬೆ ಬೋಲೆ' ಧಾರಾವಾಹಿಯಲ್ಲಿನ ಅವರ ನಟನೆಗೂ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.ತಮ್ಮ ನಟನೆಗಾಗಿ ರಾಹುಲ್ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 'ಚಿರೋದಿನಿ ತುಮಿ ಜೆ ಅಮರ್' ಚಿತ್ರದ ನಟನೆಗಾಗಿ ಅವರು ಅತ್ಯುತ್ತಮ ನಟ ವಿಭಾಗದಲ್ಲಿ 'ಆನಂದಲೋಕ್' ಪ್ರಶಸ್ತಿಯನ್ನು ಗೆದ್ದುಕೊಂಡರು.

55
ಪತ್ನಿ, ಮಗನ ಅಗಲಿದ ನಟ
Image Credit : Asianet News

ಪತ್ನಿ, ಮಗನ ಅಗಲಿದ ನಟ

ವೈಯಕ್ತಿಕ ಜೀವನದಲ್ಲಿ, ರಾಹುಲ್ ತಮ್ಮ ಸಹನಟಿ ಪ್ರಿಯಾಂಕಾ ಸರ್ಕಾರ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಸಹಜ್ ಬ್ಯಾನರ್ಜಿ ಎಂಬ ಓರ್ವ ಮಗನಿದ್ದಾನೆ. 2017ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರೂ, 2023ರಲ್ಲಿ ಮತ್ತೆ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು.

ರಾಹುಲ್ ಬ್ಯಾನರ್ಜಿ ಅವರ ಅಕಾಲಿಕ ನಿಧನದಿಂದ ಬಂಗಾಳಿ ಚಿತ್ರರಂಗದಲ್ಲಿ ಶೋಕದ ಛಾಯೆ ಆವರಿಸಿದೆ. ಅವರ ಸಾವಿಗೆ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಮನರಂಜನಾ ಸುದ್ದಿ
ಪಶ್ಚಿಮ ಬಂಗಾಳ
ಪೊಲೀಸ್

Latest Videos
Recommended Stories
Recommended image1
ಧಾರವಾಹಿ ಶೂಟಿಂಗ್ ನಡುವೆ ದುರಂತ, ಸಮುದ್ರದಲ್ಲಿ ಮುಳುಗಿ ಜನಪ್ರಿಯ ನಟ ರಾಹುಲ್ ಸಾವು
Recommended image2
ಹುಡ್ಗಿನ ಲವ್ವಲ್ಲಿ ಬೀಳಿಸ್ಕೊಳ್ಳೋಕೆ Bigg Boss ಗಿಲ್ಲಿಗೆ ಟಿಪ್ಸ್ ಕೇಳಿದ ಯುವಕ ಸುಸ್ತೋ ಸುಸ್ತು
Recommended image3
ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ- ಫೋಟೋ ಹಂಚಿಕೊಂಡ ನಟಿ
Related Stories
Recommended image1
ಧಾರವಾಹಿ ಶೂಟಿಂಗ್ ನಡುವೆ ದುರಂತ, ಸಮುದ್ರದಲ್ಲಿ ಮುಳುಗಿ ಜನಪ್ರಿಯ ನಟ ರಾಹುಲ್ ಸಾವು
Recommended image2
ನನ್ನ ತಮ್ಮನ ಸಾವಿಗೆ ಇದೇ ಕಾರಣ, ಇದನ್ನ ಬ್ಯಾನ್ ಮಾಡಿ: ಆರ್‌ಆರ್‌ಆರ್‌ ನಟ ರಾಹುಲ್ ಮನವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved