- Home
- Entertainment
- TV Talk
- ಮತ್ತೊಂದು ಮದ್ವೆಯಾದ್ರ ವಿಜಯ್ ಸೂರ್ಯ… ಅಭಿಮಾನಿಗಳ ತಲೆ ಕೆಡಿಸಿರುವ ವೈರಲ್ ಫೋಟೊ ಹಿಂದಿನ ಸತ್ಯ ಏನು?
ಮತ್ತೊಂದು ಮದ್ವೆಯಾದ್ರ ವಿಜಯ್ ಸೂರ್ಯ… ಅಭಿಮಾನಿಗಳ ತಲೆ ಕೆಡಿಸಿರುವ ವೈರಲ್ ಫೋಟೊ ಹಿಂದಿನ ಸತ್ಯ ಏನು?
ಕನ್ನಡ ಕಿರುತೆರೆ ನಟ ವಿಜಯ್ ಸೂರ್ಯ ಹೊಸ ಫೋಟೊ ಶೂಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫೋಟೊ ನೋಡಿ ಅಭಿಮಾನಿಗಳು ಮತ್ತೊಂದು ಮದ್ವೆ ಆದ್ರ ಅಂತ ಕೇಳ್ತಿದ್ದಾರೆ.

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ಜನಪ್ರಿಯ ನಟ, ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೃಷ್ಟಿ ಬೊಟ್ಟು ಸೀರಿಯಲ್ (Dristibottu serial) ನಲ್ಲಿ ದತ್ತ ಭಾಯ್ ಪಾತ್ರದಲ್ಲಿ ಜನಮನ ಸೆಳೆಯುತ್ತಿರುವ ಗಿಳಿಕೆನ್ನೆ ಚೆಲುವ ವಿಜಯ್ ಸೂರ್ಯ ತಮ್ಮ ನಟನೆಯಿಂದ ಎಷ್ಟು ಫೇಮಸೋ, ಅಷ್ಟೇ ಅವರೊಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ (family man) ಆಗಿಯೂ ಜನಪ್ರಿಯತೆ ಪಡೆದಿದ್ದಾರೆ. ತಮ್ಮ ತಾಯಿ ತೋರಿಸಿದ ಹುಡುಗಿಯನ್ನೇ ಮದುವೆಯಾಗಿರುವ ವಿಜಯ್ ಇಬ್ಬರು ಮುದ್ದಾದ ಗಂಡು ಮಕ್ಕಳ ತಂದೆ ಕೂಡ ಹೌದು. ಒಟ್ಟಲ್ಲಿ ಇವರದ್ದು ಹ್ಯಾಪಿ ಫ್ಯಾಮಿಲಿ ಅಂತಾನೆ ಹೇಳಬಹುದು.
ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೊಗಳು ಅಭಿಮಾನಿಗಳಿಗೆ ಕನ್ಫ್ಯೂಷನ್ ಉಂಟು ಮಾಡಿದೆ. ಅಷ್ಟಕ್ಕೂ ಆ ಫೋಟೊದಲ್ಲಿ ಏನಿದೆ ಅಂದ್ರೆ ವಿಜಯ್ ಸೂರ್ಯ (Vijay Suriya) ಇನ್ನೊಬ್ಬ ನಟಿ ದೀಪ್ತಿ ಮೋಹನ್ (Deepti Mohan) ಜೊತೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊ ಹೇಗಿದೆಯಂದ್ರೆ, ಮದುವೆಯ ನಂತರ ಜೋಡಿಗಳು ತೆಗೆಸಿಕೊಳ್ಳುವ ಫೋಟೊದಂತಿದೆ. ಹಾಗಾಗಿ ಈ ಫೋಟೊ ನೋಡಿ ಅಭಿಮಾನಿಗಳು ವಿಜಯ್ ಸೂರ್ಯ ಇನ್ನೊಂದು ಮದುವೆಯಾದ್ರ ಎಂದು ಕೇಳುತ್ತಿದ್ದಾರೆ.
ಈ ಫೋಟೊ ಶೂಟಲ್ಲಿ ವಿಜಯ್ ಸೂರ್ಯ ಐವರಿ ಬಣ್ಣದ ಶೆರ್ವಾನಿ ಧರಿಸಿದ್ದರೆ, ದೀಪ್ತಿ ಕೆಂಪು ಬಣ್ಣದ ಲೆಹೆಂಗಾ ಧರಿಸಿ, ಅದರ ಜೊತೆಗೆ ಹೆವಿ ಮೇಕಪ್, ಜ್ಯುವೆಲ್ಲರಿ ಧರಿಸಿ, ಇಬ್ಬರು ಮುಖ ಮುಖ ನೋಡುವಂತೆ ಪೋಸ್ ಕೊಟ್ಟಿದ್ದಾರೆ. ಇದನ್ನು ನೋಡಿದ್ರೆ, ಖಂಡಿತವಾಗಿಯೂ ಇದು ವೆಡ್ಡಿಂಗ್ ಶೂಟ್ ಫೋಟೊಗ್ರಾಫಿ ಅಂತಾನೆ ಹೇಳಬಹುದು. ಹಾಗಾಗಿ ಅಭಿಮಾನಿಗಳು ಈ ಕುರಿತು ಕುತೂಹಲದಿಂದ ಪ್ರಶ್ನಿಸಿದ್ದಾರೆ.
ಇದೀಗ ಈ ಫೋಟೊಗಳು ಹಾಗೂ ವಿಡೀಯೋ ವೈರಲ್ (virla photo) ಆಗಿ, ಅದರ ಬಗ್ಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರಶ್ನೆಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ ನಟಿ, ಮಾಡೆಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ದೀಪ್ತಿ ಮೋಹನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ. ಇದು ಮದುಮಗ ಮತ್ತು ಮದುಮಗಳ ವೆಡ್ಡಿಂಗ್ ಜ್ಯುವೆಲ್ಲರಿ ಕುರಿತಾದ ರೀಲ್ಸ್. ಇದು ನಿಜವಾದ ಮದುವೆ ಫೋಟೊಗ್ರಫಿ ಅಲ್ಲ ಎಂದು ಹೇಳಿದ್ದಾರೆ. ಅಲ್ಲಿಗೆ ಅಭಿಮಾನಿಗಳು ಸಮಾಧಾನಪಟ್ಟಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿಯ (Agni Sakshi)ಸಿದ್ಧಾರ್ಥ ಆಗಿ 6 ವರ್ಷಗಳ ಕಾಲ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿರುವ ವಿಜಯ್ ಸೂರ್ಯ ಬಳಿಕ, ಜೊತೆ ಜೊತೆಯಲಿ, ನಮ್ಮ ಲಚ್ಚಿ ಹಾಗೂ ಸದ್ಯ ದೃಷ್ಟಿ ಬೊಟ್ಟು ಸಿರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇಲ್ಲಿವರೆಗೆ ಆರು ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ವೀರಪುತ್ರ ಎನ್ನುವ ಸಿನಿಮಾಅ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ ವಿಜಯ್ ಸೂರ್ಯ.