MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Sirsi-Haveri Highway
ED Raids Satish Jarkiholi
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Entertainment
  • TV Talk
  • ಝೀ ಸೀರಿಯಲ್ಸ್: ನಾಯಕಿಯರಿಗೆ ಮಕ್ಕಳಾಗಿದ್ದಕ್ಕಿಂತ, ನಿರ್ದೇಶಕರು ಅಬಾರ್ಶನ್ ಮಾಡಿಸಿದ್ದೇ ಹೆಚ್ಚಾ?

ಝೀ ಸೀರಿಯಲ್ಸ್: ನಾಯಕಿಯರಿಗೆ ಮಕ್ಕಳಾಗಿದ್ದಕ್ಕಿಂತ, ನಿರ್ದೇಶಕರು ಅಬಾರ್ಶನ್ ಮಾಡಿಸಿದ್ದೇ ಹೆಚ್ಚಾ?

ಝೀ ಕನ್ನಡದ ಅಮೃತಧಾರೆ ಸೀರಿಯಲ್ ನಲ್ಲಿ ಸದ್ಯ ಮಲ್ಲಿಗೆ ಅಬಾರ್ಶನ್ ಆಗಿದೆ. ಝಿ ಸೀರಿಯಲ್ ಇತಿಹಾಸ ತೆಗೆದು ನೋಡಿದ್ರೆ ಮಕ್ಕಳಾಗಿದ್ದಕ್ಕಿಂತ, ನಿರ್ದೇಶಕರು ಅಬಾರ್ಶನ್ ಮಾಡಿಸಿದ್ದೆ ಹೆಚ್ಚು.  

2 Min read
Author : Pavna Das
| Updated : Sep 27 2024, 01:43 PM IST
Share this Photo Gallery
  • FB
  • TW
  • Linkdin
  • Whatsapp
18

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಧಾರಾವಾಹಿಗಳು ತನ್ನ ವಿಭಿನ್ನ ಕಥಾ ಹಂದರದ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ. ಒಂದೊಂದು ಸೀರಿಯಲ್ ಗಳು ಒಂದೊಂದು ರೀತಿಯ ಕಥೆಗಳನ್ನು ಹೇಳುವ ಮೂಲಕ, ಟಿಆರ್ ಪಿಯಲ್ಲೂ ಮೊದಲ ಸ್ಥಾನಗಳಲ್ಲಿದ್ದದ್ದು ಸುಳ್ಳಲ್ಲ. ಅಂದು ಈ ಹಿಂದೆಯೂ ಇರಬಹುದು, ಇಂದಿಗೂ ಅಷ್ಟೇ ಕಥೆಗಳಲ್ಲಿ ಹಲವು ಟ್ವಿಸ್ಟ್ ಟರ್ನ್ ನೀಡುವ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟಿದೆ. 
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಆದರೆ ನೀವು ಗಮನಿಸಿದ್ದೀರಾ? ಹೆಚ್ಚಿನ ಸೀರಿಯಲ್ ಗಳಲ್ಲಿ ನಾಯಕಿಯರಿಗೂ ಅಥವಾ ಇನ್ನೊಂದು ಮುಖ್ಯ ಪಾತ್ರ ಗರ್ಭಿಣಿಯಾಗಿರೋದನ್ನ ಹೆಚ್ಚಾಗಿ ಎಲ್ಲದರಲ್ಲೂ ತೋರಿಸ್ತಾರೆ. ಕೆಲವು ಸೀರಿಯಲ್ ಗಳಲ್ಲಿ ಅದ್ಧೂರಿಯಾಗಿ ಸೀಮಂತ ಮಾಡೋದನ್ನು ತೋರಿಸಿದ್ದಾರೆ. ಆದರೆ ಅದರಲ್ಲಿ ಎಷ್ಟು ಜನಕ್ಕೆ ಮಕ್ಕಳಾಗಿದೆ ನೀವೇ ಹೇಳಿ. 
 

38

ಗರ್ಭಿಣಿಯರಾಗಿ ಸಂಭ್ರಮಿಸಿ, ಅದ್ಧೂರಿಯಾಗಿ ಸೀಮಂತ ಕಾರ್ಯಗಳನ್ನು ಮಾಡಿದ್ರೂ, ಅದರಲ್ಲಿ ಆರಾಮವಾಗಿ ಮಗುವಿಗೆ ಜನ್ಮ ನೀಡಿದವರ ಸಂಖ್ಯೆ ಕಡಿಮೆಯೇ. ಹೆಚ್ಚಿನ ಸೀರಿಯಲ್ ಗಳಲ್ಲಿ ನಾಯಕಿಗೆ, ನಟಿಗೆ ಅಬಾರ್ಶನ್  (abortion)ಆಗಿದ್ದೇ ಹೆಚ್ಚು, ಅದೇ ಕೊರಗಲ್ಲಿ ಅವರು ಜೀವನ ದೂಡಿದ್ದೂ ಹೆಚ್ಚು. ಅದರಲ್ಲೂ ಕೆಲವರಿಗಂತೂ ಎರಡೆರಡುಸಲ ಅಬಾರ್ಶನ್ ಆಗಿದೆ. 
 

48

ಅದು ಗಟ್ಟಿಮೇಳ ಇರಬಹುದು, ಪಾರು, ಶ್ರೀರಸ್ತು ಶುಭಮಸ್ತು, ಅಮೃತಧಾರೆ ಹೀಗೆ ಹೆಚ್ಚಿನ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಧಾರಿಯನ್ನು ಗರ್ಭಿಣಿಯನ್ನಾಗಿಸೋದು, ಎಲ್ಲರೂ ಸಂಭ್ರಮಿಸೋದು, ಮಗುವಿನ ಬಗ್ಗೆ ಕನಸು ಕಾಣೋದು ಇನ್ನೇನು ಮಗು ಆಗುತ್ತೆ ಎನ್ನುವಾಗ ಆಕ್ಸಿಡೆಂಟ್ ಆಗಿ ಮಗುವನ್ನ ಅಬಾರ್ಟ್ ಮಾಡೋದು ಎಲ್ಲಾ ಸೀರಿಯಲ್ ಗಳಲ್ಲಿ ಈಗ ಕಾಮನ್ ಆಗಿದೆ. 
 

58

ಜನಮನ ಗೆದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳ (Gattimela) ನಿಮಗೆ ನೆನಪಿದೇ ಅಲ್ವಾ? ಈ ಧಾರಾವಾಹಿಯಲ್ಲಿ ವೇದಾಂತ್ ತಂಗಿ ಆಧ್ಯಾ ಎರಡು ಬಾರಿ ಗರ್ಭಿಣಿಯಾಗಿದ್ದಳು. ಅದ್ಧೂರಿಯಾಗಿ ಸೀಮಂತ ಕೂಡ ಮಾಡಿದ್ದರು. ಆದರೆ ಎರಡು ಬಾರಿಯೂ ಕುತಂತ್ರಿಗಳ ಮೋಸದಿಂದ ಅಬಾರ್ಶನ್ ಆಗುವಂತೆ ಮಾಡಲಾಗಿತ್ತು. 
 

68

ಇನ್ನು ಪಾರು (Paaru) ಸೀರಿಯಲ್ ನೆನಪಿದ್ಯಾ? ಅದರಲ್ಲೂ ಅಷ್ಟೇ ಜನನಿ ಮಗುವಿನ ಬಗ್ಗೆ ಎಷ್ಟೊಂದು ಕನಸು ಕಂಡಿದ್ದಳು, ಮಗು ಆದ್ರೆ ಹಾಗೆ ಮಾಡ್ಬೇಕು ಹೀಗೆ ಮಾಡ್ಬೇಕು ಎಂದೆಲ್ಲಾ ದೊಡ್ಡ ದೊಡ್ಡ ಕನಸುಗಳನ್ನೇ ಕಟ್ಟಿಕೊಂಡಿದ್ದಳು. ಆದರೆ ಕೊನೆ ಆಕೆಯ ಮಗುವನ್ನ ಇಲ್ಲದಂತೆ ಮಾಡಲಾಯ್ತು, ಕೊನೆಗೆ ಪಾರು ತನ್ನ ಮಗುವನ್ನೆ ಜನನಿಗೆ ಕೊಟ್ಟಿರೋದು ಬೇರೆ ಕಥೆ. 
 

78

ಶ್ರೀರಸ್ತು ಶುಭಮಸ್ತು  (Srirastu Shubhamastu) ಧಾರಾವಾಹಿ ತನ್ನ ವಿಭಿನ್ನ ಕಥೆಯಿಂದ ಮನ ಸೆಳೆಯುತ್ತಿದೆ ನಿಜಾ, ಆದರೆ ಇದರಲ್ಲೂ ಮಗುವಿಗಾಗಿ ಹಂಬಲಿಸುತ್ತಿರುವ ಪೂರ್ಣಿಗೆ ಒಂದು ಸಲ ಅಲ್ಲ, ಎರಡು ಸಲ ಅಬಾರ್ಶನ್ ಮಾಡಿಸಲಾಯಿತು. ಸೀಮಂತವನ್ನೂ ಮಾಡಿದ್ರೂ, ಎರಡನೇ ಬಾರಿ ಶಾರ್ವರಿಯ ಕುತಂತ್ರಕ್ಕೆ ಮಗುವಿನ ಬಲಿ ಕೊಡಲಾಯ್ತು. ಅಷ್ಟೇ ಅಲ್ಲ ತುಳಸಿ ಗರ್ಭಿಣಿಯಾಗಿದ್ದಾಳೆ ಎಂದೇ ತೋರಿಸಿದ್ದಳು, ಈಗ ಮಗುವಾದ್ರೆ ತುಳಸಿ ಜೀವಕ್ಕೆ ಅಪಾಯ ಅದನ್ನ ತೆಗೆಸಿಬಿಡಿ ಅಂತಿದ್ದಾರೆ. 
 

88

ಅದೆಲ್ಲಾ ಬಿಡಿ, ಇತ್ತೀಚೆಗೆ  ಅಮೃತಧಾರೆ (Amruthadhare) ಸೀರಿಯಲ್ ನಲ್ಲಿ ಏನಾಯ್ತು ಅನ್ನೋದನ್ನ ನೀವೇ ನೋಡಿದ್ರಿ ಅಲ್ವಾ? ಮಲ್ಲಿಗೂ ಅಬಾರ್ಶನ್. ಸೀಮಂತ ಮುಗಿಸಿ ಹೊರಟ ತುಂಬು ಗರ್ಭಿಣಿ ಮಲ್ಲಿಗೆ ಆಕ್ಸಿಡೆಂಟ್ ಆಗಿ, ಮಲ್ಲಿ ಏನೋ ಪ್ರಾಣಾಪಾಯದಿಂದ ಪಾರಾಗಿದ್ದಾಳೆ, ಆದ್ರೆ ಮಗು ಮಾತ್ರ ಇಲ್ಲ. ಅದಕ್ಕೂ ಮುನ್ನ ಮಹಿಮಾ ಬೇಕು ಅಂತಾನೆ ಮಗುವನ್ನ ತೆಗೆಸಿದ್ಲು. ಇದನ್ನೆಲ್ಲಾ ನೋಡಿದ್ರೆ, ಅಯ್ಯೋ ಯಾಕಪ್ಪ ಈ ನಿರ್ದೇಶಕರು ಗರ್ಭಿಣಿಯಾಗಿರೋ ಹೆಣ್ಣು ಮಗುವಿಗೆ ತಾಯ್ತನವನ್ನ ಅನುಭವಿಸೋಕೆ ಬಿಡ್ತಿಲ್ಲಾ ಅಂತ ಅನಿಸೋದಂತೂ ಸುಳ್ಳಲ್ಲ, ಏನಂತೀರಾ? 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜೀ ಕನ್ನಡ

Latest Videos
Recommended Stories
Recommended image1
ಬಡ್ದು ಬಾಯಿಗೆ ಹಾಕೊಂಡು ತೇಗಿದ ಮಂಜ; ಟಾಸ್ಕ್ ಬಳಿಕ ಭುಗಿಲೆದ್ದ ಬೇಸ್‌ ವಾಯ್ಸ್‌ ಜಗಳ!
Recommended image2
Bigg Boss: ಪತ್ನಿ ಬಳಿ ಮಾತ್ರ ಇದನ್ನು ಟ್ರೈ ಮಾಡ್ಲೇ ಬೇಡಿ: ಸ್ಪರ್ಧಿಗಳಿಗೆ ಓಂ ಪ್ರಕಾಶ್​ ಕಿವಿಮಾತು
Recommended image3
ಶ್ರಾವಣಿ Rock, ರಾಮ್ Shock: ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved