- Home
- Entertainment
- TV Talk
- Bigg Bossನಿಂದ ಹೊರ ಬಂದ್ರು ಸೀರಿಯಲ್ ಗೆ ಬಾರದ ಅಶ್ವಿನಿ… ಸೂರ್ಯವಂಶಕ್ಕೆ ಸಿಕ್ರು ಹೊಸ ನಾಯಕಿ
Bigg Bossನಿಂದ ಹೊರ ಬಂದ್ರು ಸೀರಿಯಲ್ ಗೆ ಬಾರದ ಅಶ್ವಿನಿ… ಸೂರ್ಯವಂಶಕ್ಕೆ ಸಿಕ್ರು ಹೊಸ ನಾಯಕಿ
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸೂರ್ಯವಂಶ ಧಾರಾವಾಹಿಯಿಂದ ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಹೊರ ಬಿದ್ದಿದ್ದು, ಇದೀಗ ನಟಿ ದಿವ್ಯಶ್ರಿ ಗ್ರಾಮ ಸುರಭಿ ಪಾತ್ರಕ್ಕೆ ಆಯ್ಕೆಯಾಗಿದ್ದು, ಈಗಾಗಲೇ ಪ್ರೊಮೋ ಬಿಡುಗಡೆಯಾಗಿದೆ.

ಸೂರ್ಯವಂಶ ಸೀರಿಯಲ್
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸೂರ್ಯವಂಶದಲ್ಲಿ ನಾಯಕನಾಗಿ ಅನಿರುಧ್ ಜಟ್ಕರ್ ನಟಿಸುತ್ತಿದ್ದಾರೆ. ಈ ಧಾರಾವಾಹಿಗೆ ನಾಯಕಿಯಾಗಿ ಇದೀಗ ನಟಿ ದಿವ್ಯಶ್ರೀ ಗ್ರಾಮ ಎಂಟ್ರಿ ಕೊಟ್ಟಿದ್ದಾರೆ.
ಅಶ್ವಿನಿ ಎಸ್ ಎನ್ ಹೊರಕ್ಕೆ
ಆರಂಭದಲ್ಲಿ ಧಾರಾವಾಹಿಯಲ್ಲಿ ಸುರಭಿ ಪಾತ್ರದಲ್ಲಿ ಅಶ್ವಿನಿ ಎಸ್ ಎನ್ ನಟಿಸುತ್ತಿದ್ದರು. ಆದರೆ ಬಿಗ್ ಬಾಸ್ 12ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಬೇಕಾಗಿರೋದರಿಂದ ಅಶ್ವಿನಿ ಸೀರಿಯಲ್ ನಿಂದ ಹೊರ ನಡೆದಿದ್ದರು. ಆದರೆ ಅವರು ಈಗಾಗಲೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದು, ಮತ್ತೆ ಸೀರಿಯಲ್ ಗೆ ಎಂಟ್ರಿ ಕೊಟ್ಟಿಲ್ಲ.
ಕಲರ್ಸ್ ಕನ್ನಡದ ಜೊತೆ ಅಗ್ರಿಮೆಂಟ್
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗ ಸ್ಪರ್ಧಿಗಳು ಕಲರ್ಸ್ ಕನ್ನಡದ ಜೊತೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತೆ. ಅದರಿಂದ ಅವರು ಕೆಲವು ತಿಂಗಳ ಕಾಲ ಕಲರ್ಸ್ ಕನ್ನಡ ಅಲ್ಲದೇ ಬೇರೆ ವಾಹಿನಿಯ ಧಾರಾವಾಹಿಗಳಲ್ಲಿ ನಟಿಸುವಂತಿಲ್ಲ. ಹಾಗಾಗಿ ಅಶ್ವಿನಿ ಮತ್ತೆ ಸೂರ್ಯವಂಶ ಧಾರಾವಾಹಿಗೆ ಎಂಟ್ರಿ ಕೊಟ್ಟಿಲ್ಲ.
ಯಾರು ಈ ದಿವ್ಯಶ್ರೀ
ದಿವ್ಯಶ್ರೀ ಗ್ರಾಮ ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡವರು. ಭರತನಾಟ್ಯ ಕಲಾವಿದೆ ಜೊತೆಗೆ ರಂಗಭೂಮಿ ಕಲಾವಿದೆಯಾಗಿರುವ ದಿವ್ಯಶ್ರೀ ಕೊನೆಯದಾಗಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಚುಕ್ಕಿ ತಾರೆ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಅದಕ್ಕೂ ಮುನ್ನ ಲಕ್ಷ್ಮೀ ನಿವಾಸದಲ್ಲಿ ಸಿಂಚನ ಪಾತ್ರದಲ್ಲಿ ನಟಿಸುತ್ತಿದ್ದರು.
ದಿವ್ಯಶ್ರೀ ನಟಿಸಿರುವ ಧಾರಾವಾಹಿಗಳು
ನಟಿ ದಿವ್ಯಶ್ರೀ ‘ದೇವತೆ’, ‘ಚೆಲುವಿ’, ‘ನಾಗಪಂಚಮಿ’, ‘ದಾಸ ಪುರಂದರ’, ‘ಬಲು ಅಪರೂಪ ನಮ್ ಜೋಡಿ’, ಶ್ರೀನಿವಾಸ ಕಲ್ಯಾಣ’, ‘ಮಂದಾರ’, ತೆಲುಗಿನ ‘ತ್ರಿನಯನಿ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಹಲವಾರು ನೃತಕಾರ್ಯಕ್ರಮಗಳನ್ನು ಸಹ ನೀಡುತ್ತಾ ಬಂದಿದ್ದಾರೆ ದಿವ್ಯಶ್ರೀ.
ಸೂರ್ಯವಂಶದಲ್ಲಿ ಏನಾಗ್ತಿದೆ?
ಸೂರ್ಯವಂಶ ಧಾರಾವಾಹಿ ಬಗ್ಗೆ ಹೇಳೊದಾದರೆ ಸದ್ಯ ಧಾರಾವಾಹಿಯಲ್ಲಿ ಸುರಭಿ ನಾಪತ್ತೆಯಾಗಿದ್ದಾಳೆ. ರೌಡಿಗಳು ಆಕೆಯ ತಲೆಗೆ ಬಲವಾಗಿ ಹೊಡೆದು, ನದಿಯಲ್ಲಿ ಎಸೆದಿದ್ದಾರೆ. ವಿಲನ್ ಗಳು ಆಕೆ ವಾಪಾಸ್ ಬರೋದೆ ಇಲ್ಲ ಎಂದು ಖುಷಿಯಲ್ಲಿದ್ದಾರೆ. ಆದರೆ ಸೂರ್ಯ ತನ್ನ ಸುಬ್ಬಿ ಬಂದೇ ಬರುತ್ತಾಳೆ ಎಂದು ಕಾತುರದಿಂದ ಕಾಯುತ್ತಿದ್ದಾನೆ. ಇದೀಗ ಹೊಸ ಸುರಭಿಯಾಗಿ ದಿವ್ಯಶ್ರೀಯವರು ಶೀಘ್ರದಲ್ಲೇ ಎಂಟ್ರಿ ಕೊಡಲಿದ್ದಾರೆ.