- Home
- Entertainment
- TV Talk
- ಅನುಮಾನ ಪಟ್ಟ ಪ್ರತಿಯೊಬ್ಬರನ್ನು ಆ 60 ಸೆಕೆಂಡ್‌ನಲ್ಲಿ ಮಟ್ಟ ಹಾಕ್ತೀನಿ: ಶಾಲಿನಿ ಸತ್ಯನಾರಾಯಣ
ಅನುಮಾನ ಪಟ್ಟ ಪ್ರತಿಯೊಬ್ಬರನ್ನು ಆ 60 ಸೆಕೆಂಡ್‌ನಲ್ಲಿ ಮಟ್ಟ ಹಾಕ್ತೀನಿ: ಶಾಲಿನಿ ಸತ್ಯನಾರಾಯಣ
ಜಾಕ್‌ಪಾಟ್ ಫಿನಾಲೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಶಾಲಿನಿ. ತಮ್ಮ ಜೀವನದ ಅಮೂಲ್ಯವಾದ 60 ಸೆಕೆಂಡ್ ಏನೆಂದು ರಿವೀಲ್ ಮಾಡಿದ ನಟಿ...

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜಾಕ್‌ಪಾಟ್ ರಿಯಾಲಿಟಿ ಕಾರ್ಯಕ್ರಮದಲ್ಲಿ ನಿರೂಪಕಿ ಶಾಲಿನಿ ಸತ್ಯನಾರಾಯಣ ಗೆಸ್ಟ್ ಆಗಿ ಆಗಮಿಸಿದ್ದರು. ಈ ವೇಳೆ ತಮ್ಮ ಜೀವನದ ಮುಖ್ಯವಾದ 60 ಸೆಕೆಂಡ್ ಯಾವುದು ಎಂದು ಹಂಚಿಕೊಂಡಿದ್ದಾರೆ.
ಬಣ್ಣದ ಪ್ರಪಂಚಕ್ಕೆ ಮತ್ತು ನಿರೂಪಣೆ ಲೋಕಕ್ಕೆ ಬರುವ ನಿರ್ಧಾರ ನನ್ನದು...ಯಾರನ್ನೂ ಕೇಳಿಕೊಂಡು ಬಂದಿಲ್ಲ ಇದು ನನ್ನ ಸ್ವಂತ ನಿರ್ಧಾರ.
ನನ್ನ ಸುತ್ತ ಇರುವ ಯಾರೂ ಇದನ್ನು ಒಪ್ಪಿಕೊಳ್ಳಲು ರೆಡಿಯಾಗಿ ಇರಲಿಲ್ಲ. ಈ ಕ್ಷೇತ್ರದಲ್ಲಿ ನಾನು ಯಶಸ್ಸು ಕಂಡ ಮೇಲೂ ಒಪ್ಪಿಕೊಳ್ಳಲು ರೆಡಿಯಾಗಿ ಇರಲಿಲ್ಲ.
ಒಂದು ಕಾರ್ಯಕ್ರಮ ಆದ ಮೇಲೆ ಇದಾದ ಮೇಲೆ ಏನು? ಜೀವನಕ್ಕೆ ಏನು ಮಾಡ್ತಾಳೆ? ಈಗಲೂ ಅನೇಕರು ನನ್ನನ್ನು ಈ ವಿಚಾರದಲ್ಲಿ ಪ್ರಶ್ನೆ ಮಾಡಿದ್ದಾರೆ.
ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ನಾನು ಈ ಹೆಜ್ಜೆ ಇಟ್ಟಾಗ ನನ್ನ ಬಗ್ಗೆ ನಾನೇ ಪ್ರಶ್ನೆ ಮಾಡಿಕೊಂಡಾಗ ಇದರಿಂದ ನಾನು ದುಡಿ ಬಹುದಾ ಅನ್ನೋ ಪ್ರಶ್ನೆ ಬಂದಿತ್ತು.
ನಾನು ಯಾವುದೇ ಪ್ರಾಜೆಕ್ಟ್ ಮಾಡಲಿ ಅದರಿಂದ ಬರುವ ಹಣ ನನ್ನ ಅಕೌಂಟ್‌ಗೆ ಕ್ರೆಡಿಟ್ ಆಗುತ್ತೆ ಅಲ್ವಾ ಆ 60 ಸೆಕೆಂಡ್ ತುಂಬಾ ಖುಷಿ ಕೊಡುತ್ತದೆ.
60 ಸೆಕೆಂಡ್ ಕ್ರೆಡಿಟ್ ಆಗಿರುವ ಹಣ ನೋಡುತ್ತೀನಿ ಅದೇ 60 ಸೆಕೆಂಡ್‌ನಲ್ಲಿ ನನ್ನನ್ನು ಅನುಮಾನ ಪಟ್ಟಿರುವ ಪ್ರತಿಯೊಬ್ಬರನ್ನು ಮಟ್ಟಹಾಕುತ್ತೀನಿ.
ಪ್ರತಿ ಸಲ ಹಣ ಕ್ರೆಡಿಟ್ ಆಯ್ತು ಅಂತ ಮೆಸೇಜ್ ಬಂದಾಗ ಅದು ನನ್ನ ಜಯ. ದೇವರಿಗೆ ವಂದನೆಗಳನ್ನು ಹೇಳಿ ನಾನು ನನ್ನ ಜಯವನ್ನು ಅನುಭವಿಸುತ್ತೀನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.