ನಟ ಕಾಶಿನಾಥ್ ಮಗನ ಹೊಸ ಚಿತ್ರಕ್ಕೆ ನಾಯಕಿಯಾಗ್ತಿದ್ದಾರೆ ಕರಿಮಣಿ ಬೆಡಗಿ ಸ್ಪಂದನಾ ಸೋಮಣ್ಣ
ಕರಿಮಣಿ ಸೀರಿಯಲ್ ನಟಿ ಸ್ಪಂದನಾ ಸೋಮಣ್ಣ ಇದೀಗ ನಟ, ನಿರ್ದೇಶಕ ಕಾಶಿನಾಥ್ ಅವರ ಮಗ ಅಭಿಮನ್ಯು ಹೊಸ ಚಿತ್ರಕ್ಕೆ ನಾಯಾಕಿಯಾಗಿ ಆಯ್ಕೆಯಾಗಿದ್ದಾರೆ.

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಯಲ್ಲಿ ನಾಯಕಿ ಸಾಹಿತ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಸ್ಪಂದನಾ ಸೋಮಣ್ಣ, ಇದೀಗ ಹಿರಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಗೆ ರೆಡಿಯಾಗುತ್ತಿದ್ದಾರೆ.
ಕರಿಮಣಿ ಧಾರಾವಾಹಿಯಲ್ಲಿ (Karimani serial) ಮುಗ್ಧ ಮನಸ್ಸಿನ ಮುದ್ದು ಹುಡುಗಿ ಸಾಹಿತ್ಯ ಆಗಿ ನಟಿಸುತ್ತಿರುವ ಸ್ಪಂದನಾ, ಈ ಹಿಂದೆ ಕಲರ್ಸ್ ಕನ್ನಡದ ಗೃಹಪ್ರವೇಶ ಧಾರಾವಾಹಿಯಲ್ಲಿ ನಟಿಸಿದ್ದರು. ಆದರೆ ಈ ಸೀರಿಯಲ್ ಅಷ್ಟಾಗಿ ಜನಪ್ರಿಯತೆ ಪಡೆಯದೇ ಬೇಗನೆ ಕಥೆ ಮುಗಿಸಿತ್ತು.
ಮೂಲತಃ ಮೈಸೂರಿನವರಾದ ಸ್ಪಂದನಾ (Spandana Somanna) ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡವರು. ಇಂಜಿನಿಯರ್ ಆಗಿರುವ ಸ್ಪಂದನಾ, ಬಣ್ಣದ ಜಗತ್ತಿನ ಒಲವಿನಿಂದ ನಟನಾ ಜಗತ್ತಿಗೆ ಕಾಲಿಟ್ಟರು. ತೆಲುಗಿನ ಅಭಿಲಾಷ ಸೀರಿಯಲ್ ನಲ್ಲಿ ನಟಿಸಿದ ಸ್ಪಂದನಾ, ಕನ್ನಡದಲ್ಲಿ ಮೊದಲ ಬಾರಿ ನಾನು ನನ್ನ ಕನಸು ಸೀರಿಯಲ್ ನಲ್ಲಿ ನಟಿಸಿದರು.
ಈಗಾಗಲೇ ಸ್ಪಂದನಾ ಕನ್ನಡದ ದಿಲ್ ಖುಷ್ ಮತ್ತು ಮರೀಚಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಕರಿಮಣಿ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ನಟಿ, ಇದೀಗ ಮತ್ತೊಂದು ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ, ನಟ ಹಾಗೂ ನಿರ್ದೇಶಕರಾಗಿರುವ ದಿ. ಕಾಶೀನಾಥ್ ಅವರ ಮಗ ಅಭಿಮನ್ಯು ಹೊಸ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾಗೆ ಸ್ಪಂದನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಭಿಮನ್ಯು ಈಗಾಗಲೇ ಎಲ್ಲಿಗೆ ಪಯಣ ಯಾವುದೋ ದಾರಿ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಅಭಿಮನ್ಯು ಸನ್/ಆಫ್ ಕಾಶೀನಾಥ್ (Abhimanyu S/o Kashinath ) ಎಂದು ಸಿನಿಮಾಗೆ ಹೆಸರಿಟ್ಟಿದ್ದು, ಇದು ಹೊಸ ಅನುಭವ ಎನ್ನುವ ಸಬ್ ಟೈಟಲ್ ಕೂಡ ನೀಡಲಾಗಿದೆ. ಅಂದ್ರೆ ಇದು ಕಾಶೀನಾಥ್ ಅವರ ಅನುಭವ ಸಿನಿಮಾದ ಹೊಸ ರೂಪವೋ ಅನೋದನ್ನ ಕಾದು ನೋಡಬೇಕು. ರಾಜ್ ಮುರಳಿ ನ್ರಿದೇಶನದ ಈ ಸಿನಿಮಾವನ್ನು ಐಸಿರಿ ಪ್ರೊಡಕ್ಷನ್ ಅಡಿ ಮಾರಪ್ಪ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಅಭಿಮನ್ಯುವಿಗೆ ನಾಯಕಿಯರಾಗಿ ಸ್ಪಂದನಾ ಸೋಮಣ್ಣ ಜೊತೆ ವಿಜಯಶ್ರೀ ಕಲ್ಬುರ್ಗಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.