ಡಿವೋರ್ಸ್ ಅರ್ಜಿ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಖಾತೆಯಿಂದ ಪತಿ ಫೋಟೋಸ್ ಡಿಲೀಟ್
ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇವರಿಬ್ಬರ ನಡುವೆ ಏನಾಗುತ್ತಿದೆ ಅನ್ನೋವಷ್ಟರಲ್ಲೇ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿದೆ. ಇದರ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಪತಿಯ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.

ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ಡಿವೋರ್ಸ್ ಸುದ್ದಿ ಕನ್ನಡಗರಿಗೂ ಶಾಕ್ ನೀಡಿದೆ. ಮೂರು ವರ್ಷದ ಸುಂದರ ದಾಂಪತ್ಯ ಜೀವನದಲ್ಲಿ ಏನಾಯ್ತು? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅನ್ಯೋನ್ಯವಾಗಿದ್ದ ಈ ಸಂಸಾರಕ್ಕೆ ಯಾರ ಕಣ್ಣು ಬಿತ್ತು? ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನಿಸುತ್ತಿದ್ದಾರೆ. ಇವರಿಬ್ಬರ ನಡುವಿನ ಹೊಂದಾಣಿಕೆ ಕೊರತೆಯಿಂದ ಇಬ್ಬರು ಬೇರೆ ಬೇರೆಯಾಗುತ್ತಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.
ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಬೇರೆ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಖಿಲಾ ಪಜಿಮಣ್ಣು-ಧನಂಜಯ್ ಶರ್ಮಾ ಪರಸ್ಪರ ಒಪ್ಪಿಗೆ ಮೇರೆ ಬೇರೆಯಾಗಲು ಡಿವೋರ್ಸ್ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕಾನೂನು ಪ್ರಕಾರ ಮುಂದಿನ ಪ್ರಕ್ರಿಯೆಗಳು ನಡೆಯಲಿದೆ. ಇದರ ನಡುವೆ ಕೋರ್ಟ್ ಕೂಡಿ ಬಾಳುವ ಅವಕಾಶ ನೀಡಲಿದೆ. ಆದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆಯಾಗದ ಕಾರಣದಿಂದ ಡಿವೋರ್ಸ್‌ಗೆ ಅರ್ಜಿ ನೀಡಲಾಗಿದೆ.
ಯಾರು ಈ ಕನ್ನಡ ಕೋಗಿಲೆ ಅಖಿಲಾ ಪಜಿಮಣ್ಣು? ಈ ಸುಂದರ ಬೆಳದಿಂಗಳಲ್ಲಿ ಏನಾಯ್ತು?
ಅಖಿಲಾ ಪಜಿಮಣ್ಣು ದಾಂಪತ್ಯ ಜೀವನದಿಂದ ದೂರವಿರಲು ನಿರ್ಧರಿಸಿ ಡಿವೋರ್ಸ್‌ಗೆ ಅರ್ಜಿ ನೀಡಿದ ಬೆನ್ನಲ್ಲೇ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಿಂದ ಪತಿ ಫೋಟೋಗಳು, ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಮೊದಲು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ನಿಶ್ಚಿತಾರ್ಥ, ಮದುವೆ, ಟ್ರಿಪ್ ಸೇರಿದಂತೆ ಹಲವು ಫೋಟೋ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಇದೀಗ ಎಲ್ಲವನ್ನು ಡಿಲೀಟ್ ಮಾಡಿದ್ದಾರೆ.
ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪತಿಯ ಯಾವುದೇ ಫೋಟೋಗಳಿಲ್ಲ. ಅಮೆರಿಕಕದಲ್ಲಿ ನಡೆಸಿದ ಪ್ರವಾಸದ ಕೆಲ ಫೋಟೋಗಳು ವಿಡಿಯೋಗಳು ಉಳಿಸಿಕೊಂಡಿದ್ದಾರೆ. ಆಧರೆ ಈ ಫೋಟೋದಲ್ಲಿ ಎಲ್ಲೂ ಪತಿಯ ಫೋಟೋ ಇಲ್ಲ. ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಉಳಿಸಿಕೊಂಡು ಇನ್ನುಳಿದವನ್ನು ಅಖಿಲಾ ಪಜಿಮಣ್ಣು ಡಿಲೀಟ್ ಮಾಡಿದ್ದಾರೆ.
ಅಮೆರಿಕ ಕನಸು ಹೊತ್ತಿದ್ದ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಗಾಳಿ, ಪತಿ ಧನಂಜಯ್ ಬಗ್ಗೆ ಇಲ್ಲಿದೆ ಮಾಹಿತಿ!
ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಈಗಾಗಲೇ ಸ್ಟಾರ್ ಸುವರ್ಣದಲ್ಲೂ ಅಖಿಲಾ ಪಜಿಮಣ್ಣು ಕಾಣಿಸಿಕೊಂಡಿದ್ದಾರೆ. ಈ ಕುರಿತ ಅಪ್‌ಡೇಟ್, ತಮ್ಮ ಹಾಡು, ಕಾರ್ಯಕ್ರಮಗಳ ಕುರಿತು ಫೋಟೋ ವಿಡಿಯೋಗಳನ್ನು ಅಖಿಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ.
ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಮದುವೆ ಬಳಿಕ ಇಬ್ಬರು ಅಮೆರಿಕದಲ್ಲಿ ನೆಲೆಸಿದ್ದರು. ಅಮೆರಿಕದಲ್ಲಿ ಸಿಸ್ಕೋ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಆಗಿರುವ ಧನಂಜಯ್ ಶರ್ಮಾ ಜೊತೆ ಅಖಿಲಾ ಕೂಡ ನೆಲೆಸಿದ್ದರು. ಮದುವೆ ಬಳಿಕ ಅಮೆರಿಕಾಗ ತೆರಳಿದ ಅಖಿಲಾ, ಕಾರ್ಯಕ್ರಮ ಸೇರಿದಂತೆ ಇತರ ಅಗತ್ಯಕ್ಕಾಗಿ ತವರಿಗೆ ಆಗಮಿಸಿದ್ದರು.