MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮುದುಕಿ ಬೇಕಾದ್ರೂ ಅನ್ನಿ, ​ ಆಂಟಿ ಮಾತ್ರ ಹೇಳ್ಬೇಡಿ ಪ್ಲೀಸ್: ನಟಿ ವಿದ್ಯಾ ಮೂರ್ತಿ ಖಡಕ್​ ವಾರ್ನಿಂಗ್​

ಮುದುಕಿ ಬೇಕಾದ್ರೂ ಅನ್ನಿ, ​ ಆಂಟಿ ಮಾತ್ರ ಹೇಳ್ಬೇಡಿ ಪ್ಲೀಸ್: ನಟಿ ವಿದ್ಯಾ ಮೂರ್ತಿ ಖಡಕ್​ ವಾರ್ನಿಂಗ್​

ಹಿರಿಯ ನಟಿ ವಿದ್ಯಾ ಮೂರ್ತಿ ಅವರು 35ಕ್ಕೂ ಹೆಚ್ಚು ಸೀರಿಯಲ್‌ಗಳು, 500ಕ್ಕೂ ಹೆಚ್ಚು ನಾಟಕಗಳು ಮತ್ತು ಹಲವಾರು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮನ್ನು 'ಆಂಟಿ' ಎಂದು ಕರೆಯುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

2 Min read
Author : Suchethana D
Published : Apr 17 2026, 08:09 PM IST
Share this Photo Gallery
  • FB
  • TW
  • Linkdin
  • Whatsapp
16
35ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟನೆ
Image Credit : Sowjanya Stores Instagram

35ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟನೆ

ಮಾಯಾಮೃಗ ಸೀರಿಯಲ್​ನಿಂದ ಹಿಡಿದು ಮುಕ್ತ, ಮುಕ್ತ ಮುಕ್ತ, ದಂಡಪಿಂಡಗಳು , ಮೌನರಾಗ , ಪ್ರೀತಿ ಇಲ್ಲದ ಮೇಲೆ , ಮನ್ವಂತರ , ಪಾ.ಪ.ಪಾಂಡು , ಸಿಲ್ಲಿ ಲಲ್ಲಿ , ಅಡಚಣೆಗಾಗಿ ಕ್ಷಮಿಸಿ , ಜೋಗುಳ , ಜೊತೆಜೊತೆಯಲಿ , ನಿಗೂಢ ರಾತ್ರಿ , ಶಾಂತಂ ಪಾಪಂ , ಮನೆಯೊಂದು ಮೂರು ಬಾಗಿಲು , ಸ್ತ್ರೀ , ಮಗಳು ಜಾನಕಿ ಸೇರಿ ಹಿಟ್ಲರ್​ ಕಲ್ಯಾಣದ ನಾಯಕ ಎಜೆಯ ತಾಯಿಯ ಪಾತ್ರ ಮಾಡುವವರೆಗೆ 35ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿರುವವರು ನಟಿ ವಿದ್ಯಾ ಮೂರ್ತಿ.

26
 ರಂಗಭೂಮಿಯಿಂದ ಹಿರಿತೆರೆ, ಕಿರುತೆರೆಯವರೆಗೆ...
Image Credit : Sowjanya Stores Instagram

ರಂಗಭೂಮಿಯಿಂದ ಹಿರಿತೆರೆ, ಕಿರುತೆರೆಯವರೆಗೆ...

ರಂಗಭೂಮಿಯಿಂದ ಹಿರಿತೆರೆ, ಕಿರುತೆರೆಯಲ್ಲಿ ಛಾಪು ಮೂಡಿಸಿದ ನಟಿ ಈಕೆ. 500ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ. ಊರ್ವಶಿ , ಸ್ಪರ್ಶ , ಮತದಾನ , ವಂಶಿ , ಪೃಥ್ವಿ , ಕಿಚ್ಚ ಹುಚ್ಚ , ಚಂದು , ಬೇರು , ಮಾಲ್ಗುಡಿ ಡೇಸ್ , ಶಿವಾಜಿ ಸೂರತ್ಕಲ್ , ಅಣ್ಣಾಬಾಂಡ್ , ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾಹೀರಾತುಗಳಲ್ಲಿ ರೂಪದರ್ಶಿಯಾಗಿದ್ದಾರೆ, ಲೇಖನವನ್ನೂ ಬರೆಯುವ ಮೂಲಕ ಲೇಖಕಿಯೂ ಆಗಿದ್ದಾರೆ.

Related Articles

Related image1
'ಆಂಟಿ' ಎಂದು ಕರೆವ ಮುನ್ನ ಎಚ್ಚರ! 2 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್​ ಆದೇಶ- ಏನಿದು ಕೇಸ್​?
Related image2
'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?
36
ಮುದುಕಿ ಬೇಕಾದ್ರೂ ಅನ್ನಿ
Image Credit : Sowjanya Stores Instagram

ಮುದುಕಿ ಬೇಕಾದ್ರೂ ಅನ್ನಿ

ಇಂತಿಪ್ಪ ನಟಿ, ಇದೀಗ ಕುತೂಹಲದ ಮಾತೊಂದನ್ನು ಹೇಳಿದ್ದಾರೆ. sowjanya.storesಗೆ ನೀಡಿರುವ ಸಂದರ್ಶನದಲ್ಲಿ ಪತಿ ಜೊತೆ ಆಗಮಿಸಿದ್ದ ನಟಿ, ನನ್ನನ್ನು ಆಂಟಿ, ಗಿಂಟಿ ಎಂದು ಕರೆಯಬೇಡಿ. ಅಜ್ಜಿ ಬೇಕಾದ್ದರೂ ಅನ್ನಿ. ಆದ್ರೆ ಆಂಟಿ ಮಾತ್ರ ಹೇಳಬೇಡಿ, ಮೇಡಂ ಅನ್ನೋದೂ ಇಷ್ಟ ಆಗಲ್ಲ.  ಕನ್ನಡದಲ್ಲಿ ಏನು ಬೇಕಾದ್ರೂ ಕರೀರಿ. ಅಮ್ಮ ಅನ್ನಿ, ವಿದ್ಯಾಮ್ಮ ಅನ್ನಿ, ಅದೂ ಬೇಡ್ವಾ ಮುದುಕಿ ಬೇಕಾದರೂ ಅನ್ನಿ ಆದ್ರೆ ಆಂಟಿ ಮಾತ್ರ ಹೇಳಬೇಡಿ ಎನ್ನುವ ಮೂಲಕ ಈ ಶಬ್ದದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

46
70 ವರ್ಷದ ನಟಿ
Image Credit : Social Media

70 ವರ್ಷದ ನಟಿ

ಅಂದಹಾಗೆ ನಟಿಯ ಕುರಿತು ಹೇಳುವುದಾದರೆ, 1956ರ ಜುಲೈ 18ರಂದು ಜನಿಸಿರುವ ಇವರಿಗೆ ಈಗ 70 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಅದೇ ಸೌಂದರ್ಯ ಕಾಪಾಡಿಕೊಂಡು ಬಂದಿದ್ದಾರೆ. ಜೊತೆಗೆ ಅದೇ ಪಟಪಟ ಮಾತು, ಹುಮ್ಮಸ್ಸು ಇನ್ನೂ ಅವರಲ್ಲಿ ಇದೆ. ಶಾಲೆ-ಕಾಲೇಜುಗಳ ದಿನದಿಂದಲೇ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂದಿಟ್ಟ ನಟಿ ಆಗಲೇ ಸಿಕ್ಕಾಪಟ್ಟೆ ಬಹುಮಾನ ತರ್ತಿದ್ರಂತೆ.

56
ಭಗವದ್ಗೀತೆ ಚಿತ್ರದಲ್ಲಿ ಪಾತ್ರ
Image Credit : Social Media

ಭಗವದ್ಗೀತೆ ಚಿತ್ರದಲ್ಲಿ ಪಾತ್ರ

ಡಿಗ್ರಿಯಾದ ಮೇಲೆ ಮದುವೆ, ಮಕ್ಕಳು ಆಯಿತು. ಬಣ್ಣದ ಲೋಕದಿಂದ ದೂರವಾದರು. ಅಮ್ಮ ತೀರಿಕೊಂಡ ಮೇಲೆ, ಖಿನ್ನತೆಗೆ ಜಾರಿದಾಗ ಪತಿಯೇ , ನಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಗೀತಾ ರಾಮಾನುಜಂ ಅವರನ್ನು ಭೇಟಿಯಾಗಿ ಜಿ.ವಿ.ಅಯ್ಯರ್ ನಿರ್ದೇಶನದ ಭಗವದ್ಗೀತೆ ಚಿತ್ರದಲ್ಲಿ ಸಣ್ಣ ಪಾತ್ರವನ್ನು ಗಿಟ್ಟಿಸಿಕೊಂಡರು.

66
ನಾಟಕಗಳಲ್ಲಿ ಅಭಿನಯ
Image Credit : Social Media

ನಾಟಕಗಳಲ್ಲಿ ಅಭಿನಯ

ಬಳಿಕ ಗೀತಾ ರಾಮಾನುಜಂ ನಿರ್ದೇಶನದ ಯಶೋಧರಾ ನಾಟಕದಲ್ಲಿ ಯಶೋಧರೆ ಪಾತ್ರ ಮಾಡಿದರು. ಅಲ್ಲಿಂದ ವಿದ್ಯಾಮೂರ್ತಿ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಂಸಾರ, ವೃತ್ತಿ ಎರಡನ್ನು ತೂಗಿಸಿಕೊಂಡು ಹೋಗುತ್ತಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ನಟಿ
ಮನರಂಜನಾ ಸುದ್ದಿ
ಟಿವಿ ಶೋ
ಮಹಿಳೆಯರು
ಸಂಬಂಧಗಳು

Latest Videos
Recommended Stories
Recommended image1
ಕಿರುತೆರೆಯ ಭರವಸೆ ನಟ ಸಿದ್ಧಾರ್ಥ್ ವೇಣುಗೋಪಾಲ್ ಇನ್ನಿಲ್ಲ; ಸಾವಿನ ಹೋರಾಟದಲ್ಲಿ ಗೆದ್ದ ಕ್ಯಾನ್ಸರ್!
Recommended image2
ಹನಿಮೂನ್​ಗೆ 50 ಮಂದಿ, ಹೆಸ್ರು ಹೇಳಲು 3 ತಿಂಗ್ಳು! ಕೋಟೆ ಪ್ರಭಾಕರ್​ ಲವ್​ಸ್ಟೋರಿಗೆ ನಾಚಿದ Amruthadhaare ಭೂಮಿಕಾ
Recommended image3
ನಾಯಕಿಯಾಗೋದಕ್ಕೂ ಮುನ್ನ ಧಾರಾವಾಹಿಯಲ್ಲಿ ಕೆಲಸದವಳಾಗಿ ನಟಿಸಿದ್ದ ನಮೃತಾ ಗೌಡ!
Related Stories
Recommended image1
'ಆಂಟಿ' ಎಂದು ಕರೆವ ಮುನ್ನ ಎಚ್ಚರ! 2 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್​ ಆದೇಶ- ಏನಿದು ಕೇಸ್​?
Recommended image2
'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved