ಸೀತಾಗೆ ಹುಟ್ಟಿದ್ದು ಅವಳಿ ಮಕ್ಕಳಾ? ಹಾಗಿದ್ರೆ ಇನ್ನೊಂದು ಮಗುಗಾಗಿ ಸಿಹಿಯನ್ನೆ ಸಾಯಿಸ್ತಾರ ನಿರ್ದೇಶಕರು?
ಸೀತಾ ರಾಮಾ ಧಾರಾವಾಹಿಯಲ್ಲಿ ಬಹುದಿನಗಳ ನಂತರ ಈಗಷ್ಟೇ ಸೀತಾ ರಾಮ ಮತ್ತು ಸಿಹಿ ಒಂದಾಗಿದ್ದು, ಸದ್ಯದಲ್ಲೇ ದೊಡ್ಡ ಟ್ವಿಸ್ಟ್ ಸಿಗಲಿದೆ. ಅದೇನು ಅನ್ನೋದನ್ನ ತಿಳಿಯೋಕೆ ಪೂರ್ತಿ ಓದಿ.
ಸೀತಾ ರಾಮ (Seetha Raama) ಧಾರಾವಾಹಿಯಲ್ಲಿ ಕಳೆದ ಕೆಲವು ವಾರಗಳಿಂದ ಬರೀ ಟೆನ್ಶನ್, ನೋವು ಅಷ್ಟೇ ಕಾಣಿಸುತ್ತಿತ್ತು, ಸಿಹಿ ತನ್ನ ಮಗಳು ಎಂದು ಗೊತ್ತಾದ ಬಳಿಕ ಮೇಘಶ್ಯಾಮ್ ಮತ್ತು ಶಾಲಿನಿ ಮಗುವನ್ನ ಬಲವಂತವಾಗಿ ತನ್ನ ಬಳಿ ಇರಿಸಿಕೊಂಡು, ಸೀತಾ ಮೇಲೆ ದೂರ ದಾಖಲಾಗಿ, ಜೈಲು ಸೇರುವಂತೆ ಕೂಡ ಮಾಡಿದ್ದರು.
ಹಾಗಾಗಿ ತಿಂಗಳುಗಳಿಂದ ಸಿಹಿಗಾಗಿ, ಸೀತಾ -ರಾಮರ ಹೋರಾಟ, ಸಾಗುತ್ತಲೇ ಇತ್ತು. ಇದೀಗ ಎಲ್ಲಾ ಸಮಸ್ಯೆ ಬಹೆಗರಿದು, ಸಿಹಿ ಸೀತಾ ರಾಮರ ಬಳಿಯೇ ಉಳಿದುಕೊಳ್ಳಬೇಕು ಎಂದು ತೀರ್ಪು ಬಂದಾಗಿದೆ. ಹಾಗಾಗಿ ಎಲ್ಲರೂ ಸಂಭ್ರಮದಿಂದ ಸೆಲೆಬ್ರೇಶನ್ ಮಾಡ್ತಿದ್ದಾರೆ. ಒಟ್ಟಲ್ಲಿ ಹೇಳಬೇಕಂದ್ರೆ ಸಿಹಿ, ಸೀತಾ ರಾಮರನ್ನು ಜೊತೆಯಾಗಿ ಖುಷಿಯಾಗಿ ನೋಡಿ ಬಹಳ ದಿನಗಳೇ ಕಳೆದಿತ್ತು.
ಇದೀಗ ಇದೆಲ್ಲದರ ನಡುವೆ ಧಾರಾವಾಹಿಯಲ್ಲೊಂದು ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಸೀತಾಗೆ ಹುಟ್ಟಿದ್ದು, ಸಿಹಿ ಒಬ್ಬಳೆ ಅಲ್ಲ, ಇನ್ನೊಂದು ಮಗು ಕೂಡ ಜನಿಸಿತ್ತು, ಅನ್ನೋದು, ಅದನ್ನ ಸ್ವತಃ ಸೀತಾ ತನ್ನ ಮನಸಿನಲ್ಲಿ ಹೇಳಿಕೊಂಡು, ಆ ಮಗು ಉಳಿತಿದ್ರೆ ಎಷ್ಟು ಚೆನ್ನಾಗಿತ್ತು ಅಂತಾಳೆ.
ಅಷ್ಟಕ್ಕೂ ಈ ಮಾತು ಬರೋದಕ್ಕೆ ಕಾರಣ ಏನು ಅಂದ್ರೆ, ಕಾರಿನಲ್ಲಿ ಸಿಹಿ, ಸೀತಾ, ರಾಮ ಹೋಗುತ್ತಿರಬೇಕಾದ್ರೆ, ಕಾರು ನಿಲ್ಲಿಸಿದ ರಾಮ ತನ್ನ ಮುದ್ದಿನ ಮಡದಿ ಸೀತೆಗೆ ಗುಲಾಬಿ ಹೂವಿನ ಗುಚ್ಚವನ್ನ ನೀಡಿ ಸರ್ಪ್ರೈಸ್ ಮಾಡುತ್ತಾನೆ, ಜೊತೆಗೆ ಸಿಹಿಗೆ ಅವಳಷ್ಟೇ ಸಿಹಿಯಾದ ಶುಗರ್ ಲೆಸ್ ಚಾಕಲೇಟ್ ಕೂಡ ನೀಡ್ತಾನೆ, ಆವಾಗ ಸಿಹಿ, ನನ್ನ ಜೊತೆ ಟ್ವಿನ್ ಇರ್ತಿದ್ರೆ, ಅವಳ ಜೊತೆ ಚಾಕಲೇಟ್ ಶೇರ್ ಮಾಡ್ತಿದ್ದೆ ಎನ್ನುತ್ತಾಳೆ ಸಿಹಿ.
ಇದನ್ನ ಕೇಳಿದ ಸೀತಾ, ಹೌದಲ್ವಾ? ಆ ಇನ್ನೊಂದು ಮಗು ಉಳಿತಿದ್ರೆ, ಸಿಹಿ ಅವಳ ಜೊತೆ ಆರಾಮವಾಗಿ ಉಳಿತ್ತಿದ್ಲು, ಮನೆಯಲ್ಲಿ ಇನ್ನಷ್ಟು ಸಂತೋಷ ಇರ್ತಿತ್ತು ಎನ್ನುತ್ತಾಳೆ. ಇಷ್ಟು ದಿನ ಇಲ್ಲದ ಇನ್ನೊಂದು ಮಗುವಿನ ಕಥೆ ಈಗ ಬಂದಿದೆ ಅಂದ್ರೆ, ಕಥೆಯಲ್ಲಿ ಮುಂದೆನೋ ಮಹಾತಿರುವು ಕಾದಿದೆ ಅಂತಾನೆ ಅರ್ಥ.
ವೀಕ್ಷಕರು ಕೂಡ ಅದನ್ನೇ ಹೇಳ್ತಿದ್ದಾರೆ, ಈ ಹಿಂದಿನ ಪ್ರೊಮೋ ಒಂದರಲ್ಲಿ ಸಿಹಿ ಆಕ್ಸಿಡೆಂಟಲ್ಲಿ ಸತ್ತು ಆತ್ಮ ಮಾತಾನಾಡೋದು ಕಾಣಿಸಲಾಗಿತ್ತು, ಅದೇ ರೀತಿ, ಸಿಹಿ ಆತ್ಮ ಆಕೆಯ ಟ್ವಿನ್ ಮಗುವನ್ನ ಹುಡುಕಿಕೊಂಡು, ಸೀತಾ ಜೊತೆ ಸೇರಿಸುತ್ತಾಳೆ ಎಂದು ಒಬ್ರು ಹೇಳಿದ್ದಾರೆ. ಇನ್ನೊಂದು ಮಗುನ ಕಾಣಿಸೋದಕ್ಕೋಸ್ಕರಾನೆ ಸಿಹಿನಾ ಸಾಯಿಸ್ತಾರ ಅಂತಾನೂ ಜನ ಪ್ರಶ್ನಿಸುತ್ತಿದ್ದಾರೆ.
ಒಟ್ಟಲ್ಲಿ ಮುಂದೇ ಏನಾಗಲಿದೆ, ಅನ್ನೋ ಕುತೂಹಲ ಅಂತೂ ಹೆಚ್ಚಿದೆ. ಆದ್ರೆ ಸಡನ್ ಆಗಿ ಅವಳಿ ಮಗುವಿನ ಬಗ್ಗೆ ಮಾತನಾಡಿದ್ದು ಮಾತ್ರ ಜನರಿಗೆ ವಿಚಿತ್ರ ಅನಿಸಿದೆ. ಯಾವುದಕ್ಕೂ ಸೀರಿಯಲ್ ನಲ್ಲಿ ಮುಂದೇ ಏನೇನು ಟ್ವಿಸ್ಟ್ ಇರಲಿದೆ ಅನ್ನೋದನ್ನ ಕಾದು ನೋಡಬೇಕು.