ಡಾನ್ ಜಯರಾಜ್ ಪುತ್ರನ ಹುಟ್ಟುಹಬ್ಬ; ರೊಮ್ಯಾಂಟಿಕ್ ಡೇಟ್ ನೈಟ್ ಆದ್ಮೇಲೆ ಗುಡ್ ನ್ಯೂಸ್ ಕೊಡಿ ಎಂದ ನೆಟ್ಟಿಗರು
ಡಾನ್ ಜಯರಾಜ್ ಪುತ್ರನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಸೊಸೆ ಇಂಪನಾ. ಗುಡ್ ನ್ಯೂಸ್ ನಿರೀಕ್ಷೆಯಲ್ಲಿದ್ದೀವಿ ಎಂದ ನೆಟ್ಟಿಗರು....
ಕನ್ನಡ ಚಿತ್ರರಂಗದ ಅದ್ಭುತ ನಟ ಅಜಿತ್ ಜಯರಾಜ್ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ರೊಮ್ಯಾಂಟಿಕ್ ಆಗಿ ಆಚರಿಸಿಕೊಂಡಿದ್ದಾರೆ. ಇದಕ್ಕೆ ಪತ್ನಿ ಇಂಪನಾ ಕಾರಣ.
ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಗಾಯಕಿ ಇಂಪನಾ ತಮ್ಮ ಪತಿ ಅಜಿತ್ ಜಯರಾಜ್ ಬರ್ತಡೇಯನ್ನು ಮನೆಯಲ್ಲಿ ರೊಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.
ಹಣ್ಣುಗಳಿಂದ ಮಾಡಿಸಿರುವ ಬರ್ತಡೇ ಕೇಕ್‌ನ ಹೂಗಳಿಂದ ಅಲಂಕಾರ ಮಾಡಿ, ಇಡೀ ರೂಮಿನ ನೆಲವನ್ನು ಅದ್ಧೂರಿಯಾಗಿ ಅಲಂಕಾರ ಮಾಡಿದ್ದಾರೆ.
ಹ್ಯಾಪಿ ಬರ್ತಡೇ ಚಿನ್ನಮ್ಮ ಎಂದು ಗುಲಾಬಿ ಹೂಗಳಿಂದ ಇಂಪನಾ ಬರೆದಿದ್ದಾರೆ. ಇವರಿಬ್ಬರ ಬರ್ತಡೇ ಆಚರಣೆಯಲ್ಲಿ ಪುಟ್ಟ ಸಾಕು ನಾಯಿ ಕೂಡ ಇತ್ತು.
ಬಾಸ್ ಆಂಡ್ ಮೇಡಂ ಇಬ್ಬರೂ ಈ ರೊಮ್ಯಾಂಟಿಕ್ ಡೇಟ್ ನೈಟ್ ಆದ್ಮೇಲೆ ದಯವಿಟ್ಟು ನಮಗೆ ಗುಡ್ ನ್ಯೂಸ್ ಕೊಡಿ ನಾವು ಜೂನಿಯರ್‌ನ ನೋಡಲು ಕಾಯುತ್ತಿದ್ದೀವಿ ಎಂದ ನೆಟ್ಟಿಗರು.
ರೈಮ್ಸ್, ಕ್ರಾಂತಿವೀರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಜಿತ್ ಅಭಿನಯಿಸಿದ್ದಾರೆ. ಇವರಿಬ್ಬರು ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.
ಹಲವು ವರ್ಷಗಳ ಕಾಲ ಅಜಿತ್ ಮತ್ತು ಇಂಪನಿ ಪ್ರೀತಿಸಿ 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿರುವ ಟ್ರೆಂಡಿಂಗ್ ಕಪಲ್ಸ್.