ಬಿಗ್ ಬಾಸ್ ಸ್ಪರ್ಧಿ ಇಶಾನಿ ಸಹೋದರ ಮದುವೆ ಸಂಭ್ರಮದಲ್ಲಿ ಮಿಂಚಿದ ಸಂಗೀತಾ ಶೃಂಗೇರಿ ಫ್ಯಾಮಿಲಿ
ಬಿಗ್ ಬಾಸ್ ಸ್ಪರ್ಧಿ ರ್ಯಾಪರ್ ಇಶಾನಿಯವರ ಸಹೋದರನ ಮದುವೆ ಇತ್ತೀಚೆಗೆ ನಡೆದಿದ್ದು, ಬಿಗ್ ಬಾಸ್ ಸಹ ಸ್ಪರ್ಧಿಗಳಾದ ಸಂಗೀತಾ ಶೃಂಗೇರಿ, ನೀತು ವನಜಾಕ್ಷಿ ಭಾಗವಹಿಸಿದ್ದರು.
ಇಲ್ಲಿವರೆಗೆ ತಮ್ಮ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರೋ ಮೂಲಕ ಬಿಗ್ ಬಾಸ್ ಸಹ ಸ್ಪರ್ಧಿಗಳ ಇತರ ಕಾರ್ಯಕ್ರಮಗಳಲ್ಲಿ ಗೈರಾಗಿದ್ದ ಸಂಗೀತ ಶೃಂಗೇರಿ (Sangeetha Sringeri) ಇದೀಗ ಸಹ ಸ್ಪರ್ಧಿ ಇಶಾನಿಯವರ ಸಹೋದರನ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಇತ್ತೀಚೆಗೆ ಇಶಾನಿಯವರ (Ishani) ಸಹೋದರ ಮದುವೆ ಭಾರಿ ಸಡಗರದಿಂದ ನಡೆದಿತ್ತು. ಈ ಸಮಾರಂಭಕ್ಕೆ ಸಂಗೀತ ಶೃಂಗೇರಿ, ತಮ್ಮ ಅಣ್ಣ ಸಂತೋಷ್ ಮತ್ತು ಅತ್ತಿಗೆ ಸುಚಿತ್ರಾ ಜೊತೆ ಕಾರ್ಯಕ್ರಮಕ್ಕೆ ತೆರಳಿದ್ದು, ಜೊತೆ ನೀತು ವನಜಾಕ್ಷಿಯವರು ಸಹ ಆಗಮಿಸಿದ್ದರು.
ಇಶಾನಿಯವರ ಅಣ್ಣ ಯಾರು? ಅವರ ಮದುವೆ ಎಲ್ಲಿ? ಯಾವಾಗ ನಡೆದಿತ್ತು? ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಆದರೆ ಮದುವೆ ಸಮಾರಂಭದ ಫೋಟೋಗಳನ್ನು ಸಂಗೀತ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇಶಾನಿಯ ಸಹೋದರ ಮದುವೆ ಎಂದು ಬರೆದುಕೊಂಡಿದ್ದರು. ‘
ಇತ್ತೀಚೆಗೆ ತನಿಷಾ ಕುಪ್ಪಂದ ಅವರ ಜ್ಯುವೆಲ್ಲರಿ ಓಪನಿಂಗ್ ಸಮಾರಂಭ ನಡೆದಿತ್ತು, ನಮೃತಾ ಗೌಡ ಬರ್ತ್ ಡೇ ಸಮಾರಂಭ ಕೂಡ ನಡೆದಿತ್ತು. ಈ ಯಾವುದೇ ಕಾರ್ಯಕ್ರಮಕ್ಕೆ ಸಂಗೀತ ಹಾಜರಾಗಿರಲಿಲ್ಲ, ಇದೀಗ ಮೊದಲ ಬಾರಿ ಸಹ ಸ್ಪರ್ಧಿಯ ಕಾರ್ಯಕ್ರಮವೊಂದರಲ್ಲಿ ಸಂಗೀತ ಭಾಗಿಯಾಗಿದ್ದಾರೆ.
ಸಂಗೀತ ಶೃಂಗೇರಿ ಇಶಾನಿ, ನೀತು (Netehu Vanajakshi) ಜೊತೆ ವಿವಿಧ ಭಂಗಿಯಲ್ಲಿ ಫೋಸ್ ತೆಗೆದುಕೊಂಡಿದ್ದು, ಗೋಲ್ಡನ್ ಬಣ್ಣದ ಬೆಲ್ ಪ್ಯಾಂಟ್ ಮತ್ತು ಬ್ಲೌಸ್ ನಲ್ಲಿ ಸಂಗೀತಾ ಅದ್ಭುತವಾಗಿಯೇ ಕಾಣಿಸುತ್ತಿದ್ದರು.
ಬಹು ದಿನಗಳ ಬಳಿಕ ಸಂಗೀತಾ ಶೃಂಗೇರಿಯವರನ್ನು ತಮ್ಮ ಅಣ್ಣ ಮತ್ತು ಅತ್ತಿಗೆ ಸುಚಿ ಜೊತೆ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಬಿಗ್ ಬಾಸ್ ಸಮಯದಲ್ಲಿ ಸಂಗೀತಾ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಿಸುತ್ತಿದ್ದ ಅತ್ತಿಗೆ ಸುಚಿ ಭಾರಿ ಅಭಿಮಾನಿಗಳನ್ನು ಪಡೆದಿದ್ದರು. ಹಾಗಾಗಿ ಮತ್ತೆ ಅವರನ್ನೆಲ್ಲಾ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.
ಇನ್ನು ಸಂಗೀತಾ ಶೃಂಗೇರಿ ಬಿಗ್ ಬಾಸ್ ನಿಂದ ಹೊರ ಬಂದ ಕೂಡಲೇ ತಮ್ಮ ಮಾರಿಗೋಲ್ಡ್ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಂಗೀತ ಮುಂದಿನ ಪ್ರಾಜೆಕ್ಟ್ ಯಾವುದು ಅನ್ನೋದು ತಿಳಿದು ಬಂದಿಲ್ಲ.