ಬ್ಲ್ಯಾಕ್ ಬಾಡಿ ಸೂಟಲ್ಲಿ ಶಾನೆ ಮಿಂಚ್ತಿದ್ದಾರೆ ಸಾನ್ಯಾ ಅಯ್ಯರ್
ಬಿಗ್ ಬಾಸ್ ಮೂಲಕ ಸಂಚಲನ ಮೂಡಿಸಿದ ಸಾನ್ಯಾ ಅಯ್ಯರ್ ಹೊಸ ಫೋಟೋ ಶೂಟ್ ಶೇರ್ ಮಾಡಿದ್ದು, ಬ್ಲ್ಯಾಕ್ ಬಾಡಿ ಸೂಟ್ ನಲ್ಲಿ ಸಾನ್ಯಾ ಸಖತ್ತಾಗಿ ಮಿಂಚುತ್ತಿದ್ದಾರೆ.
ಪುಟ್ಟ ಗೌರಿಯ ಮದುವೆ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಗುರುತಿಸಿಕೊಂಡು, ಬಳಿಕ ಬಿಗ್ ಬಾಸ್ ಸೀಸನ್ 9ರ ಮೂಲಕ ಸೆನ್ಸೇಶನ್ ಕ್ರಿಯೇಟ್ ಮಾಡಿದ ಬೆಡಗಿ ಸಾನ್ಯಾ ಅಯ್ಯರ್ (Saanya Iyer).
ಸದ್ಯ ಸಾನ್ಯಾ ತಮ್ಮ ಹೊಸ ಹಾಗೂ ನಾಯಕಿಯಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಗೌರಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾವನ್ನು ಇಂದ್ರಜಿತ್ ಲಂಕೇಶ್ (Indrajeet Lankesh) ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಇಂದ್ರಜಿತ್ ಪುತ್ರ ಸಮರ್ ಜಿತ್ ಗೆ ನಾಯಕಿಯಾಗಿ ಸಾನ್ಯಾ ಅಭಿನಯಿಸುತ್ತಿದ್ದಾರೆ.
ಸಾನ್ಯಾ ತಮ್ಮ ಕರಿಯರ್ ಗಿಂತಲೂ ಹೆಚ್ಚಾಗಿ ತಮ್ಮ ಫೋಟೋ ಶೂಟ್ ನಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸಾನ್ಯಾ ಹೆಚ್ಚಾಗಿ ಫೋಟೋ ಶೂಟ್ ಮಾಡುತ್ತಾ, ಶೇರ್ ಮಾಡುತ್ತಿರುತ್ತಾರೆ.
ಇತ್ತೀಚೆಗೆ ನಟಿ ಬ್ಲ್ಯಾಕ್ ಬಾಡಿ ಸೂಟ್ (black body suit) ಫೋಟೋ ಧರಿಸಿ, ಸಾಲು ಸಾಲು ಫೋಟೋಗಳನ್ನು ಶೇರ್ ಮಾಡಿದ್ದು, ಸಾನ್ಯಾ ಬೋಲ್ಡ್ ಬ್ಯೂಟಿಫುಲ್ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ.
ಕಪ್ಪು ಬಣ್ಣದ ಬಾಡಿ ಸೂಟ್ ಮೇಲೆ ಪೂರ್ತಿಯಾಗಿ ಸ್ಟೋನ್ ವರ್ಕ್ ಇದ್ದು, ಸಾನ್ಯಾ ಸಖತ್ತಾಗಿ ಕಾಣಿಸುತ್ತಿದ್ದಾರೆ. ಲಕ್ಷ್ಮೀ ಕೃಷ್ಣ ಡಿಸೈನ್ ಮಾಡಿದ ಡ್ರೆಸ್ ಇದಾಗಿದ್ದು, ಅವರು ನಟಿಯ ಫೋಟೋಗೆ ಕಾಮೆಂಟ್ ಮಾಡಿ, ನೀವು ಬಾರ್ನ್ ರಾಕ್ ಸ್ಟಾರ್ ಎಂದು ಕರೆದಿದ್ದಾರೆ.
ಸಾನ್ಯಾ ಹೊಸ ಫೊಟೋ ನೋಡಿ ಅಭಿಮಾನಿಗಲು ಫುಲ್ ಖುಷ್ ಆಗಿದ್ದು, ಶಾನೇ ಟೋಪಾಗವಳೆ ನಮ್ಮ ಸಾನು, ಸ್ಟನ್ನರ್, ಕ್ಲಾಸಿ ಲುಕ್, ಬ್ಯೂಟಿಫುಲ್, ಸ್ಟೈಲಿಶ್ ಲುಕ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಬಾಡಿ ಸೂಟ್ ಜೊತೆಗೆ, ಎಲಿಗೆಂಟ್ ಮೇಕಪ್, ಹೈ ಬನ್ ನಲ್ಲಿ ಜೊತೆಗೆ ಬೋಲ್ಡ್ ಲುಕ್ ನಲ್ಲಿ ಸಾನ್ಯಾ ಅಯ್ಯರ್ ಎಷ್ಟೊಂದು ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ಅಂದ್ರೆ, ಆಕೆಯನ್ನು ಫ್ಯಾಷನ್ ಐಕಾನ್ ಎಂದೇ ಕರೆಯಬಹುದು.
ಪುಟ್ಟಗೌರಿ ಮದುವೆ ಬಳಿಕ ಎಜುಕೇಶನ್ ಕಡೆ ಗಮನ ಹರಿಸಿದ್ದ ಸಾನ್ಯಾ ಬಳಿಕ ಮಲಯಾಳಂ ನ ' ಆರಾರೋ..ನೀಯಾರೋ' ಎಂಬ ಅಲ್ವಮ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಕೂಢ ಸ್ಪರ್ಧಿಸಿದ್ದರು, ಜೊತೆಗೆ. 'ಗುಲಾಬ್ ಜಾಮೂನ್' ಎಂಬ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.