ಟಿವಿ ಲೋಕದ ಕಿಂಗ್ ಆದ ಕಾಮಿಡಿಯನ್: 1 ಎಪಿಸೋಡ್‌ಗೆ ಪಡೆಯೋ ಸಂಭಾವನೆ ಎಷ್ಟು ಕೋಟಿ
ಇದುವರೆಗೆ ಅನುಪಮಾ ಟಿವಿ ಸೀರಿಯಲ್ ಖ್ಯಾತಿಯ ನಟಿ ರೂಪಾ ಗಂಗೂಲಿ ಅವರು ಟಿವಿ ಲೋಕದಲ್ಲೇ ಅತೀ ಹೆಚ್ಚು ಸಂಪಾದನೆ ಮಾಡುವ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಈಗ ಅವರನ್ನು ಮೀರಿಸಿದ್ದಾರೆ ಈ ನಟ.
ಟಿವಿ ನಟರ ವೇತನದ ಬಗ್ಗೆ ಸಾಕಷ್ಟು ಚರ್ಚೆಗಳು ನಡಿತಾನೇ ಇರ್ತಾವೆ. ಅನುಪಮಾದ ರೂಪಾ ಗಂಗೂಲಿಯಿಂದ ಹಿಡಿದು ತಾರಕ್ ಮೆಹ್ತಾ ಕಿ ಉಲ್ಟಾ ಚಸ್ಮಾದ ನಟ ಜೇತಲಾಲ್ ವರೆಗೆ ಯಾರು ಅತೀ ಹೆಚ್ಚು ಸಂಪಾದನೆ ಮಾಡುವ ನಟ ನಟಿಯರು ಯಾರು ಎಂಬ ಕುತೂಹಲ ಅನೇಕರದ್ದು. ಆದರೆ ಈಗ ನಟ ಕಪಿಲ್ ಶರ್ಮಾ ಅವರು ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಜಗತ್ತಿನ ಅತೀ ಶ್ರೀಮಂತ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಸೇರಿದಂತೆ ಹಿಂದಿ ಸೀರಿಯಲ್ ಲೋಕದ ಇತರ ತಾರೆಯರು ಒಂದು ಎಸಿಸೋಡ್‌ಗೆ ಪಡೆಯುವ ವೇತನ ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಹಿಂದಿ ಸೀರಿಯಲ್‌ಗಳ ಟಿಆರ್‌ಪಿ ಚಾರ್ಟ್‌ನಲ್ಲಿ ಅನುಪಮಾ ಸೀರಿಯಲ್ ತುಂಬಾ ಮುಂದಿದೆ. ಆದರೆ ಗಳಿಕೆ ವಿಷಯದಲ್ಲಿ ಅನುಪಮಾಗಿಂತಲೂ ಮುಂದಿದ್ದಾರೆ ಜನರನ್ನು ತನ್ನ ಕಚಗುಳಿಯಿಡುವ ಹಾಸ್ಯದ ಮೂಲಕ ನಗಿಸುವ ಕಪಿಲ್ ಶರ್ಮಾ, ಅವರು ಪ್ರತಿ ಎಪಿಸೋಡ್‌ಗೆ ಪಡೆಯುವ ಹಣ ಎಷ್ಟು ಅಂತ ತಿಳಿದ್ರೆ ಶಾಕ್ ಆಗೋದು ಗ್ಯಾರಂಟಿ.
ಮನಿ ಕಂಟ್ರೋಲ್‌ನ ವರದಿಯ ಪ್ರಕಾರ, ಒಂದು ಎಪಿಸೋಡ್‌ಗೆ ಕಪಿಲ್ ಶರ್ಮಾ ಪಡೆಯುವ ಹಣ ಲಕ್ಷದಲ್ಲಿ ಇಲ್ಲ, ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ಎಪಿಸೋಡೊಂದಕ್ಕೆ ಪಡೆಯುತ್ತಾರೆ ಕಪಿಲ್, ಪ್ರಸ್ತುತ ಕಪಿಲ್ ಅವರ ಆಸ್ತಿ ಮೊತ್ತ 300 ಕೋಟಿಯಾಗಿದ್ದು, ಅತೀ ಹೆಚ್ಚು ಸಂಭಾವನೆ ಮಾಡುವ ಹಾಸ್ಯನಟ ಎನಿಸಿದ್ದಾರೆ.
ಇತ್ತ ಕಪಿಲ್ ಶರ್ಮಾ ಅವರ ಇತರ ಆಸ್ತಿ ಬಗ್ಗೆ ಮಾತನಾಡುವುದಾದರೆ ಅವರು ಮುಂಬೈನಲ್ಲಿ 15 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟನ್ನು ಹೊಂದಿದ್ದಾರೆ. ಜೊತೆಗೆ ಚಂಢೀಗಢದಲ್ಲಿ ಫಾರ್ಮ್‌ಹೌಸನ್ನು ಕೂಡ ನಟ ಹೊಂದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕರಾ ಇದರ ಬೆಲೆ 25 ಕೋಟಿ ರೂಪಾಯಿಗಳು. ಇನ್ನು ಕಪಿಲ್ ಶರ್ಮಾ ಅವರ ಬಳಿ ಇರುವ ಐಷಾರಾಮಿ ವಾಹನಗಳ ಬಗ್ಗೆ ಹೇಳುವುದಾದರೆ ಮರ್ಸಿಡಿಸ್, ರೇಂಜ್ ರೋವರ್ ಸೇರಿದಂತೆ ಹಲವು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ ಕಪಿಲ್.
ಆದರೆ ಮತ್ತೊಬ್ಬ ಹಾಸ್ಯನಟ ಸುನೀಲ್ ಗ್ರೋವರ್ ಅವರ ಸಂಭಾವನೆಗೂ ಕಪಿಲ್ ಶರ್ಮಾ ಸಂಭಾವನೆಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಎಪಿಸೋಡ್‌ಗೆ ಸುನೀಲ್ ಗ್ರೋವರ್ ಪಡೆಯುವ ಮೊತ್ತ 25 ಲಕ್ಷ ರೂಪಾಯಿಗಳು.
ಹಾಗೆಯೇ ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ ಖ್ಯಾತಿಯ ಜೇತಲಾಲ್ ಅವರು ಒಂದು ಎಪಿಸೋಡ್‌ಗೆ ಪಡೆಯುವ ಮೊತ್ತ ಸುಮಾರು ಒಂದೂವರೆ ಲಕ್ಷ ರೂಪಾಯಿಗಳು.
ಹಾಗೆಯೇ ಹಿಂದಿ ಸೀರಿಯಲ್ ಲೋಕದ ತಾರೆ ಅನುಪಮಾ ಖ್ಯಾತಿಯ ರೂಪಾ ಗಂಗೂಲಿ ಅವರು ಒಂದು ಎಪಿಸೋಡ್‌ಗೆ ಪಡೆಯುವ ಮೊತ್ತ 3 ಲಕ್ಷ ರೂಪಾಯಿಗಳು