ಜೊತೆ ಜೊತೆಯಲಿ, ಸೀತಾರಾಮ ಸೀರಿಯಲ್ ಸೂಪರ್ ಹಿಟ್ ಆಗೋದಕ್ಕೆ ಇವರೇ ಕಾರಣ!
ಜೊತೆ ಜೊತೆಯಲಿ, ಸೀತಾರಾಮ ಸೀರಿಯಲ್ ಹಿಟ್ ಆಗೋದಕ್ಕೆ ರಶ್ಮಿ ಅಭಯಸಿಂಹ ಅವರೇ ಕಾರಣ. ಯಾಕಂದ್ರೆ ಈ ಎರಡು ಸೂಪರ್ ಹಿಟ್ ಸೀರಿಯಲ್ ಚಿತ್ರಕಥೆ ಬರೆದಿದ್ದೂ ಈ ಅನ್ನೋ ಪ್ರತಿಭೆ.
ರಶ್ಮಿ ಅಭಯಸಿಂಹ (Rashmi Ambhasimha).. ಈ ಹೆಸರು ಅಲ್ಲಾಂದ್ರು ಇವರ ಮುಖ ನೋಡಿದ್ದ್ರೆ, ಎಲ್ಲೋ ನೋಡಿದ ನೆನಪು ಖಂಡಿತಾ ಇರುತ್ತೆ. ಯಾಕಂದ್ರೆ ಇವರು ಕನ್ನಡ ಕಿರುತೆರೆಯಲ್ಲಿ ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ, ಈಗ ನಟನೆಯಿಂದ ಸಂಪೂರ್ಣವಾಗಿ ದೂರವಿದ್ದಾರೆ.
ಹಾಗಂತ ರಶ್ಮಿ ಕಿರುತೆರೆಯಿಂದ ದೂರ ಉಳಿದಿಲ್ಲ. ನಿರ್ಮಾಪಕ ಮತ್ತು ನಿರ್ದೇಶಕ ಅಭಯಸಿಂಹ ಅವರ ಪತ್ನಿಯಾಗಿರುವ ರಶ್ಮಿ ಅಭಯಸಿಂಹ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಪಲ್ಲವಿ ಅನುಪಲ್ಲವಿ (Pallavi Anupallavi) ಧಾರಾವಾಹಿಯಲ್ಲಿ ನಾಯಕಿ ನಂದಿನಿ ಪಾತ್ರದಲ್ಲಿ ಮಿಂಚಿದ್ದ ನಟಿ.
ಅಷ್ಟೇ ಅಲ್ಲ ಅಳಗುಳಿ ಮನೆ, ನಮ್ಮಮ್ಮ ಶಾರದೆ, ಮಹಾಭಾರತ, ಮೀರಾ ಮಾಧವ, ನಾಗಮಣಿ ಧಾರಾವಾಹಿಗಳಲ್ಲೂ, ಕೂರ್ಮಾವತಾರ, ಪ್ರಶ್ನೆ, ತಲ್ಲ, ಲೈಫು ಇಷ್ಟೇನೆ, ಎಂದೆಂದೂ ನಿನಗಾಗಿ ಸಿನಿಮಾಗಳಲ್ಲೂ ನಟಿಸಿದ್ದರು. ಆದರೆ ಈಗ ನಟನೆಗೆ ಗುಡ್ ಬೈ ಹೇಳಿ ಬರವಣಿಗೆಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ ರಶ್ಮಿ.
ಹೌದು ಕಳೆದ ಕೆಲವು ವರ್ಷಗಳಿಂದ ಹಲವು ಸೀರಿಯಲ್ ಗಳಿಗೆ ಚಿತ್ರಕಥೆ ಬರೆಯುತ್ತಿದ್ದಾರೆ ರಶ್ಮಿ ಅಭಯಸಿಂಹ. ಇವರು ಬರೆದ ಹಲವು ಚಿತ್ರಕಥೆಗಳು ಸೂಪರ್ ಹಿಟ್ ಧಾರಾವಾಹಿಗಳಾಗಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಜೊತೆ ಜೊತೆಯಲಿ ಸೀರಿಯಲ್ ಮತ್ತು ಗಗನ್ ಚಿನ್ನಪ್ಪ ಮತ್ತು ವೈಷ್ಣವಿ ಗೌಡ ನಟಿಸುತ್ತಿರುವ ಸೀತಾ ರಾಮ (Sita Rama).
ಇದು ಮಾತ್ರವಲ್ಲ ಪ್ರಶಾಂತ್ ಭಾರಧ್ವಜ್ ಮತ್ತು ಸೌಮ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ ಮಿಲನ ಧಾರಾವಾಹಿಯ ಮುಂದುವರೆದ ಭಾಗಕ್ಕೆ, ರಿಷಿ ಮತ್ತು ಐಶ್ವರ್ಯ ಪಿಸೆ ನಟಿಸಿದ ಅನುರೂಪ ಸೀರಿಯಲ್ ಗೆ, ವಿನಯ್ ಗೌಡ ಮತ್ತು ಪ್ರಿಯಾಂಕ ಚಿಂಚೋಳಿ ನಟಿಸಿದ ಹರಹರ ಮಹಾದೇವ ಸೀರಿಯಲ್ ಗೂ ರಶ್ಮಿ ಚಿತ್ರಕಥೆ ಬರೆದಿದ್ದಾರೆ.
ಅಷ್ಟೇ ಅಲ್ಲ ತಮ್ಮ ಮಾತಿನ ಮೂಲಕವೂ ಜನಮನ ಗೆದ್ದಿದ್ದ ಈ ನಟಿ ಮತ್ತು ಬರಹಗಾರ್ತಿ ಕೆಲವು ಸಮಯ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದರು. ದೇಗುಲ ದರ್ಶನ ಮತ್ತು ಹೆಲ್ತ್ ಪ್ಲಸ್ ಎನ್ನುವ ಆರೋಗ್ಯ ಕಾರ್ಯಕ್ರಮಗಳನ್ನು ರಶ್ಮಿ ನಿರೂಪಣೆ (Anchoring) ಮಾಡಿದ್ದರು.
ಸದ್ಯ ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಎಲ್ಲರ ಮನ ಗೆದ್ದಿರುವ ಸೀತಾ ರಾಮ ಮತ್ತು ಸಿಹಿ ಮುದ್ದಾದ ಕಥೆಯನ್ನು ಹೊಂದಿರುವ ಸೀತಾ ರಾಮ ಸೀರಿಯಲ್ ಕಥೆಯನ್ನು ರಶ್ಮಿ ಬರೆಯುತ್ತಿದ್ದಾರೆ. ಕಥೆ ತುಂಬಾನೆ ಚೆನ್ನಾಗಿ ಬರುತ್ತಿದೆ ಎಂದು ಜನರೇ ಒಪ್ಪಿಕೊಂಡಿದ್ದಾರೆ, ಹಾಗಾಗಿ ಸೀರಿಯಲ್ ಟಿಆರ್ಪಿ ಕೂಡ ಚೆನ್ನಾಗಿದೆ. ಸದ್ಯ ಬರಹದಲ್ಲಿ ಬ್ಯುಸಿಯಾಗಿರುವ ರಶ್ಮಿಯವರನ್ನು ಮತ್ತೆ ತೆರೆ ಮೇಲೆ ನಟಿಯಾಗಿ ನೋಡಲು ಜನ ಕಾಯ್ತಿದ್ದಾರೆ.