ನಾರಾಯಣಾಚಾರ್ಯರ ಹೆಂಡ್ತಿ, ಸೊಸೆಯಂದಿರು ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್!
ರಾಮಾಚಾರಿ ಧಾರಾವಾಹಿ ಇದೀಗ 750 ಸಂಚಿಕೆಗಳನ್ನು ಪೂರೈಸಿದ್ದು, ಆ ಸಂಭ್ರಮವನ್ನು ಸೀರಿಯಲ್ ತಂಡ ಕೇಕ್ ಕತ್ತರಿಸಿ ಸೆಲೆಬ್ರೇಟ್ ಮಾಡಿದೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ಅಂದ್ರೆ ಅದು ರಾಮಾಚಾರಿ. ಕಳೆದ ಮೂರು ವರ್ಷಗಳಿಂದ ಸೀರಿಯಲ್ ಭರ್ಜರಿ ಮನರಂಜನೆ ನೀಡುತ್ತಾ ಬಂದಿದೆ. ರಾಮಾಚಾರಿ ಹಾಗೂ ಚಾರು ಜೋಡಿ ವೀಕ್ಷಕರ ನೆಚ್ಚಿನ ಜೋಡಿಯಾಗಿರೋದಂತೂ ನಿಜಾ. ಇದೀಗ ಈ ಸೀರಿಯಲ್ ತಂಡ ಖುಷಿಯ ಮೂಡ್ ನಲ್ಲಿದೆ.
ಹೌದು, ರಾಮಾಚಾರಿ ಧಾರಾವಾಹಿ (Ramchari Serial) 2022 ರ ಜನವರಿ 21 ರಂದು ಪ್ರಸಾರ ಆರಂಭಿಸಿದ್ದು, ಇದೀಗ ಸೀರಿಯಲ್ ಆರಂಭವಾಗಿ ಬರೋಬ್ಬರಿ 3 ವರ್ಷಗಳಾಗುತ್ತ ಬಂದಿದ್ದು, ಸದ್ಯ 750 ಸಂಚಿಕೆಯನ್ನು ಪೂರೈಸಿದ್ದು, ಆ ಸಂಭ್ರಮವನ್ನು ಸೀರಿಯಲ್ ತಂಡ ಜೊತೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದೆ.
ರಾಮಾಚಾರಿ ಧಾರಾವಾಹಿಯಲ್ಲಿ ವಿಲನ್ ವೈಶಾಖ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಐಶ್ವರ್ಯ ವಿನಯ್ (Aishwarya Vinay) ಈ ಸಂಭ್ರಮದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ರಾಮಾಚಾರಿ ತಂಡಕ್ಕೆ ಕಂಗ್ರಾಜುಲೇಶನ್ಸ್. ಈ ಯೋಜನೆಯ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ. ಜೊತೆ ವೀಕ್ಷಕರು ಪ್ರೀತಿ ಕೊಟ್ಟದ್ದಕ್ಕೆ ಥ್ಯಾಂಕ್ಯೂ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ ಎಂದಿದ್ದಾರೆ.
ಜೊತೆಗೆ ಈ ಸಂಭ್ರಮದಲ್ಲಿ ಜೊತೆಯಾಗಿ ತೆಗೆಸಿಕೊಂಡಂತಹ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ. ಸೀರಿಯಲ್ ನ ಟೆಕ್ನಿಕಲ್ ತಂಡದ ಜೊತೆಗೆ ನಾಯಕ ರಿತ್ವಿಕ್ ಕೃಪಾಕರ್, ನಾಯಕಿ ಮೌನ ಗುಡ್ಡೆಮನೆ, ಐಶ್ವರ್ಯ ವಿನಯ್, ಅಂಜಲಿ ಸುಧಾಕರ್, ಜಾನ್ಸಿ ಕಾವೇರಪ್ಪ, ವಿದ್ಯಾ ರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರಾಮಾಚಾರಿ ಸೀರಿಯಲ್ ನಲ್ಲಿ ನಾರಾಯಣಾಚಾರ್ಯರ ಹೆಂಡ್ತಿ, ಸೊಸೆಯರು ಅಂದ್ರೆ, ಸಂಸ್ಕಾರವಂತರು ಅಂತಾನೆ ಅರ್ಥ. ಪೂರ್ತಿಯಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಈ ತಾರೆಯರು, 750 ಸಂಚಿಕೆಗಳ ಸಂಭ್ರಮದಲ್ಲಿ ಶಾರ್ಟ್ ಡ್ರೆಸ್ ಗಳಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಸೀರಿಯಲ್ ಬಗ್ಗೆ ಹೇಳೋದಾದರೆ, ಮನೆಯವರೆಲ್ಲಾ ಜೊತೆಯಾಗಿ ಸೇರಿ ಸದ್ಯ ಕೃಷ್ಣ ಮತ್ತು ರುಕ್ಮಿಣಿ ಮದುವೆ ಮಾಡಿದ್ದಾಗಿದೆ. ಪಾಪದ ಹುಡುಗಿ ಎಂದು ಮನೆ ಸೇರಿಸಿಕೊಂಡ ರುಕ್ಮಿಣಿಯೇ ಈಗ ವಿಲನ್ ಆಗಿದ್ದಾಳೆ. ವೈಶಾಖ ಆಡಿಸಿದ ಆಟದಂತೆ ಆಡಲು, ಮನೆಯವರನ್ನ ಸೋಲಿಸೋದಕ್ಕೆನೇ ರುಕ್ಮಿಣಿ ಆ ಮನೆಗೆ ಕಾಲಿಟ್ಟಿದ್ದಾಳೆ.
ಇನ್ನೊಂದೆಡೆ ತಪ್ಪೇ ಮಾಡದೆ ವೈಶಾಖ ಜೈಲು ಸೇರಿದ್ದಾಳೆ ಎನ್ನುವ ಮನೆಯವರು, ಅದನ್ನ ಪರಿಶೀಲಿಸಲು ತೆರಳಿದ್ದಾನೆ ರಾಮಾಚಾರಿ. ಇನ್ನು ವೈಶಾಖ ಜೈಲಿನಿಂದ ಹೊರ ಬಂದು, ಇನ್ನೂ ಏನೆಲ್ಲಾ ಕಿತಾಪತಿ ನಡೆಯುತ್ತೋ? ಅಥವಾ ರುಕ್ಮಿಣಿಗೆ ತನ್ನ ತಂದೆ -ತಾಯಿಯ ಸಾವಿಗೆ ಚಾರುನೇ ಕಾರಣ ಅನ್ನೋದು ಗೊತ್ತಾಗಿ ಮುಂದೇನು ಆಗುತ್ತೋ ಅನ್ನೋದನ್ನು ಕಾದು ನೋಡಬೇಕು.