- Home
- Entertainment
- TV Talk
- Exclusive: ಅವಳಿ ಮಕ್ಕಳು ಹುಟ್ಟಿ 3 ತಿಂಗಳು; 1 ತಿಂಗಳ ಡಯೆಟ್‌ನಲ್ಲೇ ಸಣ್ಣಗಾದ ರಾಮಾಚಾರಿ ಸೀರಿಯಲ್ ನಟಿ!
Exclusive: ಅವಳಿ ಮಕ್ಕಳು ಹುಟ್ಟಿ 3 ತಿಂಗಳು; 1 ತಿಂಗಳ ಡಯೆಟ್‌ನಲ್ಲೇ ಸಣ್ಣಗಾದ ರಾಮಾಚಾರಿ ಸೀರಿಯಲ್ ನಟಿ!
Actress Aishwarya Salimath: ನಟಿ ಐಶ್ವರ್ಯಾ ಸಾಲೀಮಠ ಅವರು ಅವಳಿ ಮಕ್ಕಳ ತಾಯಿಯಾಗಿದ್ದು, ಸದ್ಯ ನಟನೆಯಿಂದ ದೂರ ಇದ್ದಾರೆ. ಈಗ ಇವರು ತೂಕ ಇಳಿಸಿಕೊಂಡಿದ್ದಾರೆ, ಅದು ಹೇಗೆ ಸಾಧ್ಯ ಆಯ್ತು ಎಂದು ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಜೊತೆ ಹೇಳಿದ್ದಾರೆ.

ತೂಕ ಇಳಿಸಿಕೊಂಡ್ರು
ಐಶ್ವರ್ಯಾ ಸಾಲೀಮಠ ಅವರು ಮಕ್ಕಳಿಗೆ ಜನ್ಮ ಕೊಟ್ಟು ಮೂರು ತಿಂಗಳಾಯ್ತು, ಮಕ್ಕಳಿಗೆ ವಜ್ರ ವೈಢೂರ್ಯ ಎಂದು ಹೆಸರು ಇಟ್ಟಿದ್ದಾರೆ. ಬಾಣಂತನದ ಆರೈಕೆಯಲ್ಲಿರುವ ಅವರೀಗ ಆರೋಗ್ಯಕರ ಆಹಾರ ತಿಂದು ಸಣ್ಣಗಾಗಿದ್ದಾರೆ. ಡಯೆಟ್ ಶುರು ಮಾಡಿ, ಒಂದು ತಿಂಗಳಿಗೆ ಒಂದಿಷ್ಟು ತೂಕ ಇಳಿಸಿಕೊಂಡಿದ್ದಾರೆ. “ತೂಕ ಇಳಿಸಿಕೊಂಡಿರೋದು ಎಷ್ಟು ಎಂದು ಈಗ ಹೇಳೋದಿಲ್ಲ, ಇನ್ನಷ್ಟು ಸಣ್ಣ ಆಗೋದು ಬಾಕಿ ಇದೆ” ಎಂದು ಐಶ್ವರ್ಯಾ ಸಾಲೀಮಠ ಹೇಳಿದ್ದಾರೆ.

ಕ್ರೇವಿಂಗ್ಸ್ ಇತ್ತು
ಗರ್ಭಿಣಿ, ಬಾಣಂತನ ಎಂದು ಮನೆಯಲ್ಲಿ ಅಮ್ಮ, ಚೆನ್ನಾಗಿ ತಿನ್ನೋಕೆ ಹೇಳಿದ್ದರು. ನಾನು ಹಾಗೆ ತಿಂದು ದಪ್ಪ ಆದೆ. ಗರ್ಭಿಣಿ ಇದ್ದಾಗ 100kg ಕೂಡ ಆಗಿದ್ದೆ. ಈಗ ಮಕ್ಕಳಿಗೆ ಎದೆ ಹಾಲು ಕುಡಿಸುತ್ತಿರೋದರಿಂದ ಒಂದಿಷ್ಟು ಕ್ಯಾಲರಿ ಬರ್ನ್ ಕೂಡ ಆಗ್ತಿದೆ ಎಂದು ಐಶ್ವರ್ಯಾ ಹೇಳಿದ್ದಾರೆ. ನಾನು ಮೊದಲು ಜಂಕ್ ತಿನ್ನುತ್ತಿದ್ದೆ, ಡಯೆಟ್ ಶುರು ಮಾಡುವ ಮೂರು ದಿನದ ಮುಂಚೆ ನನಗೆ ಇಷ್ಟವಾಗಿದ್ದೆಲ್ಲ ತಿಂದಿದ್ದೆ, ಆಮೇಲೆ ಸ್ವೀಟ್, ಕರಿದ ತಿಂಡಿ ತಿನ್ನೋದು ಬೇಡ ಎಂದು ಫಿಕ್ಸ್ ಆದೆ. ಹೀಗಾಗಿ ಈಗ ಅಷ್ಟು ಕ್ರೇವಿಂಗ್ಸ್ ಆಗ್ತಿಲ್ಲ.
ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ
ನಮ್ಮ ಡಯೆಟ್, ವರ್ಕೌಟ್ ಚೆನ್ನಾಗಿದ್ದರೆ ಮಾನಸಿಕ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ನನಗೆ ಈಗ ಮೂಡ್ ಸ್ವಿಂಗ್ಸ್ ಆಗ್ತಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಮಕ್ಕಳ ಆರೋಗ್ಯಕ್ಕಾಗಿ ನಾನು ಚೆನ್ನಾಗಿ, ಆರೋಗ್ಯಕರವಾಗಿ ತಿನ್ನಬೇಕು ಎಂಬುದು ಗಮನದಲ್ಲಿದೆ ಎನ್ನುತ್ತಾರೆ ಐಶ್ವರ್ಯಾ ಸಾಲೀಮಠ.
ವರ್ಕೌಟ್ ಮಾಡ್ತಿಲ್ಲ
ಮಕ್ಕಳನ್ನು ಕೇರ್ ಮಾಡೋದರಲ್ಲಿ ಒಂದಿಷ್ಟು ವ್ಯಾಯಾಮ ಆಗ್ತಿದೆ. ಸದ್ಯ ವರ್ಕೌಟ್ ಮಾಡಲಾಗುತ್ತಿಲ್ಲ. ಈಗ ಹುಬ್ಬಳ್ಳಿಯಲ್ಲಿದ್ದು, ಬೆಂಗಳೂರಿಗೆ ಹೋದ್ಮೇಲೆ ವರ್ಕೌಟ್ ಮಾಡಬೇಕು ಎಂದುಕೊಂಡಿದ್ದೇನೆ. ವರ್ಕೌಟ್ ಮಾಡಿದರೆ ನಾನು ಇನ್ನಷ್ಟು ಸಣ್ಣ ಆಗ್ತೀನಿ ಎಂಬ ನಂಬಿಕೆ ಇದೆ.
ಡಯೆಟ್ ಹೇಗಿರುತ್ತದೆ?
ಮೊದಲು ಚಪಾತಿ, ಅನ್ನ ಸಾಂಭಾರ್ ಎಂದು ತಿನ್ನುತ್ತಿದ್ದೆ, ಪ್ರೋಟೀನ್ ತಿನ್ನುತ್ತಿರಲಿಲ್ಲ. ಈಗ ಕಾರ್ಬ್ ಕಡಿಮೆ ಮಾಡಿ ಪ್ರೋಟೀನ್, ಪೈಬರ್‌ಗೆ ಹೆಚ್ಚು ಗಮನ ಕೊಡುತ್ತಿದ್ದೇನೆ. ಈಗ ತರಕಾರಿ, ಹಣ್ಣು,ಮೊಟ್ಟೆ, ಪನೀರ್, ಸೊಪ್ಪನ್ನು ಹೆಚ್ಚು ತಿನ್ನುತ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಜಾಸ್ತಿ ನೀರು ಕುಡಿಯುತ್ತೇನೆ. ಮನೆಯ ಊಟ ತಿಂದು ಸಣ್ಣಗಾಗುತ್ತಿದ್ದೇನೆ ಎಂದಿದ್ದಾರೆ ಐಶ್ವರ್ಯಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

