- Home
- Entertainment
- TV Talk
- ಮದುವೆಗೂ ಮುನ್ನ ದುಬಾರಿ ಕಾರ್ ತಗೊಂಡು ಸರ್ಪ್ರೈಸ್ ಕೊಟ್ಟ 'ರಾಮಾಚಾರಿ' ಧಾರಾವಾಹಿ ನಟಿಯ ಭಾವಿ ಪತಿ!
ಮದುವೆಗೂ ಮುನ್ನ ದುಬಾರಿ ಕಾರ್ ತಗೊಂಡು ಸರ್ಪ್ರೈಸ್ ಕೊಟ್ಟ 'ರಾಮಾಚಾರಿ' ಧಾರಾವಾಹಿ ನಟಿಯ ಭಾವಿ ಪತಿ!
'ರಾಮಾಚಾರಿ' ಧಾರಾವಾಹಿ ನಟಿ ಶೀಲಾ ಎಚ್ ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಅವರ ಭಾವಿ ಪತಿ ಹೊಸ ಕಾರ್ ಖರೀದಿ ಮಾಡಿದ್ದಾರೆ.

ನಿಶ್ಚಿತಾರ್ಥ ಮಾಡಿಕೊಂಡಿರುವ ʼರಾಮಾಚಾರಿʼ ಧಾರಾವಾಹಿ ನಟಿ ಶೀಲಾ ಎಚ್ ಅವರು ಆದಷ್ಟು ಬೇಗ ಮದುವೆ ಆಗಲಿದ್ದು, ಹೊಸ ಜೀವನ ಶುರು ಮಾಡಲಿದ್ದಾರೆ.
ʼರಾಮಾಚಾರಿʼ ಧಾರಾವಾಹಿಯಲ್ಲಿ ಹೀರೋ ರಾಮಾಚಾರಿ ತಂಗಿ ಪಾತ್ರದಲ್ಲಿ ಸಾಕಷ್ಟು ನಟಿಯರು ನಟಿಸಿದ್ದರು. ಪದೇ ಪದೇ ಶ್ರುತಿ ಪಾತ್ರಧಾರಿಗಳು ನಟಿಸುತ್ತಿದ್ದರು.
ಈಗ ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿ ಪಾತ್ರದಲ್ಲಿ ಶೀಲಾ ಎಚ್ ಅವರು ನಟಿಸುತ್ತಿದ್ದಾರೆ. ಈಗ ಶೀಲಾ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
ರಾಮಾಚಾರಿ ಧಾರಾವಾಹಿ ಕಲಾವಿದರಾದ ರಿತ್ವಿಕ್ ಕೃಪಾಕರ್, ಮೌನ ಗುಡ್ಡೇಮನೆ, ಐಶ್ವರ್ಯಾ ಸಾಲೀಮಠ, ವಿನಯ್ ಯುಜೆ ಅವರು ಈ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು.
ನಟಿ ಶೀಲಾ ಎಚ್ ಅವರು ಚಿರಂತ್ ಎನ್ನುವವರನ್ನು ಮದುವೆಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಎಂಗೇಜ್‌ಮೆಂಟ್ ನಡೆದಿದ್ದು, ಎರಡೂ ಕುಟುಂಬಸ್ಥರು ಭಾಗಿಯಾಗಿದ್ದರು.
ರಾಮಾಚಾರಿ ಧಾರಾವಾಹಿ ನಟಿ ಶೀಲಾ ಎಚ್ ಅವರದ್ದು ಲವ್ ಮ್ಯಾರೇಜ್? ಅರೇಂಜ್ ಮ್ಯಾರೇಜ್? ಎನ್ನುವ ಬಗ್ಗೆ ಮಾಹಿತಿ ಇಲ್ಲ. ಮದುವೆ ಬಗ್ಗೆ ಈ ನಟಿ ಮಾಹಿತಿ ನೀಡಿಲ್ಲ.
ಅಂದಹಾಗೆ ಆದಷ್ಟು ಬೇಗ ʼರಾಮಾಚಾರಿʼ ಧಾರಾವಾಹಿ ನಟಿ ಆದಷ್ಟು ಬೇಗ ಮದುವೆಯಾಗಲಿದ್ದು, ಮದುವೆ ತಯಾರಿಯಾಗಿ ಹೊಸ ಕಾರ್ ಖರೀದಿ ಮಾಡಿದಂತಿದೆ.
ಅಂದಹಾಗೆ ಈ ದುಬಾರಿ ಕಾರ್‌ಗೆ 13 ಲಕ್ಷ ರೂಪಾಯಿ ಮೇಲೆ ಬೆಲೆ ಇದೆ ಎನ್ನಲಾಗಿದೆ. ಅಂದಹಾಗೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿರುವ ಶೀಲಾ ಮದುವೆಯಾದ ಬಳಿಕ ಮತ್ತೆ ನಟಿಸ್ತಾರಾ ಎಂದು ಕಾದು ನೋಡಬೇಕಾಗಿದೆ.