ಪತಿ ಜೊತೆ ಕೇದಾರನಾಥನ ದರ್ಶನ ಪಡೆದು, ಕನಸು ನನಸಾಗಿಸಿದ ರಾಮಾಚಾರಿ ನಟಿ!
ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿ ಐಶ್ವರ್ಯ ತಮ್ಮ ರಿಯಲ್ ಪತಿ ವಿನಯ್ ಜೊತೆ ಕೇದರನಾಥನ ದರ್ಶನ ಪಡೆದು ಬಂದಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರವಾಹಿಯಲ್ಲಿ ರಾಮಾಚಾರಿಯ ಕುಟುಂಬವನ್ನೇ ಸರ್ವನಾಶ ಮಾಡಲು ಮನೆ ಸೇರಿಕೊಂಡು ಚಾರುವಿಗೆ ಕಾಟ ಕೊಡುವ ವಿಲನ್ ವೈಶಾಖ ಆಗಿ ನಟಿಸುತ್ತಿದ್ದಾರೆ ನಟಿ ಐಶ್ವರ್ಯ ಸಾಲಿಮಠ್ (Aishwarya Salimath).
ಐಶ್ವರ್ಯಾ ಅವರ ಪತಿ ವಿನಯ್ ಕೂಡ ನಟರಾಗಿದ್ದು, ಇದೀಗ ಇಬ್ಬರೂ ನಟನೆಯಿಂದ ಬ್ರೇಕ್ ತೆಗೆದುಕೊಂಡು ತಮ್ಮ ಸ್ನೇಹಿತರ ಜೊತೆ ಕೇದಾರನಾಥನ ದರ್ಶನ ಪಡೆದಿದ್ದು, ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ (social media) ಹಂಚಿಕೊಂಡಿದ್ದಾರೆ.
ಹೆಚ್ಚಾಗಿ ತಮ್ಮ ಪತಿ ಮತ್ತು ಸ್ನೇಹಿತರೊಂದಿಗೆ ವಿವಿಧ ತಾಣಗಳಿಗೆ ಟ್ರಾವೆಲ್ ಮಾಡುತ್ತಾ, ಗಂಡನ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಐಶ್ವರ್ಯಾ ಈ ಬಾರಿ ಉತ್ತರಾಖಂಡದಲ್ಲಿರುವ ರುದ್ರಪ್ರಯಾಗದ ಹಿಮತಪ್ಪಲಿನಲ್ಲಿ ನೆಲೆಯಾಗಿರುವ ಕೇದಾರನಾಥನ ದರ್ಶನ ಪಡೆದು ಬಂದಿದ್ದಾರೆ.
ಕೆಲದಿನಗಳ ಹಿಂದೆ ಐಶ್ವರ್ಯಾ ಕೇದರನಾಥಕ್ಕೆ (Kedaranath) ತೆರಳಿದ್ದು ಅಲ್ಲಿ ದೇಗುಲದ ಮುಂದೆ ಪತಿ ಜೊತೆ ನಿಂತು ತೆಗೆಸಿಕೊಂಡ ಫೋಟೋ ಹಂಚಿಕೊಂಡು, ಕೇದಾರನಾಹನ ಸನ್ನಿಧಿಯಲ್ಲಿ, ಕನಸು ನನಸಾದ ಕ್ಷಣ. ನಮ್ಮ ಕನಸಿನ ತಾಣಕ್ಕೆ, ಇಬ್ಬರ ಮೊದಲ ಟ್ರೆಕ್ಕಿಂಗ್ , ಥ್ಯಾಂಕ್ಯೂ ಕೇದಾರ್ ಜೀ ಇದು ಸಂಭವಿಸಿದ್ದಕ್ಕೆ. ಅಲ್ಲದೇ ಈ ಟ್ರೆಕ್ ಮಾಡಲು ಪ್ರೇರಣೆ ನೀಡಿದ್ದಕ್ಕೂ ಧನ್ಯವಾದಗಳು, ಹರ್ ಹರ್ ಮಹಾದೇವ್ ಎಂದು ಬರೆದುಕೊಂಡಿದ್ದಾರೆ.
ಕೇದಾರಾನಾಥ ಯಾತ್ರೆಗೂ ಮುನ್ನ ಇವರು ಹರಿಧ್ವಾರಕ್ಕೂ (Haridhwar) ತೆರಳಿ ದೇವರ ದರ್ಶನ ಪಡೆದು ಬಂದಿದ್ದಾರೆ, ಅಲ್ಲದೇ ಗಂಗಾರತಿ ಕೂಡ ಮಾಡಿ ಕೃತಾರ್ಥರಾಗಿದ್ದು, ಅಲ್ಲಿ ಕಳೆದ, ಗಂಗಾರಾತಿ ಮಾಡಿದ ಸುಂದರ ಕ್ಷಣಗಳನ್ನು ಸೆರೆ ಹಿಡಿದು ವಿಡಿಯೋ ಹಂಚಿಕೊಂಡಿದ್ದಾರೆ. ಬಳಿಕ 22 ಗಂಟೆಗಳು 32 ಕಿಮೀ ಟ್ರೆಕ್ ಮಾಡಿ ಚಾರ್ ಧಾಮ್ ಯಾತ್ರೆ ಮಾಡುವ ಮೂಲಕ ಕೇದಾರನಾಥ ತಲುಪಿದ್ದಾರೆ.
ಐಶ್ವರ್ಯಾ ಅವರು ಮಹಾಸತಿ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟರು, ಸರಯೂ, ಅನಂತಿನಿ, ಅಗ್ನಿಸಾಕ್ಷಿ, ಸೇವಂತಿ, ರಾಮಾಚಾರಿ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಸದ್ಯ ಸೇವಂತಿ ಮತ್ತು ರಾಮಾಚಾರಿ ಸೀರಿಯಲ್ ಗಳಲ್ಲಿ ಜೊತೆ ಜೊತೆಯಾಗಿ ನಟಿಸುತ್ತಿದ್ದಾರೆ.
ಇನ್ನು ಇವರ ಪತಿ ವಿನಯ್ (Vinay) ಕೂಡ ನಟರಾಗಿದ್ದು, ಮಹಾಸತಿ, ಜೀವನದಿ, ಲಕ್ಷ್ಮೀ ಸ್ಟೋರ್ಸ್ (ತಮಿಳು ಸೀರಿಯಲ್) ಮಹಾದೇವಿ, ಕನ್ನಡತಿ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಸಿನಿಮಾದಲ್ಲೂ ನಟಿಸಿದ್ದು, ಇತ್ತೀಚೆಗೆ ಬಿಡುಗಡೆಯಾಗಿ ಜನಮನ ಗೆದ್ದಿರುವ ಶಾಖಾಹಾರಿ ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ.