- Home
- Entertainment
- TV Talk
- Photos: ರಿಯಲ್ ಆಗಿ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸಂಜನಾ ಬುರ್ಲಿ
Photos: ರಿಯಲ್ ಆಗಿ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸಂಜನಾ ಬುರ್ಲಿ
Actress Sanjana Burli Photos: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಆಗಿ ಅನೇಕ ಜನರ ಮನಸ್ಸು ಗೆದ್ದಿದ್ದ ನಟಿ ಸಂಜನಾ ಬುರ್ಲಿ ಅವರು ಗುಡ್‌ನ್ಯೂಸ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಎಂಗೇಜ್ ಆಗಿದ್ದಾರೆ
ಹೌದು, ಸಂಜನಾ ಬುರ್ಲಿ ಅವರು ಎಂಗೇಜ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸರಳವಾಗಿ ನಿಶ್ಚಿತಾರ್ಥ
ಕೇಸರಿ ಬಣ್ಣದ ಸೀರೆಯಲ್ಲಿ ಅವರು ಮಿರ ಮಿರ ಮಿಂಚುತ್ತಿದ್ದಾರೆ. ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅನೇಕರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಹುಡುಗ ಯಾರು?
ಸಮರ್ಥ ಚೆನ್ನಗಿರಿ ಎನ್ನುವವರ ಜೊತೆ ನಿಶ್ಚಿತಾರ್ಥ ನಡೆದಿದೆ. ಸಮರ್ಥ ಅವರು ಮೆಡಿಕಲ್ ಓದುತ್ತಿದ್ದಾರೆ.
ಸಮರ್ಥ ಏನು ಮಾಡುತ್ತಿದ್ದಾರೆ?
ಅಂದಹಾಗೆ ಸಂಜನಾ ಬುರ್ಲಿ ಕೂಡ ಮೆಡಿಕಲ್ ಇಂಜಿನಿಯರಿಂಗ್ ಮಾಡಿದ್ದರು. ಸಮರ್ಥ ಕೂಡ ಮೆಡಿಕಲ್ ಫೀಲ್ಡ್‌ನವರು.
ಲವ್ ಮ್ಯಾರೇಜ್?
ಇವರಿಬ್ಬರದ್ದು ಲವ್ ಮ್ಯಾರೇಜ್? ಅರೇಂಜ್ ಮ್ಯಾರೇಜ್ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಒಟ್ಟಿನಲ್ಲಿ ಸಂಜನಾ ಅವರು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.
ಸಂಜನಾ ಏನಂದ್ರು?
“ನಮ್ಮ ಜೀವನದ ಈ ಹೊಸ ಹೆಜ್ಜೆಗೆ ನನ್ನ ಎಲ್ಲಾ ಅಭಿಮಾನಿಗಳು ಮತ್ತು followers ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತಿದ್ದೇನೆ!” ಎಂದು ಸಂಜನಾ ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಅವರು ಗಂಧದ ಗುಡಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

