Puttakkana Makkalu Serial Ends… ಭಾವುಕರಾದ ಪುಟ್ಟಕ್ಕನ ಹಿರಿಯ ಮಗಳು ಸಹನಾ
Puttakkana Makkalu ಧಾರಾವಾಹಿ ಇದೀಗ ಅಂತಿಮ ಹಂತದ ಶೂಟಿಂಗ್ ಮುಗಿಸಿದ್ದು, ಇನ್ನೇನು ಸದ್ಯದಲ್ಲೆ ಸೀರಿಯಲ್ ಕೂಡ ಕೊನೆಗಾಣಲಿದೆ. ಈ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಗಳು ಸಹನಾ ಖ್ಯಾತಿಯ ನಟಿ ಅಕ್ಷರಾ, ಮಧುರ ನೆನಪುಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ಪುಟ್ಟಕ್ಕನ ಮಕ್ಕಳು
ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ ಈಗಾಗಲೇ ಅಂತಿಮ ಹಂತದ ಶೂಟಿಂಗ್ ಮುಗಿಸಿದ್ದು, ಕೊನೆಯ ಬಾರಿ ಸೀರಿಯಲ್ ತಂಡದ ಪಾರ್ಟಿಯೂ ಆಗಿದೆ. ಸದ್ಯದಲ್ಲೇ ಸೀರಿಯಲ್ ಕೊನೆಗಾಣಲಿದೆ. ಈ ಹಿನ್ನೆಲೆಯಲ್ಲಿ ಪುಟ್ಟಕ್ಕನ ಹಿರಿಯ ಮಗಳು ಸಹನಾ ಖ್ಯಾತಿಯ ನಟಿ ಅಕ್ಷರಾ ಸೋಶಿಯಲ್ ಮೀಡೀಯಾದಲ್ಲಿ ಶೂಟಿಂಗ್ ಸೆಟ್ ನ ಮಧುರ ನೆನಪಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಅಕ್ಷರಾ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಆರಂಭವಾಗಿ ಸುಮಾರು ನಾಲ್ಕು ವರ್ಷಗಳೇ ಕಳೆದಿವೆ. ಧಾರಾವಾಹಿ ಆರಂಭದಿಂದ ಇಲ್ಲಿವರೆಗೂ ನಟಿ ಅಕ್ಷರಾ ಎಸ್ ಅವರು ಪುಟ್ಟಕ್ಕನ ಹಿರಿಯ ಮಗಳು ಸಹನಾ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ಹೆಚ್ಚು ನೋವೇ ಕಂಡಿರೋದು. ವಿದ್ಯಾಭ್ಯಾಸ ಇಲ್ಲದೆ ಅಮ್ಮನ ಜೊತೆ ಮೆಸ್ ನಡೆಸುವ ಸಹನಾ ಜೀವನದಲ್ಲಿ ನಡೆದಿದ್ದೆಲ್ಲಾ, ಬರಿ ನೋವಿನ ಕಥೆಗಳೆ. ಆದರೆ ಕೊನೆಗಾದರೂ ಎಲ್ಲವೂ ಸರಿಯಾಗುತ್ತಾ ಅನ್ನೋದನ್ನು ಕಾದು ನೋಡಬೇಕು.
ಫೋಟೊ ಹಂಚಿಕೊಂಡ ಅಕ್ಷರಾ
ಧಾರಾವಾಹಿ ಅಂತ್ಯವಾಗುವ ಈ ಸಮಯದಲ್ಲಿ ಅಕ್ಷರಾ ಶೂಟಿಂಗ್ ಸೆಟ್ ನಲ್ಲಿ ತೆಗೆದಿರುವಂತಹ ಹಲವಾರು ಫೊಟೊಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನಿರ್ದೇಶಕರು, ಸಹ ಕಲಾವಿದರು, ಟೆಕ್ನೀಶಿಯನ್ ಸೇರಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ನಾಲ್ಕು ವರ್ಷದ ಮಧುರ ಅನುಭವ
ಪುಟ್ಟಕ್ಕನ ಮಕ್ಕಳು — 4 ಮರೆಯಲಾಗದ ವರ್ಷಗಳ ನಂತರ, ಈ ಸುಂದರ ಪ್ರಯಾಣ ಕೊನೆಗೂ ಕೊನೆಗೊಂಡಿದೆ. ಈ ಅನುಭವ ನನಗೆ ಏನನ್ನು ಅರ್ಥೈಸಿದೆ ಎಂಬುದನ್ನು ಪದಗಳಲ್ಲಿ ಹೇಳುವುದು ಕಷ್ಟ. ಪ್ರತಿ ಕ್ಷಣ, ಪ್ರತಿ ಪಾಠ, ಪ್ರತಿ ನೆನಪು ನನ್ನ ಹೃದಯಕ್ಕೆ ಶಾಶ್ವತವಾಗಿ ಹತ್ತಿರವಾಗಿರುತ್ತದೆ.
ಎಲ್ಲರಿಗೂ ಧನ್ಯವಾದಗಳು
ನಾನು ಇದನ್ನು ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಸಹನಾ ಆಗಿರುವುದು ನನ್ನ ಜೀವನದ ಅತ್ಯಂತ ವಿಶೇಷ ಅಧ್ಯಾಯಗಳಲ್ಲಿ ಒಂದಾಗಿದೆ. ನೀವು ನನ್ನ ಮೇಲೆ ತೋರಿದ ಅಪಾರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನನ್ನ ಹೃದಯದ ಆಳದಿಂದ ಧನ್ಯವಾದಗಳು. ದಯವಿಟ್ಟು ನನ್ನೊಂದಿಗೆ ನಿಂತು ನನ್ನ ಮುಂದಿನ ಯೋಜನೆಗಳಲ್ಲಿಯೂ ನನಗೆ ಬೆಂಬಲ ನೀಡಿ ಎಂದು ಎಲ್ಲರನ್ನೂ ಅಕ್ಷರಾ ಕೇಳಿಕೊಂಡಿದ್ದಾರೆ.
ಯಾರೆಲ್ಲಾ ನಟಿಸುತ್ತಿದ್ದಾರೆ?
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಿರಿಯ ನಟಿ ಉಮಾಶ್ರೀ, ಧನುಷ್ ಗೌಡ, ಮಂಜುಭಾಷಿಣಿ, ಅಕ್ಷರಾ, ರಮೇಶ್ ಪಂಡಿತ್, ಸಂಜನಾ ಬುರ್ಲಿ, ಹಂಸಾ, ಶಿಲ್ಪಾ, ಅನಿರಿಶ್, ರಮ್ಯಾ ರಾಜು ಸೇರಿ ಹಲವು ಹಿರಿಯ ಕಿರಿಯ ಕಲಾವಿದರು ನಟಿಸಿದ್ದಾರೆ. ಉಮಾಶ್ರೀಯವರು ತಾಯಿಯಾಗಿ ಅದ್ಭುತವಾಗಿ ಅಭಿನಯಿಸಿ, ನಾಲ್ಕು ವರ್ಷಗಳಿಂದ ಧಾರಾವಾಹಿಯನ್ನು ವೀಕ್ಷಕರು ಮಿಸ್ ಮಾಡದೆ ನೋಡುವಂತೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

