- Home
- Entertainment
- TV Talk
- ಪದೇ ಪದೇ ಆಗೋದು ನಿಜವಾದ ಪ್ರೀತಿ ಅಲ್ಲ... ಕಂಠಿ ಮೆಸ್ಸು ಸ್ನೇಹಾನ ಪ್ರೀತ್ಸಿದ್ದೆ ಸುಳ್ಳು ಅಂತಿದ್ದಾರೆ ಜನ!
ಪದೇ ಪದೇ ಆಗೋದು ನಿಜವಾದ ಪ್ರೀತಿ ಅಲ್ಲ... ಕಂಠಿ ಮೆಸ್ಸು ಸ್ನೇಹಾನ ಪ್ರೀತ್ಸಿದ್ದೆ ಸುಳ್ಳು ಅಂತಿದ್ದಾರೆ ಜನ!
ಪುಟ್ಟಕ್ಕನ ಮಕ್ಕಳು ಕಥೆ ಹಾದಿ ತಪ್ಪುತ್ತಿದ್ಯಾ? ಡಿಸಿ ಮೇಡಂ ಸ್ನೇಹಾನ ಅಷ್ಟೊಂದು ಪ್ರೀತಿಸಿದ್ದ ಕಂಠಿಗೆ ಮತ್ತೆ ಲವ್ ಆಗಿ, ಈ ರೀತಿ ಹಿಂದೆ ಅಲೆಯೋದು ಸರಿಯಲ್ಲ ಅಂತಿದ್ದಾರೆ ಜನ.

ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ಡಿಸಿ ಸ್ನೇಹಾ ಸಾವನ್ನಪ್ಪಿದ ಮೇಲೆ ಕಥೆ ಹಾದಿ ತಪ್ಪುತ್ತಿದೆ. ಕಾರಣಾಂತರಗಳಿಂದ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸೀರಿಯಲ್ ನಿಂದ ಹೊರ ನಡೆದ ಕಾರಣ, ಆಕೆಯ ಪಾತ್ರವನ್ನು ಸಾಯಿಸಿ, ಹೊಸ ಪಾತ್ರವನ್ನೆ ತರಲಾಯಿತು.
ಹಳೆ ಸ್ನೇಹಾ ಹೃದಯವನ್ನು ಹೊಸ ಸ್ನೇಹಾಗೆ ಹಾಕಲಾಯಿತು. ಇದೀಗ ತಮ್ಮ ಪತ್ನಿ ಸ್ನೇಹಾಳ ಹೃದಯ ಯಾರಿಗೆ ಹಾಕಿದೆ ಅನ್ನೊದನ್ನು ಹುಡುಕಾಡುತ್ತಿದ್ದ ಕಂಠಿಗೆ, ಸ್ನೇಹಾಗೆ ಹೃದಯ ಹಾಕಿರೋದು ಗೊತ್ತಾಗಿ, ಆಕೆಯನ್ನೆ ಮತ್ತೆ ಮದುವೆಯಾಗೋ ಯೋಚನೆ ಮಾಡಿದ್ದಾನೆ.
ಈಗಾಗಲೇ ಸ್ನೇಹಾಗೆ ಪ್ರಪೋಸ್ (Kanti propose Sneha) ಮಾಡಿರುವ ಕಂಠಿ, ಆಕೆ ಹೋದಲ್ಲೆಲ್ಲಾ, ಹಿಂದೆ ಹಿಂದೆ ಹೋಗಿ ಕಾಟ ಕೊಡುತ್ತಿದ್ದಾನೆ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾನೆ. ಸ್ನೇಹಾ ಮನ ಒಲಿಸಲು ಪುಟ್ಟಕ್ಕನ ಸಹಾಯವನ್ನು ಸಹ ತೆಗೆದುಕೊಂಡಿದ್ದಾನೆ.
ಆರಂಭದಲ್ಲಿ ತನ್ನ ಹೆಂಡತಿ ಸ್ನೇಹಾ ಸಾಯೋದಕ್ಕೆ, ಈ ಸ್ನೇಹಾನೆ ಕಾರಣ ಎಂದು ಆಕೆಯನ್ನು ನೋಡಿದ್ರೆ, ಮುಖ ಸಿಂಡರಿಸುತ್ತಿದ್ದ ಕಂಠಿ, ಈಗ ಸಂಪೂರ್ಣ ಬದಲಾಗಿ, ಪ್ರೀತಿಯಲ್ಲಿ ಹುಚ್ಚ ಆದವನ ಹಾಗೆ ವರ್ತಿಸುತ್ತಿದ್ದಾನೆ. ಕಂಠಿ ಈ ರೀತಿಯಾಗಿ ಸ್ನೇಹಾ ಹಿಂದೆ ಹಿಂದೆ ಅಲೆಯುತ್ತಿರೋದನ್ನು ನೋಡಿ ವೀಕ್ಷಕರು ಕಿಡಿ ಕಾರಿದ್ದಾರೆ.
ನಿಜವಾದ ಪ್ರೀತಿ (real love) ಒಬ್ಬರ ಮೇಲೆ ಒಂದೇ ಸಲ ಆಗೋದು. ಇತರ ಇನ್ನೊಬ್ಬರ ಹಿಂದೆ ಹೋದರೆ ಅದು ಯಾವತ್ತೂ ಪ್ರೀತಿ ಅನ್ನಿಸಿಕೊಳಲ್ಲ. ಕಂಠಿ ಸ್ನೇಹ ಅಕ್ಕನಿಗೆ ಹೇಳಿದ್ದ ಎಲ್ಲ ಡೈಲಾಗ್ ಸುಳ್ಳು, ಮೆಸ್ಸು ಸ್ನೇಹಾನ ಕಂಠಿ ಪ್ರೀತಿಸಿದ್ದೇ ಸುಳ್ಳು ಅಂತಿದ್ದಾರೆ ಜನ.
ಅಷ್ಟೇ ಅಲ್ಲ ಈ ಕಂಠಿ 800 ಎಪಿಸೋಡ್ ಮೆಸ್ಸು ನ ಪ್ರೀತಿಸಿದ್ದು ಸುಳ್ಳು ಹಾಗಾದ್ರೆ, ಛೆ ಇಂಥವರನ್ನ ನಂಬಲೇ ಬಾರ್ದು, ಮೆಸ್ಸು ಹತ್ರ ಸಾವು ಬಂದ್ರೆ ಇಬ್ರು ಒಟ್ಟಿಗೆ ಸಾಯಿಬೇಕು ಒಂದು ಕ್ಷಣನು ಆಚೆ ಈಚೆ ಆಗ್ಬಾರ್ದು ಅಂತಿದ್ದ, ಅದೆಲ್ಲ ಬೊಗಳೆ ಬಿಟ್ಟಿದ್ದು. ಪ್ರೀತಿ ಗೆ ಬೆಲೆ ಇಲ್ಲ ಅನ್ನೋದನ್ನ ಚೆನ್ನಾಗಿ ತೋರಿಸಿ ಕೊಟ್ರಿ ಈ ಸೀರಿಯಲ್ ಅಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಜನ.
ಇನ್ನೂ ಒಬ್ಬರು ಕಾಮೆಂಟ್ ಮಾಡಿ ಥೂ ಎನ್ ಸ್ಟೋರಿ ನೋ ಏನೋ...ಇದೆಲ್ಲ ಓವರ್ ಆಯ್ತು ಅಂದಿದ್ದಾರೆ. ಪದೇ ಆಗೋದಕ್ಕೆ ಪ್ರೀತಿ ಅನ್ನೊಲ್ಲ ಡೈರೆಕ್ಟರ್ ಸಾಹೇಬರೇ. ಮೆಸ್ಸು ಮತ್ತು ಕಂಠಿ ಜೋಡಿನೇ ಚೆನ್ನಾಗಿತ್ತು, ಈಗ ಕಂಠಿಗೆ ಮತ್ತೊಂದು ಜೋಡಿ ಮಾಡುವ ಅವಶ್ಯಕತೆಯೇ ಇಲ್ಲವಾಗಿತ್ತು ಅಂತಾನೂ ಹೇಳ್ತಿದ್ದಾರೆ ಜನ.