ಕಾಶ್ಮೀರದಲ್ಲಿ ಪುಟ್ಟಕ್ಕನ ಮಗಳು…. ಮಿಸ್ ಕಾಶ್ಮೀರ ಆ್ಯಪಲ್ ನೀವು ಅಂತಿದ್ದಾರೆ ಫ್ಯಾನ್ಸ್!
ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಸ್ನೇಹಾ ಖ್ಯಾತಿಯ ಸಂಜನಾ ಬುರ್ಲಿ ಸದ್ಯ ನಟನೆಗೆ ಕೊಂಚ ಬ್ರೇಕ್ ಕೊಟ್ಟು ಕಾಶ್ಮೀರದಲ್ಲಿ ಟೂರ್ ಮಾಡ್ತಾ ಎಂಜಾಯ್ ಮಾಡ್ತಿದ್ದಾರೆ.
ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ಟಿಆರ್ ಪಿಯಲ್ಲಿ ಸದಾ ಮುಂದು. ನಟಿ ಉಮಾಶ್ರೀಯಿಂದ ಹಿಡಿದು, ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ಜನರಿಗೆ ಅಚ್ಚುಮೆಚ್ಚು. ಅದರಲ್ಲೂ ಸ್ನೇಹಾ ಅಂದ್ರೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ.
ತಪ್ಪು ಮಾಡಿದಾಗ ಅದನ್ನು ಕಡ್ಡಿಮುರಿದಂತೆ ಎದುರಲ್ಲೇ ಹೇಳುವ ನೇರ, ದಿಟ್ಟ ಹುಡುಗಿ ಸ್ನೇಹಾ. ಕಂಠಿಯ ಪ್ರೀತಿಯ ಮಿಸ್ಸು. ಸದ್ಯ ಧಾರಾವಾಹಿಯಲ್ಲಿ ಕಂಠಿ ಸ್ನೇಹ ಮಧ್ಯೆ ಪ್ರೀತಿ ಮತ್ತೆ ಚಿಗುರೊಡೆದಿದ್ದು, ಈಗ ಅತ್ತೆ- ಸೊಸೆಯ ಬಾಂಧವ್ಯ ಸುಧಾರಿಸುವ ಸಾಹಸ ನಡೆಯುತ್ತಲಿದೆ.
ಇದೆಲ್ಲದರ ನಡುವೆ, ಸ್ನೇಹಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸಂಜನಾ ಬುರ್ಲಿ (Sanjana Burli), ಸೀರಿಯಲ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಟ್ರಾವೆಲ್ ಮೂಡ್ ಗೆ ತೆರಳಿದ್ದಾರೆ. ಸದ್ಯ ಭಾರತದ ಶಿಖರ ಜಮ್ಮು ಕಾಶ್ಮೀರದಲ್ಲಿ ವಿಂಟರ್ ಸೀಸನ್ ಅನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ.
ಕಾಶ್ಮೀರದಲ್ಲಿ ಸ್ನೋ ಫಾಲ್ (snowfall in Kashmir) ಆಗುತ್ತಿದ್ದು, ಅಲ್ಲಿನ ಸುಂದರ ತಾಣಗಳಿಗೆ ತೆರಳಿ ಮೊದಲ ಸ್ನೋ ಫಾಲ್ ಎಂಜಾಯ್ ಮಾಡ್ತಿದ್ದಾರೆ. ಸೋನ್ ಮರ್ಗ್, ಗುಲ್ ಮರ್ಗ್ ನಂತಹ ಅದ್ಭುತ ತಾಣಗಳಿಗೆ ಸಂಜನಾ ತೆರಳಿದ್ದು, ಅಲ್ಲಿ ಮಂಜಿನ ಜೊತೆ ಆಟವಾಡುತ್ತಾ, ಎಂಜಾಯ್ ಮಾಡ್ತಿರೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕಾಶ್ಮೀರದ ಮಂಜಿನ ಹಿನ್ನೆಯಲ್ಲಿ ಸಖತ್ ಆಗಿ ಪೋಸ್ ನೀಡಿರುವ ಸಂಜನ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಮೇಡಂ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರ. ಕಾಶ್ಮೀರದ ಹುಡುಗಿ ತರಾನೇ ಕಾಣಿಸ್ತಿದ್ದೀರಾ. ಕಾಶ್ಮೀರದ ಆಪಲ್ ನೀವು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರಂತೂ ಮೇಡಂ ಒಂದು ಬೊಟ್ಟು ಇಟ್ಕೊಳಿ ಮೇಡಂ ತುಂಬಾನೇ ಚೆನ್ನಾಗಿ ಕಾಣಿಸ್ತೀರಾ ಅಂದ್ರೆ, ಮತ್ತೊಬ್ಬರು, ಎಲ್ಲಾ ಫೋಟೋಗಳಲ್ಲೂ ನೀವು ಅದ್ಭುತವಾಗಿ ಕಾಣಿಸ್ತೀರಾ, ನಮ್ಮ ಹೃದಯದ ರಾಣಿ ನೀವು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇನ್ನು ಕರಿಯರ್ ವಿಷ್ಯಕ್ಕೆ ಬಂದ್ರೆ ಸೀರಿಯಲ್ ಮಾತ್ರವಲ್ಲ ಸಿನಿಮಾ, ಶಾರ್ಟ್ ಫಿಲಂಗಳಲ್ಲಿ ಬ್ಯುಸಿಯಾಗಿರುವ ಸಂಜನಾ ಮತ್ತು ಪುಟ್ಟಕ್ಕನ ಮಕ್ಕಳು ಧಾರಾವಾಗಿಯಲ್ ಕೋ ಸ್ಟಾರ್ ಆಗಿರುವ ಪವನ್ ಕುಮಾರ್ ನಟಿಸಿರುವ ಶಾರ್ಟ್ ಫಿಲಂ (Short Film) ಲವ್ ರೀಸೆಟ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಜನರಿಂದ ಉತ್ತಮವಾದ ರೆಸ್ಪಾನ್ಸ್ ಸಿಕ್ಕಿದೆ.