ಗರ್ಭಿಣಿ ಸನಾ ಖಾನ್‌ರನ್ನು ಪಾರ್ಟಿಯಿಂದ ಎಳೆದೋಯ್ದ ಪತಿ, ನಟಿ ಸಮರ್ಥಿಸಿಕೊಂಡಿದ್ದು ಹೀಗೆ
ಬಾಬಾ ಸಿದ್ದಿಕಿ ನಿನ್ನೆ ರಾತ್ರಿ (16 ಏಪ್ರಿಲ್) ಸೆಲೆಬ್ರೆಟಿಗಳಿಗಾಗಿ ಇಫ್ತಾರ್ ಪಾರ್ಟಿಯನ್ನು ಆಯೋಜಿಸಿದ್ದರು. ಚಿತ್ರರಂಗ ಮತ್ತು ದೂರದರ್ಶನದ ಅನೇಕ ಸ್ಟಾರ್ಸ್ ಈ ಗ್ರ್ಯಾಂಡ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಗ್ಲಾಮರ್ ವರ್ಲ್ಡ್‌ಗೆ ವಿದಾಯ ಹೇಳಿರುವ ನಟಿ ಸನಾ ಖಾನ್, ಪತಿ ಮುಫ್ತಿ ಅನಸ್ ಸೈಯದ್ ಅವರೊಂದಿಗೆ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಆದರೆ .ಪಾರ್ಟಿಯಲ್ಲಿನ ಸನಾ ಮತ್ತು ಅವರ ಪತಿ ಅವರ ವೀಡಿಯೊವೊಂದು ಸಖತ್ ವೈರಲ್ ಆಗಿದೆ . ಅದರಲ್ಲಿ ಗರ್ಭಿಣಿ ಸನಾ ಅವರ ಪತಿ ಅವಳ ಕೈ ಹಿಡಿದು ಪಾರ್ಟಿಯಿಂದ ಎಳೆದುಕೊಂಡು ಹೋಗುವುದು ಕಂಡುಬಂದಿದೆ.ಅಷ್ಟಕ್ಕೂ ಸನಾ ಪತಿಯಾಕೆ ಹೀಗ್ ಮಾಡಿದರು?

ವಾಸ್ತವವಾಗಿ, ಪಾಪರಾಜಿ ಈ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಸನಾ ಅವರ ಪತಿ ಆಕೆ ಕೈಯನ್ನು ಎಳೆದು ಪಾರ್ಟಿಯಿಂದ ಹೊರಗೆ ಕರೆದೊಯ್ಯುತ್ತಿದ್ದಾರೆ. ವೀಡಿಯೊದಲ್ಲಿ, ಸನಾ ಅವರಿಗೆ ನಡೆಯಲು ತೊಂದರೆಯಾಗುತ್ತಿದೆ ಮತ್ತು ಅವರು ಸುಸ್ತಾಗಿ ಇನ್ನು ಮುಂದೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ವೈರಲ್ ಭಯಾನಿ ಹಂಚಿಕೊಂಡ ಈಗ ಈ ವೀಡಿಯೊವನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಸನಾ ಅವರ ಪತಿಯ ಮೇಲೆ ಕೋಪಗೊಂಡಿದ್ದಾರೆ. ಗರ್ಭಿಣಿ ಸಾನಾಳನ್ನು ಅವರ ಪತಿ ಈ ರೀತಿ ನೋಡಿಕೊಳ್ಳಬಾರದು ಎಂದು ಹೇಳಿದ್ದಾರೆ.
ಆದರೆ ಕೆಲವು ಜನರು ಅನಾಸ್ ಅವರನ್ನು ಬೆಂಬಲಿಸಿದ್ದಾರೆ. ಅವರು ಸನಾ ಅವರನ್ನು ಎಲ್ಲಾ ಕ್ಯಾಮೆರಾಗಳು ಮತ್ತು ಫ್ಲ್ಯಾಷ್‌ನಿಂದ ದೂರವಿಡುತ್ತಿದ್ದಾರೆ ಎಂದು ಪತಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
'ಈ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ಮತ್ತು ಈ ವೀಡಿಯೊ ನನ್ನ ಎಲ್ಲ ಒಡಹುಟ್ಟಿದವರಿಗೆ ವಿಚಿತ್ರವಾಗಿದೆ ಭಾಸವಾಗಿದೆ ಎಂಬ ಅರಿವು ನನಗಿದೆ. ಆದರೆ ನಾವು ಕಾರಿನಿಂದ ಹೊರಬಂದ ತಕ್ಷಣ, ನಮ್ಮ ಚಾಲಕರಿಂದ ಸಂಪರ್ಕ ತಪ್ಪಿಹೋಯಿತು. ನಾನು ಪ್ರತಿದಿನಕ್ಕಿಂತ ಹೆಚ್ಚು ಕಾಲ ನಿಂತುಕೊಂಡಿದ್ದೆ. ಇದರಿಂದ ನಾನು ಬೆವರಲು ಪ್ರಾರಂಭಿಸಿದೆ. ನನ್ನನ್ನು ಈ ಕಾರಣಕ್ಕೆ ನಮ್ಮ ಪತಿ ಬೇಗ ಕರೆದೊಯ್ಯಲು ಬಯಸಿದರು. ಇದರಿಂದ ನಾನು ಕುಳಿತು ನೀರು ಕುಡಿಯಲು, ಯಥೇಚ್ಛ ಗಾಳಿ ಸೇವಿಸಬಹುದು ಎಂಬುವುದು ಅವರ ಉದ್ದೇಶವಾಗಿತ್ತು. ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ' ಎಂದು ಸನಾ ಈ ವೈರಲ್ ವೀಡಿಯೊವನ್ನು ವೀಕ್ಷಿಸಿದ ಜನರ ಕಾಮೆಂಟ್‌ಗಳನ್ನು ಓದಿ ನಟಿ ಸ್ಪಷ್ಟಪಡಿಸಿದ್ದಾರೆ.
'ಎಲ್ಲಾ ಅತಿಥಿಗಳ ಫೋಟೋಗಳನ್ನು ತೆಗೆಯುತ್ತಿರುವ ಆ ಪಿಎಪಿಗಳನ್ನು ತೊಂದರೆಗೊಳಿಸಲು ನಾವು ಬಯಸುವುದಿಲ್ಲವಾದ್ದರಿಂದ ನಾನು ಬೇಗನೆ ನಡೆಯುತ್ತೇನೆ, ಎಂದು ನಾನು ಅವರಿಗೆ ಹೇಳಿದೆ. ಆದ್ದರಿಂದ ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳದಂತೆ ನಿಮ್ಮಲ್ಲಿ ವಿನಂತಿಯಿದೆ. ನನ್ನ ಚಿಂತೆ ಮಾಡಿದ್ದಕ್ಕೆ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಎಲ್ಲರಿಗೂ ಬಹಳಷ್ಟು ಪ್ರೀತಿ' ಎಂದು ಸನಾ ಮತ್ತಷ್ಟು ಬರೆದಿದ್ದಾರೆ.
ಮಾಜಿ ಬಿಗ್ ಬಾಸ್ ಪ್ರತಿಸ್ಪರ್ಧಿ ನಟಿ ಸನಾ ಖಾನ್ ಮತ್ತು ಅನಾಸ್ ಸೈಯಾದ್ ತಮ್ಮ ಮೊದಲ ಮಗುವಿನ ನಿರೀಕ್ಷಿಸುತ್ತಿದ್ದಾರೆ. ಅವರು ಕಳೆದ ತಿಂಗಳು ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಬಹಿರಂಗಗೊಳಿಸಿದರು.
ಬಿಗ್ ಬಾಸ್ 6 ರಲ್ಲಿ ಕಾಣಿಸಿಕೊಂಡ ಸನಾ, ನವೆಂಬರ್ 2020 ರಲ್ಲಿ ಅನಾಸ್‌ನನ್ನು ಮದುವೆಯಾಗುವ ಮೊದಲು, ನಟನೆಯಿಂದ ನಿವೃತ್ತಿಯನ್ನು ಘೋಷಿಸಿದರು. ಈ ವರ್ಷದ ಮಾರ್ಚ್‌ನಲ್ಲಿ ಸಂದರ್ಶನವೊಂದರಲ್ಲಿ ಸನಾ ತಾಯಿಯಾಗಲಿರುವ ಬಗ್ಗೆ ಬಹಿರಂಗ ಮಾಡಿದ್ದಾರೆ.