36 ಜನರಿರುವ ತುಂಬು ಕುಟುಂಬದ ಕಥೆ 'ಬೃಂದಾವನ' ಪ್ರೋಮೋ ನೋಡಿ ವೀಕ್ಷಕರು ಏನಂದ್ರು?
ಕಲರ್ಸ್ ಕನ್ನಡದಲ್ಲೆ ಇನ್ನೇನು ಹೊಸ ಸೀರಿಯಲ್ ಬೃಂದಾವನ ಆರಂಭವಾಗಲಿದೆ. ಆದರೆ ಸೀರಿಯಲ್ ಆರಂಭಕ್ಕೂ ಮುನ್ನವೇ ಸೀರಿಯಲ್ ಬಗ್ಗೆ ವೀಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ. ಇದಕ್ಕೇನು ಕಾರಣ ಗೊತ್ತಾ?

ಬರೋಬ್ಬರಿ 36 ಜನರಿರುವ ತುಂಬು ಕುಟುಂಬದ ಕಥೆ ಹೊಂದಿರುವ ಬೃಂದಾವನ ಸೀರಿಯಲ್ (Brundavana serial) ಇನ್ನೇನು ಆರಂಭವಾಗಲಿದೆ. ಈಗಾಗಲೇ ಪ್ರೋಮೋ ಮೂಲಕ ತುಂಬು ಸಂಸಾರದ ಕಥೆ ಹೇಗಿರಬಹುದು ಎನ್ನುವ ಕುತೂಹಲ ಕೂಡ ಹೆಚ್ಚಿದೆ.
ಅಷ್ಟೇ ಅಲ್ಲದೇ ಈ ದೊಡ್ಡ ಸಂಸಾರ ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿ, ತಾವು ಶೀಘ್ರದಲ್ಲಿ ಪ್ರತಿದಿನ ಬರೋದಾಗಿ ತಿಳಿಸಿದ್ದು, ಸಿಕ್ಕಾಪಟ್ಟೆ ಎಂಟರ್ ಟೈನ್ಮೆಂಟ್ ಕೂಡ ನೀಡಿದ್ದು, ಬಿಗ್ ಬಾಸ್ ಮನೆ ಮಂದಿ ಜೊತೆ ಎಂಜಾಯ್ ಮಾಡಿತ್ತು.
ಕಲರ್ಸ್ ಕನ್ನಡದಲ್ಲಿ ಬರುವ ಸೋಮವಾರ ಅಂದರೆ ಅಕ್ಟೋಬರ್ 23ರಿಂದ ಸೀರಿಯಲ್ ಆರಂಭವಾಗಲಿದೆ. ಜನರು ಸೀರಿಯಲ್ ನೋಡೋದಕ್ಕೇನೋ ತುಂಬಾನೆ ಆಸಕ್ತಿಯಿಂದ ಕಾಯ್ತಾ ಇದ್ದಾರೆ, ಆದರೆ ಅದರ ಜೊತೆಗೆ ಒಂದಷ್ಟು ಅಸಮಧಾನ ಸಹ ಹೊರ ಹಾಕಿದ್ದಾರೆ.
ರಾಮ್ ಜೀ ನಿರ್ದೇಶನದ ಈ ಸೀರಿಯಲ್ ನಲ್ಲಿ ಕನ್ನಡತಿ ಖ್ಯಾತಿಯ ಅಮ್ಮಮ್ಮ ಚಿತ್ಕಳಾ ಬೀರಾದರ್, ವೀಣಾ ಸುಂದರ್, ಸುಂದರ್, ಅಂಬುಜಾಕ್ಷಿ ಮೊದಲಾದ ಹಿರಿಯ ಕಿರಿಯ ಕಲಾವಿದರು ನಟಿಸುತ್ತಿದ್ದಾರೆ. ಅಲ್ಲದೇ ಬಿಗ್ ಬಾಸ್ ಮತ್ತು ಕನ್ನಡ ಕೋಗಿಲೆ ಖ್ಯಾತಿಯ ವಿಶ್ವನಾಥ್ ಹಾವೇರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಷ್ಟೇಲ್ಲಾ ಕುತೂಹಲ ಹುಟ್ಟಿಸಿರೋ ಸೀರಿಯಲ್ ಬಗ್ಗೆ ಜನ ಅಸಮಾಧಾನ ಹೊರ ಹಾಕಿರೋದು ಅದೇ ಕಾರಣಕ್ಕೆ. ಅಂದರೆ ವಿಶ್ವನಾಥ್ ಹಾವೇರಿ ಈ ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸ್ತಿರೋದು ಯಾಕೋ ಜನರಿಗೆ ಇಷ್ಟವಾಗ್ತಿಲ್ಲ.
ಪ್ರೀತಿಯೇ ಮೂಲಾಧಾರವಾಗಿರುವ ಈ ಮನೆಯ ಜನರ ಬಹು ದೊಡ್ಡ ಕನಸು ಮನೆ ಮಗನಿಗೆ ಹುಡುಗಿ ಹುಡುಕೋದು. ಈ ಮನೆಯ ಪ್ರೀತಿಯ ಕಿರಿ ಮಗನಾಗಿ ವಿಶ್ವನಾಥ್ (VIshwanath Haveri) ಅಭಿನಯಿಸಿದ್ದಾರೆ. ಆತನಿಗೆ ಮದುವೆ ಮಾಡೋಕೆ ಎಲ್ಲಾರೂ ಹುಡುಗಿ ಹುಡುಕ್ತಿದ್ದಾರೆ.
ಸಾಮಾನ್ಯವಾಗಿ ನಾಯಕ ಎಂದಾಕ್ಷಣ ಎತ್ತರವಾಗಿ, ಕಟ್ಟುಮಸ್ತಾಗಿ, ಇರೋ ಜನರನ್ನೇ ಇಲ್ಲಿವರೆಗೆ ನೋಡಿಕೊಂಡು ಬಂದಿದ್ದೀವಿ. ಆದರೆ ವಿಶ್ವನಾಥ್ ಇನ್ನೂ ಹೈಸ್ಕೂಲ್ ಹುಡುಗನ ಥರಾನೇ ಇದ್ದಾರೆ, ಹಾಗಾಗಿ ಅವರನ್ನು ಹೀರೋ ಮಾಡಿರೋದು ಜನಕ್ಕೆ ಯಾಕೋ ಇಷ್ಟ ಆಗ್ತಿಲ್ಲ.
ಹಾಗಾಗಿ ಸೀರಿಯಲ್ ಪ್ರೋಮೋ ನೋಡಿನೇ ದಯವಿಟ್ಟು ಹೀರೋ ಬದಲಾಯಿಸಿ, ಸ್ಕೂಲ್ ಹುಡುಗನ ಹಾಗಿದ್ದಾನೆ ಎಂದೆಲ್ಲಾ ಹೇಳುತ್ತಿದ್ದಾರೆ. ಇನ್ನು ಕೆಲವರು ಪಾಸಿಟಿವ್ ಆಗಿ ಯೋಚ್ನೆ ಮಾಡಿದ್ದು, ಸೀರಿಯಲ್ ನ ಕಥೆಗೆ ಅಂಥದ್ದೇ ಒಂದು ಹುಡುಗ ಬೇಕಾಗಿದ್ದಿರಬಹುದು, ಅದಕ್ಕಾಗಿ ವಿಶ್ವನಾಥ್ ಆಯ್ಕೆಯಾಗಿದ್ದಾರೆ, ಯಾಕೆ ತಲೆಕೆಡಿಸ್ಕೋಳ್ತೀರಾ, ಸೀರಿಯಲ್ ನೋಡಿದ ಮೇಲೆ ಗೊತ್ತಾಗುತ್ತೆ ಎಂದಿದ್ದಾರೆ.