ಆಟದಿಂದ ಕಾರ್ತಿಕ್ ಹೊರಗಿಟ್ಟ ಪ್ರತಾಪ್, ನೆಟ್ಟಿಗರಿಂದ ಅಪಸ್ವರ, .. ಬಕ್ರಾ ಆಗ್ತಿದ್ದೇವೆ ಅಂತಿದ್ದಾರೆ ವೀಕ್ಷಕರು!
ಬಿಗ್ ಬಾಸ್ ಸೀಸನ್ 10 ರಲ್ಲಿ ಅತ್ಯುತ್ತಮ ಸ್ಪರ್ಧಿಯಾಗಿ, ತಮ್ಮ ಭರ್ಜರಿ ಪ್ರದರ್ಶನದಿಂದ ಸದ್ದು ಮಾಡುತ್ತಿರುವವರು ಕಾರ್ತಿಕ್ ಮಹೇಶ್. ಇದೀಗ ಆಟದಿಂದ ಕಾರ್ತಿಕ್ ಅವರನ್ನು ಪ್ರತಾಪ್ ಹೊರಗಿಟ್ಟಿರೋದು ನೆಟ್ಟಿಗರಿಗೆ ಕೋಪ ತರಿಸಿದೆ.
ಬಿಗ್ ಬಾಸ್ ಸೀಸನ್ 10 ರಲ್ಲಿ (Bigg Boss season 10) ವಾರ ವಾರ ಹೊಸ ಹೊಸ ಗೇಮ್ ಗಳೊಂದಿಗೆ ಆಟ ನಡೆಯುತ್ತಿದೆ. ಇದೀಗ ಈ ವಾರ ಮತ್ತೆ ಎರಡು ತಂಡಗಳು ಜಟಾಪಟಿ ನಡೆಸುತ್ತಿವೆ. ಆದರೆ ಇತ್ತೀಚಿನ ಎಪಿಸೋಡ್ ನಲ್ಲಿ ಕಾರ್ತಿಕ್ ರನ್ನು ಪ್ರತಾಪ್ ಆಟದಿಂದ ಹೊರಗಿಟ್ಟಿದ್ದು ಮಾತ್ರ ಜನರಿಗೆ ಕೋಪ ತರಿಸಿದೆ.
ಈ ಸೀಸನ್ ನಲ್ಲಿ ಕಾರ್ತಿಕ್ ಮತ್ತು ಪ್ರತಾಪ್ (Drone Prathap) ಇಬ್ಬರೂ ಸಹ ಅತ್ಯುತ್ತಮ ಸ್ಪರ್ಧಿಗಳಾಗಿ ಮೂಡಿ ಬಂದಿದ್ದಾರೆ. ಕಾರ್ತಿಕ್ ತಮ್ಮ ಫಿಸಿಕಲ್ ಗೇಮ್ ಗಳ ಮೂಲಕ ಜನಮನ ಗೆದ್ದರೆ, ಪ್ರತಾಪ್ ತಮ್ಮ ಮೈಂಡ್ ಗೇಮ್ ಮೂಲಕವೇ ಬಿಗ್ ಬಾಸ್ ನಲ್ಲಿ ಉಳಿದುಕೊಂಡಿದ್ದಾರೆ.
ನಿನ್ನೆ ಆಟದಲ್ಲಿ ಕಾರ್ತಿಕ್ ತಾನು ಪ್ರತಾಪ್ ತಂಡ ಸೇರೋದಾಗಿ ಹೇಳಿ ಆತನ ಜೊತೆ ಹೋಗಿದ್ದರು. ಆದರೆ ಬಿಗ್ ಬಾಸ್ ನಿಮ್ಮ ತಂಡದಿಂದ ಒಬ್ಬ ದುರ್ಬಲ ಸ್ಪರ್ಧಿಯನ್ನು ಹೊರಗಿಡಬೇಕು ಎಂದಾಗ ಪ್ರತಾಪ್ ತಾನು ಕಾರ್ತಿಕ್ ರನ್ನು ತಂಡದಿಂದ ಹೊರಗಿಡುತ್ತೇನೆ ಎಂದಿದ್ದಾರೆ.
ಸದ್ಯ ಕಾರ್ತಿಕ್ ಉಸ್ತುವಾರಿ ವಹಿಸಿದ್ದಾರೆ. ಆದರೆ ಪ್ರತಾಪ್ ತೀರ್ಮಾನದ ವಿರುದ್ಧ ಜನರು ಅಪಸ್ವರ ಎತ್ತಿದ್ದಾರೆ. ಕಾರ್ತಿಕ್ ಅತ್ಯುತ್ತಮ ಸ್ಪರ್ಧಿ, ತಂಡವನ್ನು ವಿನ್ ಮಾಡುವ ತಾಕತ್ತು ಅವರಿಗಿದೆ. ಅವರನ್ನೇ ತಂಡದಿಂದ ಹೊರಗಿಟ್ಟಿರೋದು ಎಷ್ಟು ಸರಿ ಎಂದು ಜನರು ಹೇಳುತ್ತಿದ್ದಾರೆ.
ಟ್ರೋಲ್ ಪೇಜ್ ಗಳು (troll pages) ಪೂರ್ತಿಯಾಗಿ ಇದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ದ್ರೋಣ ಬರ್ತಾ ಬರ್ತಾ ಅವ್ನ ಬುದ್ಧಿ ತೋರಿಸ್ತಿದ್ದಾನೆ, ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಕಾಮೆಂಟ್ ಮಾಡಿ ಪ್ರತಾಪ್ ಗೆ ತಲೆ ಕೆಟ್ಟಿದ್ಯಾ ಎಂದಿದ್ದಾರೆ.
ಪ್ರತಾಪ್ ಬುದ್ದಿವಂತಿಕೆಯಿಂದ ಆಟ ಆಡ್ತಿದ್ದಾನೆ. ಕಾರ್ತಿಕ್ ತನ್ನ ತಂಡದಲ್ಲಿದ್ದರೆ ತನಗೆ ನಿಯಂತ್ರಿಸಲು ಕಷ್ಟ ಆಗಬಹುದು ಹಾಗೂ ಆ ಕಡೆ ವಿನಯ್ ಹಾಗೂ ಸಂಗೀತ ಇರುವುದರಿಂದ ಗಲಾಟೆ, ಗದ್ದಲ, ಕಿರುಚಾಟ ಜೋರಿರಬಹುದು, ಇದರಿಂದ ತನಗೆ ತಂಡದ ನಿರ್ವಹಣೆ ಕಠಿಣವಾಗಬಹುದೆಂದು ಚಿಂತಿಸಿ, ಕಾರ್ತಿಕ್ ಅವರನ್ನು ಆಟದಿಂದ ಹೊರಹಾಕಿದ್ದಾರೆ ಡೋನ್ ಪ್ರತಾಪ್ ಎಂದು ಮತ್ಯಾರೋ ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು ಡ್ರೋನ್ ಗೆ ಕಾರ್ತಿಕ್ ಅಂದ್ರೆ ಇಷ್ಟ ಇಲ್ಲ, ಅದಕ್ಕಾಗಿಯೇ ಅವನನ್ನು ಹೊರಗಿಟ್ಟಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು ಡ್ರೋನ್ ಗೆ ಸಪೋರ್ಟ್ ಮಾಡಿ ಮಾಡಿ ನಾವು ಬಕ್ರಾ ಆಗ್ತಿದ್ದಿವಿ ಏನೋ ಎಂದಿದ್ದಾರೆ. ಮತ್ತೊಬ್ರು ಕಾಮೆಂಟ್ ಮಾಡಿ ಕಾರ್ತಿಕ್ ಟೀಮಲ್ಲಿ ಇದ್ರೆ ಪೂರ್ತಿ ಅಟೆಂಶನ್ ಅವರ ಮೇಲೆನೆ ಹೋಗುತ್ತೆ, ಅದಕ್ಕಾಗಿ ಅವರನ್ನು ತಂಡದಿಂದ ಹೊರಗಿಟ್ಟು, ಇತರ ಸ್ಪರ್ಧಿಗಳನ್ನು ಒಟ್ಟಿಗೆ ಬಿಟ್ಟು, ತಾನೊಬ್ಬನೆ ಸೆಂಟರ್ ಆಫ್ ಅಟ್ರಾಕ್ಷನ್ ಆಗೋಕೆ ಟ್ರೈ ಮಾಡ್ತಿದ್ದಾರೆ ಎಂದಿದ್ದಾರೆ.
ಅದು ಭಾರತನೆ ಬಕ್ರ ಮಾಡಿದ ತಲೆ.... ಅಲ್ಲಿ ಕಾರ್ತಿಕ್ ಇದ್ರೆ ಡ್ರೋನ್ ಗೆ ಹೆಸರು ಬರೋಲ್ಲ ಅನ್ನೋ ಉದ್ದೇಶ ಅಷ್ಟೇ... ದೇಶವನ್ನೇ ಬಕ್ರ ಮಾಡಿದವನಿಗೆ ಈ ಮನೆಲಿ ಇರೋವ್ರನ ಒಂದು ಲೆಕ್ಕನ, ಇವನು ಎಲ್ಲರನ್ನೂ ಬಕ್ರ ಮಾಡ್ತಿದ್ದಾನೆ ಎಂದು ಹೇಳುತ್ತಿದ್ದಾರೆ.