- Home
- Entertainment
- TV Talk
- Bhargavi LLB Serial: ಭಾರ್ಗವಿಯನ್ನು ಮದುವೆಯಾಗಲು ಬಂದ ಅಶೋಕ್… ತಡೆಯುತ್ತಾರಾ ಅಂತರಪಟ ಜೋಡಿ
Bhargavi LLB Serial: ಭಾರ್ಗವಿಯನ್ನು ಮದುವೆಯಾಗಲು ಬಂದ ಅಶೋಕ್… ತಡೆಯುತ್ತಾರಾ ಅಂತರಪಟ ಜೋಡಿ
ಭಾರ್ಗವಿ LLB ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬಂದಿದೆ. ಅಷ್ಟೇ ಅಲ್ಲ ಸೀರಿಯಲ್ ಗೆ ಹೊಸ ಪಾತ್ರಗಳು ಸಹ ಎಂಟ್ರಿ ಕೊಟ್ಟಿದ್ದು, ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದೆ.

ಕಲರ್ಸ್ ಕನ್ನಡದ (Colors Kannada) ಜನಪ್ರಿಯ ಧಾರಾವಾಹಿ ಭಾರ್ಗವಿ LLB ಕಥೆಯಲ್ಲಿ ಇದೀಗ ಹೊಸ ಹೊಸ ಟ್ವಿಸ್ಟ್ ಬಂದಿದೆ. ಅಷ್ಟೇ ಅಲ್ಲ ಇಲ್ಲಿವರೆಗೆ ಇಲ್ಲದೇ ಇದ್ದ ಹೊಸ ಕ್ಯಾರೆಕ್ಟರ್ ಗಳ ಎಂಟ್ರಿ ಕೂಡ ಆಗಿದೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಸದ್ದು ಮಾಡಿದ್ದ ಮುದ್ದಾದ ಜೋಡಿ ಕೂಡ ಎಂಟ್ರಿಯಾಗಿದ್ದಾರೆ. ಹಾಗಿದ್ರೆ ಇನ್ನು ಮುಂದೆ ಏನೇನು ನಡೆಯುತ್ತೆ ಸೀರಿಯಲ್ ನಲ್ಲಿ.
ಭಾರ್ಗವಿ LLBಯಲ್ಲಿ (Bhargavi LLB) ಸದ್ಯಕ್ಕೆ ಕಥೆಯ ಪ್ರಕಾರ ಭಾರ್ಗವಿ ತಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರಿಗೆ ಆಪರೇಶನ್ ಮಾಡಿಸಲು ಅರ್ಜುನ್ ಹತ್ತು ಲಕ್ಷ ಕೊಟ್ಟು ನೆರವಾಗಿದ್ದಾನೆ. ಸದ್ಯ ಚಿಕಿತ್ಸೆ ಮಾಡಿಸಿಕೊಳ್ಳಿ, ಬಳಿಕ ಹಣ ಎಲ್ಲಿಂದ ಬಂತು ಅನ್ನೋದನ್ನು ಚರ್ಚಿಸೋಣ ಅಂತಾನೂ ಹೇಳಿದ್ದಾನೆ.
ಭಾರ್ಗವಿ ಯಾರೆಂದು ತಿಳಿಯದೇ ಇದ್ದಾಗಲೇ ಆಕೆಯ ಧೈರ್ಯವನ್ನು ಮೆಚ್ಚಿ ಮೊದಲ ನೋಟದಲ್ಲೇ ಆಕೆಯ ಪ್ರೀತಿಯಲ್ಲಿ ಬಿದ್ದ ಅರ್ಜುನ್. ತನ್ನ ಪ್ರೀತಿ ಹೇಳಿಕೊಂಡು ಬಂದಾಗ ಭಾರ್ಗವಿ ಅದನ್ನು ತಿರಸ್ಕರಿಸಿದ್ದಳು. ಆದರೆ ಅರ್ಜುನ್ ನ ಒಂದೊಂದೇ ಗುಣಗಳಿಗೆ ಭಾರ್ಗವಿ ಸೋಲುತ್ತಿರುವುದು ಸುಳ್ಳಲ್ಲ. ಎಲ್ಲಾ ಕಷ್ಟ ಕಾಲದಲ್ಲೂ ಅರ್ಜುನ್ ಭಾರ್ಗವಿಗೆ ನೆರವಾಗಿದ್ದ.
ಇದೀಗ ಹೊಸದಾಗಿ ಬಿಡುಗಡೆಯಾದ ಪ್ರೊಮೋದಲ್ಲಿ ತಿಳಿಸಿದಂತೆ ಒಂದು ಕಡೆ ಭಾರ್ಗವಿಯನ್ನು ನೋಡಲು ಹುಡುಗನ ಕಡೆಯವರು ಬಂದಿದ್ದಾರೆ. ಮತ್ತೊಂದು ಕಡೆ ಅರ್ಜುನ್ ಗೆ ಇಷ್ಟವಿಲ್ಲದೇ ಇದ್ದರೂ ಸಹ ಆತನ ಎಂಗೇಜ್ ಮೆಂಟ್ ಕೂಡ ನಡೆಯುತ್ತಿದೆ. ಆದರೆ ಎರಡೂ ಕಡೆ ವಿಶೇಷ ಅತಿಥಿಗಳ ಎಂಟ್ರಿಯಾಗಿದೆ.
ಒಂದು ಕಡೆ ಭಾರ್ಗವಿಯನ್ನು ಮದುವೆಯಾಗಲು ಸೀತಾ ರಾಮ ಧಾರಾವಾಹಿಯ (Seeta Rama Serial) ಅಶೋಕ್ ಅವರ ಎಂಟ್ರಿಯಾಗಿದೆ. ಮತ್ತೊಂದು ಕಡೆ ಅರ್ಜುನ್ ಎಂಗೇಜ್ ಮೆಂಟ್ ಅರೇಂಜ್ ಮೆಂಟ್ ಗೆ ಅಂತರಪಟ (Antarapata) ಧಾರಾವಾಹಿಯ ಆರಾಧನಾ ಹಾಗೂ ಸುಶಾಂತ್ ರಾಜ್ ಎಂಟ್ರಿಯಾಗಿದೆ. ಇವರನ್ನೆಲ್ಲಾ ಮತ್ತೆ ತೆರೆಮೇಲೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಇನ್ನು ಟ್ವಿಸ್ಟ್ ಏನೆಂದರೆ, ಒಂದು ಕಡೆ ಆರಾಧನಾ ಭಾರ್ಗವಿಗೆ ಫೋನ್ ಮಾಡಿ ಆಕೆಯ ಅರ್ಜುನ್ ಮೇಲಿನ ಪ್ರೀತಿಯನ್ನು ಮನವರಿಕೆ ಮಾಡಿಸುತ್ತಿದ್ದಾಳೆ. ಇನ್ನೊಂದು ಕಡೆ ಸುಶಾಂತ್ ಅರ್ಜುನ್ ಗೆ ಪ್ರೀತಿಯನ್ನು ಉಳಿಸಿಕೊಳ್ಳುವಂತೆ ಕೇಳುತ್ತಿದ್ದಾನೆ. ಅರ್ಜುನ್ ಮತ್ತು ಭಾರ್ಗವಿ ಮನಸು ಬದಲಾಯಿಸುತ್ತಾರೋ? ಮನೆಯವರ ಒತ್ತಾಯಕ್ಕೆ ಗಂಟು ಬೀಳುತ್ತಾರೋ ಕಾದು ನೋಡಬೇಕು.